# ಗೋವಾ ಕ್ಯಾಸಿನೋ ರದ್ದು ಮಾಡುತ್ತೇನೆ ಎಂದಿದ್ದ ಪರಿಕರ್ ಕ್ಯಾಸಿನೋ ಬೆಂಬಲಿಸುತ್ತಿದ್ದಾರೆ ಏಕೆ?#
ಗೋವಾ ಸಕಾ೯ರ ಸಮುದ್ರದಲ್ಲಿನ ಹಡಗುಗಳಲ್ಲಿ 24 ಗಂಟೆ ನಡೆಯುವ ಜುಗಾರಿ ಅಡ್ಡ (ಕ್ಯಾಸಿನೊ ಎಂಬ ಪಾಲಿಶ್ ಡ್ ಹೆಸರು ಇದೆ) ಮುಂದಿನ ನವೆಂಬರ್ ತಿಂಗಳ ತನಕ ಮುಂದುವರಿಸಲು ತೀಮಾನಿಸಿದ್ದು ಗೋವಾದಲ್ಲಿ ಬಹು ಚಚಿ೯ತ ಸುದ್ದಿ.
2012ರಲ್ಲಿ ತಾನು ಅಧಿಕಾರಕ್ಕೆ ಬಂದರೆ ಗೋವಾ ಕ್ಯಾಸಿನೋ ರಹಿತ ಎಂದು ಅನೇಕ ಪ್ರವಾಸೋದ್ಯಮದ ರೂಪುರೇಷೆ ಜನತೆಯ ಮುಂದಿಟ್ಟು ಅಧಿಕಾರ ಪಡೆದು ಮುಖ್ಯಮಂತ್ರಿ ಆದರು, ನಂತರ 2015ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ರಕ್ಷಣಾ ಸಚಿವರಾದರು ಪುನಃ ಗೋವಾ ವಿದಾನ ಸಭಾ ಚುನಾವಣೆಯಲ್ಲಿ ಅಲ್ಪ ಬಹುಮತ ಸಕಾ೯ರ ರಚಿಸಿ ಪುನಃ ಮುಖ್ಯಮಂತ್ರಿ ಆದರೂ ಜುಗಾರಿ ಅಡ್ಡ ರದ್ದಾಗುವುದಿರಲಿ ಮಾಂಡವಿ ನದಿ ದಂಡೆ ಪೂಣ೯ ಗ್ಯಾ೦ಬ್ ಲಿಂಗ್ ಕಾಂಪ್ಲೆಕ್ಸ್ ಆಗಿ ಪರಿವತ೯ನೆ ಆಗಿದೆ.
ಒಂದು ವಿಶೇಷ ಅಂದರೆ ಹೆಚ್ಚಿನ ಕ್ಯಾಸಿನೋಗಳ ಪಾಲುದಾರರು ಕನಾ೯ಟಕದವರು, ಜುಗಾರಿ ಆಡುವ ಪಂಟರುಗಳಲ್ಲೂ ಕನ್ನಡಿಗರದ್ದು ದೊಡ್ಡ ಸಂಖ್ಯೆ ಅಂತ ತಿಳಿದು ಆಶ್ಚಯ೯ ಆಯಿತು.
ಪ್ರವೇಶ ಶುಲ್ಕವೇ 2500,ವಾರOತ್ಯದಲ್ಲಿ, ರಜಾದಿನದಲ್ಲಿ ಬರುವವರು ಇನ್ನೂ ಹೆಚ್ಚು.
ಹೈ ಪೈ ಜನರೇ ಬರುವವರಾದ್ದರಿಂದ ಗೋವಾದ ಸ್ಟಾರ್ ಕೆಟಗರಿ ಹೋಟೆಲ್, ಲಾಡ್ಜಗಳಿಗೆ ಭರಪೂರ ವ್ಯಾಪಾರ, ಬರುವ ಹೋಗುವ ವಿಮಾನಗಳಲ್ಲೂ ಇವರೇ ಹೆಚ್ಚು ಇದರಿಂದ ಗೋವಾ ರಾಜ್ಯದ ಪ್ರವಾಸೋದ್ಯಮ ಡಿಸೆಂಬರ್ ಮತ್ತು ಜನವರಿ ತಿಂಗಳ ಕ್ರಿಸ್ಮಮಸ್ ಮತ್ತು ನ್ಯೂ ಇಯರ್ ಗೆ ಮಾತ್ರ ಸೀಮಿತ ಆಗಿದ್ದು ಈಗ ವಷ೯ ಪೂತಿ೯ ಭರಪೂರ್ ಆಗಿದೆ.
ನಮ್ಮ ರಾಜ್ಯದಲ್ಲಿ ಸಣ್ಣ ಪ್ರಮಾಣದ ಮಟ್ಕಾ, ಇಸ್ಪೀಟು ರದ್ದು ಮಾಡೋದು ಮತ್ತೆ ಗುಪ್ತವಾಗಿ ನಡೆಸೋದು ಇದರಲ್ಲೇ ಇದ್ದೇವೆ ಆದರೆ ಪಕ್ಕದ ರಾಜ್ಯದಲ್ಲಿ ಕ್ಯಾಸಿನೋಗಳನ್ನ ಸಕಾ೯ರವೇ ಆದಿಕೃತಗೊಳಿಸಿ ಸಕಾ೯ರಕ್ಕೆ ಮತ್ತು ಪ್ರವಾಸೋದ್ಯಮಕ್ಕೆ ಆದಾಯ ಮಾಡಿಕೊಂಡಿದೆ.
ನಮ್ಮ ರಾಜ್ಯ ಗೋವಾಕ್ಕಿ೦ತ ಹೆಚ್ಚು ಉದ್ದದ ಸಮುದ್ರ ತೀರ ಹೊಂದಿದೆ, ಪ್ರೇಕ್ಷಣಿಯ ಸ್ಥಳಗಳಿದೆ ಹಾಗಾಗಿ ರಾಜ್ಯ ಸಕಾ೯ರ ಈ ಬಗ್ಗೆ ಗಮನ ಹರಿಸ ಬಾರದೇಕೆ?
ಇದಕ್ಕೆ ಕೆಲವರು ವಿರೋಧವಾಗಿ ಪ್ರತಿಕ್ರಿಯಿಸ ಬಹುದು ಆದರೆ ಇದು ಶ್ರೀಮಂತ ವಿಲಾಸಿ ಜನರ ಆಟ ಯಾವುದೇ ಬಡವ ಇಲ್ಲಿ ಹೋಗಿ ಕಳೆದುಕೊಂಡು ಬರುವುದಿಲ್ಲ, ಗೋದಲ್ಲಿ ಕ್ಯಾಸಿನೋ ಇಲ್ಲದಿದ್ದರೆ ನೇಪಾಳದಲ್ಲಿ, ಸಿಂಗಾಪುರದಲ್ಲಿ ಇದ್ದೇ ಇದೆ ಅಲ್ಲಿಗೆ ಹೋಗುತ್ತಾರೆ, ಅನೇಕರಿಗೆ ಉದ್ಯೋಗ ನೀಡುವ ಇಲ್ಲಿ ಜಗಳ, ದೊoಬಿ ಅಥವ ದರೋಡೆ ಇಲ್ಲ!
ಹಾಗಾಗಿ ಗೋವಾ ಮುಖ್ಯ ಮಂತ್ರಿ ಪರಿಕರ್ ತಮ್ಮ ನಿಲವು ಬದಲಿಸಿರಬೇಕಲ್ಲವೆ?
Comments
Post a Comment