# ಪಾರಿವಾಳದ ಜಗತ್ತು ಗಮನಿಸಿ #
ಶಾಲೆಗೆ ಹೋಗುವ ದಿನದಲ್ಲಿ ಪಾರಿವಾಳ ಸಾಕುವ ಹುಚ್ಚು ಈಗಿನ ಹಾಗೆ ಸಾಕು ಪಾರಿವಾಳ ಮಾರಾಟಕ್ಕೆ ನಮ್ಮ ಹಳ್ಳಿ ಕಡೆ ಸಿಗುತ್ತಿರಲಿಲ್ಲ ಹಾಗಾಗಿ ಕಾಡಿನ ಪಾರಿವಾಳ ಹಿಡಿಯಲು ನಾವೆಲ್ಲ ಗೆಳೆಯರು ಒದ್ದಾಡುತ್ತಿದ್ದು ನೆನಪಾಗಿ ನಗು ಬರುತ್ತೆ.
ಇತ್ತೀಚಿಗೆ FB ಗೆಳೆಯರಾದ ರೇವಣ ಸಿದ್ದಯ್ಯ ಎಂಬುವವರು ಪಾರಿವಾಳಗಳು ಬರದಂತೆ ತಡೆಯುವುದು ಹೇಗೆ ಎಂಬ post ಹಾಕಿದ್ದರು ಅದಕ್ಕೆ ಬಂದ ಉತ್ತರ ನೋಡುತ್ತಿದ್ದೆ ಆದರೆ ಅವು ಯಾವುದೂ ವಾಸ್ತವ ಉಪ ಶಮನ ಆಗಿರಲಿಲ್ಲ ನನ್ನ ಉತ್ತರ ನೋಡಿ ತುಂಬಾ ಸಂತೋಷ ಆಯಿತು ಅಂತ ಉತ್ತರಿಸಿದರು.
1989 ರಲ್ಲಿ ರೈಸ್ ಮಿಲ್ ಕಟ್ಟಿದಾಗ ಅದರ ಗೋಡೆ 20 ಅಡಿ ಎತ್ತರ ಇತ್ತು ಅಲ್ಲಿ ಪಾರಿವಾಳಗಳು ನೂರಾರು ಗೂಡು ಮಾಡಿಕೊಂಡವು ಆದರೆ ಆ ಗೂಡಿಗೆ ಬೆಕ್ಕು, ಕಾಗೆ, ಹಾವು ತಲುಪದಂತ ಪ್ರದೇಶ ಆಗಿತ್ತು, ಬಾಯಿಗೆ ಎಟುಕದ ದ್ರಾಕ್ಷಿ ಹುಳಿ ಎಂಬಂತೆ ಬೆಕ್ಕುಗಳ ರೋದನ ಮತ್ತು ಪಾರಿವಾಳದ ಗೂಡು ತಲುಪಿ ಮೊಟ್ಟೆ ತಿನ್ನುವ ಸಾಹಸದಿಂದ ಹಾವುಗಳು ಕಟ್ಟಡದ ಸುತ್ತು ಸುಳಿಯುತ್ತಿದ್ದವು.
2018 ರಲ್ಲಿ ರೈಸ್ ಮಿಲ್ ಕಟ್ಟಡ ತೆಗೆದು ಹೊಸ ಲಾಡ್ಜ ಕಟ್ಟಲು ಯೋಜನೆ ಮಾಡಿ ಕಟ್ಟಡ ತೆಗೆಯುವ ಕೆಲಸ ಪ್ರಾರಂಬಿಸಿದಾಗ ಪಾರಿವಾಳಗಳು 30 ವಷ೯ದಲ್ಲಿ ನಿಮಿ೯ಸಿಕೊಂಡ ಗೂಡು ಸುಮಾರು 200 ಅಡಿ ಇತ್ತು, ಆದರಲ್ಲಿ ಅವುಗಳ ಮರಿಗಳಿಗಾಗಿ ಮಾಡಿಕೊಂಡ ಬೆಚ್ಚನೆ ತಡಿಗಳು ಕೇಳಿದರೆ ಗಾಭರಿ ಆದೀತು, ಹಾವಿನ ಪೊರೆ, ಬೈಂಡಿOಗ್ ತಂತಿಗಳು, 2006ರಲ್ಲಿ ರದ್ದಾದ ಸರಾಯಿ ಖಾಲಿ ಪ್ಯಾಕೆಟ್ಗಳು, ಬೀಡಿ ಪ್ಯಾಕೆಟಗಳು.
ಸದರಿ ಕಟ್ಟಡ ತೆರವು ಮಾಡಿದ ನಂತರ ಪಾರಿವಾಳಗಳು ಹಳೆ ಲಾಡ್ಜನ ಚಾವಣಿ ಮೇಲೆ ಒಟ್ಟಾಗಿ ಕುಳಿತು ಕೊಳ್ಳಲು ಶುರು ಮಾಡಿದವು ಆದರೆ ನೂತನ ಕಾಂಕ್ರಿಟ್ ಕಟ್ಟಡದಲ್ಲಿ ಗೂಡು ನಿಮಿ೯ಸುವ ಅವಕಾಶ ಸಿಗಲಿಲ್ಲ, ನನಗೂ ಪಾಪ ಪ್ರಜ್ನೆ ಆದರೆ ಬದುಕಿನ ಅನಿವಾಯ೯.
