Skip to main content

Posts

Showing posts with the label 1957 assembly election results that defeats Shanthaveri Gopala gowda by A.R.Badarinarayana Iyengar

Blog number 2068. ಈ ಬಾರಿಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ 1957ರ ವಿದಾನ ಸಭಾ ಚುನಾವಣೆಯಲ್ಲಿ ಶಾಂತವೇರಿ ಗೋಪಾಲಗೌಡರಿಗೆ ಮೊದಲ ಸೋಲು ಮತ್ತು ಎ.ಆರ್. ಬದರಿನಾರಾಯಣ ಅಯ್ಯಂಗಾರರಿಗೆ ಮೊದಲ ಗೆಲುವು ಆಗಿದ್ದ ಚುನಾವಣೆಯ ನೆನಪುಗಳು.

#ಹೋರಾಟಗಾರ_ಅಭಿವೃದ್ದಿ_ಹರಿಕಾರನನ್ನೆ_ಸೋಲಿಸಿದ_ಚುನಾವಣೆ #ದ್ವಿತೀಯ_ಮಹಾ_ಚುನಾವಣೆ_1957. #ಶಾ೦ತವೇರಿ_ಗೋಪಾಲ_ಗೌಡರ_ಸೋಲು #ಆನಂದಪುರದ_ಕಾಂಗ್ರೇಸ್_ಅಭ್ಯಥಿ೯_ಬದರಿನಾರಾಯಣ_ಅಯ್ಯಂಗಾರರ_ಗೆಲುವು. #ಕೊಡಸೆಯ_ಮದಲೆ_ಚೌಡಿ_ಹಬ್ಬದ_ಬಾಡೂಟದಲ್ಲಿ #ಧರ್ಮಸ್ಥಳದ_ಆಣೆ_ಪ್ರಮಾಣ_ಶಾಂತವೇರಿ_ಗೋಪಾಲಗೌಡರ_ಸೋಲಿಗೆ_ಕಾರಣ   ಚುನಾವಣೆ ಸ್ಪರ್ಧೆಯಲ್ಲಿ ಗೆಲ್ಲುವವರು ಒಬ್ಬರೇ ಆದರೂ ಅದಕ್ಕೆ ಪೂರಕವಾದ ನೂರಾರು ಕಾರಣಗಳು ಕೆಲಸ ಮಾಡಿರುತ್ತದೆ.    1952ರ ಸ್ವಾತಂತ್ರ್ಯ ನಂತರದ ಮೊದಲ ಮಹಾ ಚುನಾವಣೆಯಲ್ಲಿ ಶಾಂತವೇರಿ ಗೋಪಾಲಗೌಡರು ಕಾಂಗ್ರೇಸ್ ನ ಬದರಿನಾರಾಯಣ ಅಯ್ಯಂಗಾರ್ ರನ್ನು ಸೋಲಿಸಿ ಸಮಾಜವಾದಿ ಪಕ್ಷದ ಶಾಸಕರಾಗುತ್ತಾರೆ. 1957 ರ ದ್ವಿತೀಯ ಮಹಾ ಚುನಾವಣೆಯಲ್ಲಿ ಪುನಃ ಸಾಗರ - ಹೊಸನಗರ- ತೀಥ೯ಹಳ್ಳಿ ಕ್ಷೇತ್ರದಿಂದ ಸೋಷಲಿಸ್ಟ್ ಪಾಟಿ೯ಯಿಂದ ಶಾಂತವೇರಿ ಗೋಪಾಲಗೌಡರು ವಿದಾನ ಸಭೆಗೆ ಸ್ಪರ್ದಿಸುತ್ತಾರೆ.   ಪ್ರತಿಸ್ಪದಿ೯ಯಾಗಿ ಪುನಃ ಕಾಂಗ್ರೇಸ್ ನಿಂದ ಆನಂದಪುರದ ಎ.ಆರ್. ಬದರಿನಾರಾಯಣ ಅಯ್ಯಂಗಾರರು ಸ್ಪರ್ಧಿಸುತ್ತಾರೆ.   ಭೂ ಮಾಲಿಕರುಗಳೆಲ್ಲ ಸಂಘಟಿತರಾಗಿರುತ್ತಾರೆ, ಚುನಾವಣೆಗೆ ಬೇಕಾದ ಸಂಪನ್ಮೂಲ ಸಂಗ್ರಹಿಸಿರುತ್ತಾರೆ ಈ ಮೂಲಕ ಒಗ್ಗಟ್ಟಿನಿಂದ ಗೇಣಿದಾರರಾದ ದೀವರ ಮತ ವಿಭಜನೆ ಮಾಡುತ್ತಾರೆ.   ಇದಕ್ಕೆ ವಾಮ ಮಾರ್ಗವೂ ಬಳಸುತ್ತಾರೆ ಹೊಸನಗರ ತಾಲ್ಲೂಕಿನ ಕೊಡಸೆಯ ದೀವರ ನಾಯಕರ ಮನೆಯ ಮದಲೆ ಚೌಡಿ ಹಬ್...