Blog number 2068. ಈ ಬಾರಿಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ 1957ರ ವಿದಾನ ಸಭಾ ಚುನಾವಣೆಯಲ್ಲಿ ಶಾಂತವೇರಿ ಗೋಪಾಲಗೌಡರಿಗೆ ಮೊದಲ ಸೋಲು ಮತ್ತು ಎ.ಆರ್. ಬದರಿನಾರಾಯಣ ಅಯ್ಯಂಗಾರರಿಗೆ ಮೊದಲ ಗೆಲುವು ಆಗಿದ್ದ ಚುನಾವಣೆಯ ನೆನಪುಗಳು.
#ಹೋರಾಟಗಾರ_ಅಭಿವೃದ್ದಿ_ಹರಿಕಾರನನ್ನೆ_ಸೋಲಿಸಿದ_ಚುನಾವಣೆ
#ದ್ವಿತೀಯ_ಮಹಾ_ಚುನಾವಣೆ_1957.
#ಶಾ೦ತವೇರಿ_ಗೋಪಾಲ_ಗೌಡರ_ಸೋಲು
#ಆನಂದಪುರದ_ಕಾಂಗ್ರೇಸ್_ಅಭ್ಯಥಿ೯_ಬದರಿನಾರಾಯಣ_ಅಯ್ಯಂಗಾರರ_ಗೆಲುವು.
#ಕೊಡಸೆಯ_ಮದಲೆ_ಚೌಡಿ_ಹಬ್ಬದ_ಬಾಡೂಟದಲ್ಲಿ
#ಧರ್ಮಸ್ಥಳದ_ಆಣೆ_ಪ್ರಮಾಣ_ಶಾಂತವೇರಿ_ಗೋಪಾಲಗೌಡರ_ಸೋಲಿಗೆ_ಕಾರಣ
ಚುನಾವಣೆ ಸ್ಪರ್ಧೆಯಲ್ಲಿ ಗೆಲ್ಲುವವರು ಒಬ್ಬರೇ ಆದರೂ ಅದಕ್ಕೆ ಪೂರಕವಾದ ನೂರಾರು ಕಾರಣಗಳು ಕೆಲಸ ಮಾಡಿರುತ್ತದೆ.
1952ರ ಸ್ವಾತಂತ್ರ್ಯ ನಂತರದ ಮೊದಲ ಮಹಾ ಚುನಾವಣೆಯಲ್ಲಿ ಶಾಂತವೇರಿ ಗೋಪಾಲಗೌಡರು ಕಾಂಗ್ರೇಸ್ ನ ಬದರಿನಾರಾಯಣ ಅಯ್ಯಂಗಾರ್ ರನ್ನು ಸೋಲಿಸಿ ಸಮಾಜವಾದಿ ಪಕ್ಷದ ಶಾಸಕರಾಗುತ್ತಾರೆ.
1957 ರ ದ್ವಿತೀಯ ಮಹಾ ಚುನಾವಣೆಯಲ್ಲಿ ಪುನಃ ಸಾಗರ - ಹೊಸನಗರ- ತೀಥ೯ಹಳ್ಳಿ ಕ್ಷೇತ್ರದಿಂದ ಸೋಷಲಿಸ್ಟ್ ಪಾಟಿ೯ಯಿಂದ ಶಾಂತವೇರಿ ಗೋಪಾಲಗೌಡರು ವಿದಾನ ಸಭೆಗೆ ಸ್ಪರ್ದಿಸುತ್ತಾರೆ.
ಭೂ ಮಾಲಿಕರುಗಳೆಲ್ಲ ಸಂಘಟಿತರಾಗಿರುತ್ತಾರೆ, ಚುನಾವಣೆಗೆ ಬೇಕಾದ ಸಂಪನ್ಮೂಲ ಸಂಗ್ರಹಿಸಿರುತ್ತಾರೆ ಈ ಮೂಲಕ ಒಗ್ಗಟ್ಟಿನಿಂದ ಗೇಣಿದಾರರಾದ ದೀವರ ಮತ ವಿಭಜನೆ ಮಾಡುತ್ತಾರೆ.