ನೂರಾರು ಕುಟುಂಬದ ಪುನವ೯ಸತಿ ಗಮನಿಸುತ್ತಿದ್ದೆ, ಅನೇಕ ಕುಟುಂಬ ಬೇರೆಲ್ಲೊ ನೆಲೆಸಿದರೂ ನಿತ್ಯ ತಮ್ಮ ಹಳೆ ಜಾಗದಲ್ಲಿ ಬಂದು ಬಂದು ಬಾಂದವರ ಯೋಗಕ್ಷೇಮ ವಿಚಾರಿಸುತ್ತಿದ್ದವು, ಉಳಿದ ಕೆಲ ಕುಟುಂಬ ನನ್ನ ಮತ್ತು ನನ್ನ ಅಣ್ಣನ ಮನೆಯ ಬಿಸಿಲ ಮಚ್ಚೆಯಲ್ಲಿ ಠಿಕಾಣಿ ಶುರು ಮಾಡಿದವು, ಒಂದೆರಡು ದಿನದಲ್ಲಿ ಅಲ್ಲಿ ನರಕ ಸೃಷ್ಠಿ ಆಯಿತು, ಅಸಾಧ್ಯ ವಾಸನೆ, ಅಲ್ಲಿ ಪ್ರವೇಶವೇ ಸಾಧ್ಯವಿಲ್ಲ ಅನ್ನಿಸಿತ್ತು.
ಆಗಲೇ ನನಗೆ ಪಾರಿವಾಳದ ಜಗತ್ತಿನ ಬಗ್ಗೆ ತಿಳಿಯಲು ಪ್ರಯತ್ನಿಸಿದೆ.
ಕುಬೂತರು ಆ ಆ ಹಾಡು ಕೇಳಲು ಇಂಪು ಆದರೆ ಬಂದು ನೆಲೆ ನಿಂತ ಈ ವೈಲ್ಡ್ ಪಾರಿವಾಳ ?.
ಪಾರಿವಾಳಗಳಿ೦ದ ಶಾಶ್ವತ ಪರಿಹಾರ ಅಹಿಂಸಾ ರೀತಿ ಪರಿಶೀಲಿಸಿದಾಗ ಅನೇಕ ಮಾಗ೯ಗಳ ಗೆಳೆಯರಿಂದ ಪಡೆದೆ ಆದರೆ ಅವುಗಳಲ್ಲಿ ಅನೇಕವು ವಾಸ್ತವವಾಗಿ ಅಸಾಧ್ಯವಾಗಿತ್ತು ಆದರೆ ಪ್ರಕೃತಿ ಸಹಜವಾದ ಸರಳವಾದ ಉಪಾಯಗಳಿಂದ ಪಾರಿವಾಳ ನನ್ನ ವಾಸದ ಮನೆ ತೊರೆದವು.
ಯಾವುದೇ ಚಲನೆಯ ವಸ್ತು ಮತ್ತು ಶಬ್ದ ಪಾರಿವಾಳಗಳಗಳನ್ನ ದೂರಿಕರಿಸ ಬಹುದಾದ ಸರ೪ ಉಪಾಯ, ಗಂಟೆ, ಗೆಜ್ಜೆ ಶಬ್ದ, ಪತಾಕೆಗಳು, ಜೂಲದಂತ, ಜೋಕಾಲೆಯಂತ ಪೀಟೋಪಕರಣ, ವಿಂಡ್ ಚ್ಯಿಮ್ಗಳು ಪಾರಿವಾಳಕ್ಕೆ ಅಸಹನೀಯ.
ಇದನ್ನ ತಿಳಿಯಲು ಹೊರಟಾಗ ಸಿಕ್ಕ ಮಾಹಿತಿ ಕೂಡ ಆಮೂಲ್ಯ ಪಾರಿವಾಳವನ್ನ 1000 ಕಿ.ಮಿ.ದೂರ ಒಯ್ದು ಅಲ್ಲಿಂದ ಬಿಡುಗಡೆ ಮಾಡಿದರೆ ಅದರ ಮೂಲ ಸ್ಥಳಕ್ಕೆ ವಾಪಾಸಾಗುವ೦ತ ಮ್ಯಾಪ್ ಮತ್ತು ಕಂಪಾಸ್ ಗಳ ಜ್ಞಾನ ಅವುಗಳಲ್ಲಿದೆ, ಹಾಗಾಗಿ ಇವುಗಳನ್ನ ಸಂದೇಶ ರವಾನೆಗಾಗಿ ಬಳಸುತ್ತಿದ್ದರು.
250 ರೂಪಾಯಿ0ದ 20 ಸಾವಿರ ತನಕ ಪಾರಿವಾಳದ ಬೆಲೆ ಇದೆ.
ಪಾರಿವಾಳ ರಾಜರ ಕಾಲದಲ್ಲಿ ಅಂಚೆ ಸಂದೇಶಕ್ಕೆ ಬಳಕೆ ಆಗುತ್ತಿತ್ತು, ಶ್ರೀರಂಗ ಪಟ್ಟಣದ ಟಿಪ್ಪು ಬೇಸಿಗೆ ಆರಮನೆ ಸಮೀಪ ಬೃಹತ್ ಗಾತ್ರದ ಪಾರಿವಾಳಗಳ ಗೂಡಿನ ಸಂಕೀಣ೯ ನೋಡ ಬಹುದು.
ಈಗ ಪಾರಿವಾಳಗಳ ಹಾರಲು ಬಿಟ್ಟು ಬೆಟ್ ಕಟ್ಟುವ ಜುಗಾರಿ ಪ್ರಸಿದ್ದವಾಗಿದೆ.
.
Comments
Post a Comment