#ಮುರುಗನಹುಳಿ ಅಡುಗೆ ಮನೆಯಿ೦ದ ಈಗ ಏನೆಲ್ಲ ಬಳಕೆಗೆ ಗೊತ್ತಾ?#
ಮೊನ್ನೆ ಕಾರವಾರದ ಪೋಲಿಸ್ ಠಾಣೆ ರಸ್ತೆಗೆ ಹೋಗಿದ್ದೆ, ಈ ಮಾಗ೯ದಲ್ಲಿ ಹೋಗುವಾಗ ಇಲ್ಲಿನ ಬೇಟಿ ಖಾಯಂ ಏಕೆಂದರೆ ಇಲ್ಲಿ ಪಶ್ಚಿಮ ಘಟ್ಟದ ಅನೇಕ ಅಪರೂಪದ ಹಣ್ಣು, ಜಾಷದಿಗಳು, ಕಾಳು ಕಡಿ, ದೇಸಿ ತರಕಾರಿಗಳು ಮಾರಾಟಕ್ಕೆ ಸ್ಥಳಿಯ ಮಹಿಳೆಯರು ತಂದಿರುತ್ತಾರೆ, ಇದೇ ರೀತಿ ಅಂಕೋಲ, ಕುಮಟ ಮತ್ತು ಹೊನ್ನವರಗಳಲ್ಲೂ ನಿಧಿ೯ಷ್ಟ ಸ್ಥಳ ಮತ್ತು ಸಮಯದಲ್ಲಿ ಹಾಲಕ್ಕಿ ಮಹಿಳೆಯರು ಹಾಜರಿರುತ್ತಾರೆ.
ಮೊನ್ನೆ ಕಾರವಾರದಲ್ಲಿ ಜುಮ್ಮನಕಾಯಿ, ಬಿಡಿಸಿದ ಹಸಿ ಗೋಡOಬಿ ಬೀಜಗಳು, ನಾಟಿ ಹರಿವೆ ಸೊಪ್ಪಿನ ದಂಟುಗಳು, ಉಪ್ಪಿನ ಮಾವಿನ ಹುಳಿ, ವಿವಿದ ತಳಿಯ ಮಾವಿನ ಮಿಡಿ ಇವುಗಳ ಮಧ್ಯ ಮುರುಗನ ಹುಳಿ ಹಣ್ಣು ರಾರಾಜಿಸುತ್ತಿತ್ತು.
ಗೋವಾದಲ್ಲಿ ಕೋಕಂ, ದಕ್ಷಿಣ ಕನ್ನಡದಲ್ಲಿ ಪುನರ್ ಪುಳಿ, ಕೇರಳದಲ್ಲಿಮಲಬಾರ್ ಹುಣಸೆ ಅನ್ನುವ ಇದನ್ನ ಇಂಗ್ಲೀಷ್ನಲ್ಲಿ GARCINIA INDICA ಎನ್ನುತ್ತಾರೆ.
ಕೋಕಂ ಜೂಸ್, ಸೋಲ ಕಡಿ, ಮೀನು ಸಾರಿಗೆ ಇದನ್ನ ಹೆಚ್ಚು ಬಳಸುತ್ತಾರೆ ಆದರೆ ಪಶ್ಚಿಮ ಘಟ್ಟದ 7 ತಳಿಗಳು ಈಗ ವಿಶ್ವದಾದ್ಯಂತ ದೇಹ ಸೌಂದಯ೯ ವೃದ್ಧಿಗಾಗಿ, ತೂಕ ನಿಯಂತ್ರಿಸಲು ಹೆಚ್ಚು ಬಳಕೆ ಆಗುತ್ತಿದೆ.
ಅಂಕೋಲದ ಬಾಳೆಗುಳಿ ಕತ್ರಿಯಲ್ಲಿ ಮಿತ್ರ M.R.ಶೆಟ್ಟರ ಗಣ್ಯ ಕೆಮಿಕಲ್ಸ್ ನಲ್ಲಿ ಈ ಹಣ್ಣಿನಿಂದ ಬಿಳಿಯ ಬಣ್ಣದ Garcinia ಪೌಡರ್ ತಯಾರಾಗಿ ವಿದೇಶಕ್ಕೆ ರಪ್ತಾಗುತ್ತದೆ.
ಅಷ್ಟೆ ಏಕೆ ನೀವು ಮಧ್ಯ ಪಾನ ಪ್ರಿಯರಾಗಿದ್ದರೆ ಡಯಟ್ ಮ್ಯಾಕ್ಡೊವೆಲ್ ವಿಸ್ಕಿ ಖರೀದಿಸಿದರೆ ಅದರಲ್ಲಿ ನಮ್ಮ ಪಶ್ಚಿಮ ಘಟ್ಟದ ಮುರುಗನ ಹುಳಿಯ ಸಾರಂಶ ಮಿಶ್ರವಾಗಿರುತ್ತದೆ, ಇದು ತೂಕ ನಿಯ೦ತ್ರಣ ಮತ್ತು ಡಯಾಬಿಟಿಕ್ ನಿಯಂತ್ರಣ ಮಾಡುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...
Comments
Post a Comment