ಇದಕ್ಕೆ ವಾಮ ಮಾರ್ಗವೂ ಬಳಸುತ್ತಾರೆ ಹೊಸನಗರ ತಾಲ್ಲೂಕಿನ ಕೊಡಸೆಯ ದೀವರ ನಾಯಕರ ಮನೆಯ ಮದಲೆ ಚೌಡಿ ಹಬ್ಬ ಇದಕ್ಕೆ ವೇದಿಕೆ ಆಗಿ ಬಳಸಿಕೊಳ್ಳುತ್ತಾರೆ 50 ರಿಂದ 70 ಕುರಿಗಳ ಬಾಡು ಊಟದ ಔತಣ ಕೂಟದಲ್ಲಿ ನೂರಾರು ದೀವರ ಮುಖಂಡರು ಮತ್ತು ಸಾವಿರಾರು ಜನರು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಮೇಲೆ ಪ್ರಮಾಣ ಮಾಡಿ ಬದರಿನಾರಾಯಣ ಅಯ್ಯಂಗಾರರಿಗೆ ಮತ ನೀಡುವ ಭರವಸೆ ನೀಡುತ್ತಾರೆ ಅದರಂತೆ ನಡೆಯುತ್ತಾರೆ ಇದು ಗೋಪಾಲಗೌಡರ ಸೋಲಿಗೆ ಕಾರಣ ಆಗುತ್ತದೆ.
ಮುಂದೆ ಬದರಿನಾರಾಯಣ ಅಯ್ಯಂಗಾರರು ಅನೇಕ ಬಾರಿ ಶಾಸಕರಾಗುತ್ತಾರೆ, ಒಮ್ಮೆ ವಿದಾನ ಪರಿಷತ್ ಸದಸ್ಯರಾಗುತ್ತಾರೆ, ರಾಜ್ಯದ ವಿದ್ಯಾ ಮಂತ್ರಿಗಳಾಗುತ್ತಾರೆ, ಒಮ್ಮೆ ಸಂಸದರಾಗುತ್ತಾರೆ.
ಹೀಗೆ ಗೇಣಿ ರೈತರ ಹೋರಾಟಕ್ಕೆ ಬೆಂಬಲಿಸಿ ಸಮಾಜವಾದಿ ಮುಖಂಡರಾದ ಲೋಹಿಯಾ, ಜೇಪಿ, ಜಾಜ್೯ ಪನಾ೯೦ಡೀಸ್ ಅದಿಯಾಗಿ ಅನೇಕ ನಾಯಕರನ್ನ ಕಾಗೋಡು ಚಳವಳಿಯಲ್ಲಿ ಭಾಗವಹಿಸುವಂತೆ ಮಾಡಿ ಚಳವಳಿ ನಿರಂತರವಾಗಿರಿಸಿ ನಂತರ ಜೈಲು ಸೇರಿ ಮೊದಲ ಮಹಾ ಚುನಾವಣೆಯಲ್ಲಿ ವಿದಾನ ಸಭಾ ಸದಸ್ಯರಾಗಿ ಆಯ್ಕೆ ಆಗಿ ರಾಜ್ಯದಲ್ಲಿ ಸಮಾಜವಾದಿ ಪಕ್ಷ ಸಂಘಟಿಸಿ ದಾರವಾಡ ಜಿಲ್ಲೆಯ ಹುಬ್ಬಳ್ಳಿ ಗ್ರಾಮದಲ್ಲಿ ಜಹಗಿರಿದಾರರ ರೈತ ಹೋರಾಟ, ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯರ ಸಹೋದರ ನಂಜಪ್ಪನವರ ವಿರುದ್ಧ ನಡೆಸಿದ ಸಂಗ್ರಾಮ "ಮೊಟ್ಟೆ ದೊಡ್ಡಿ ಪ್ರಕರಣ " , ಮೈಸೂರು ಮಹಾರಾಜರ ದಸರಾ ಉತ್ಸವ ಬಗ್ಗೆ ನಡೆಸಿದ ಹೋರಾಟ ಹೀಗೆ ಶಾಸನ ಸಭೆಯ ಒಳಗೆ ಹೊರಗೆ ಅನ್ಯಾಯ ಶೋಷಣೆಯ ವಿರುದ್ಧ ಧ್ವನಿಯಾಗಿ ಘಜಿ೯ಸಿದ್ದ ಶಾಂತವೇರಿ ಗೋಪಾಲಗೌಡರನ್ನು ಮತದಾರ ಕೈ ಕೊಟ್ಟು ಸೋಲಿಸಿದ್ದು ಒಂದು ದುರಂತ ಇತಿಹಾಸ.
Comments
Post a Comment