Blog number 2056. ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದವರು ಅನುತ್ತೀರ್ಣರಾದವರು ಅಸಮರ್ಥರಲ್ಲ, ಈ ಪರೀಕ್ಷೆ ಒಂದೇ ಜೀವಮಾನದ ಅಂತಿಮ ಪರೀಕ್ಷೆಯಲ್ಲ ನೆನಪಿರಲಿ.
#ಪರೀಕ್ಷೆಯಲ್ಲಿ_ಕಡಿಮೆ_ಅಂಕ_ಪಡೆದವರು
#ಅನುತ್ತೀರ್ಣರಾದವರು_ಅಸಮರ್ಥರಲ್ಲ
#ಹೆಚ್ಚು_ಅಂಕ_ಪಡೆದವರನ್ನು_ಪ್ರಶಂಸುವುದು_ಕಡಿಮೆ_ಅಂಕ_ಪಡೆದವರು_ಅವಮಾನ_ಎಂದು_ಬಾವಿಸಬಾರದು
#ಅನುತ್ತೀರ್ಣರಾದವರ_ಕಡಿಮೆ_ಅಂಕ_ಪಡೆದವರ_ಶಾಲೆ_ಬಿಟ್ಟವರ_ಸಾಧನೆ_ಗೊತ್ತಾ?
#ಶಿಕ್ಷಕರು_ಮತ್ತು_ಪೋಷಕರಿಗೆ_ವಿನಂತಿ_ಏನೆಂದರೆ
#ದಯವಿಟ್ಟು_ಕಡಿಮೆ_ಅಂಕ_ಪಡೆದವರನ್ನ_ತೆಗಳ_ಬೇಡಿ
#ಪೇಲ್_ಆದರೆ_ಅವಮಾನ_ಮಾಡಬೇಡಿ_ಈ_ಲೇಖನ_ತೋರಿಸಿ
#ಅವರ_ಭವಿಷ್ಯದ_ಜೀವನ_ಪರೀಕ್ಷೆಯ_ಅಂಕಗಳಿಗೆಸೀಮಿತವಲ್ಲ_ಎಂಬ_ವಾಸ್ತವತಿಳಿಸಿ.
Man of the Day ಎಂಬಂತೆ ಪರೀಕ್ಷೆ ಪಲಿತಾಂಶ ಬಂದ ದಿನ ಅತಿ ಹೆಚ್ಚು ಅಂಕ ಪಡೆದವರನ್ನ ಎಲ್ಲರೂ ಪ್ರಶಂಸೆ ಮಾಡುತ್ತಾರೆ ಇದರಿಂದ ಕಡಿಮೆ ಅಂಕ ಪಡೆದ ಮತ್ತು ಅನುತ್ತೀರ್ಣರಾದ ವಿದ್ಯಾರ್ಥಿಗಳು ಇದು ತಮಗಾದ ಅವಮಾನ ಎಂದು ಭಾವಿಸಬೇಕಾಗಿಲ್ಲ.
ಕಡಿಮೆ ಅಂಕ ಪಡೆದವರನ್ನ ಅನುತ್ತೀರ್ಣರಾದವರನ್ನು ಪೋಷಕರಾಗಲಿ ಅವರ ಶಿಕ್ಷಕರಾಗಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹೋಲಿಸಿ ಅವಮಾನ ಗೇಲಿ ಯಾವ ಕಾರಣಕ್ಕೂ ಮಾಡಬಾರದು.
ಶಿಕ್ಷಣದ ಅಂಕಗಳು ಜೀವನದ ಭವಿಷ್ಯ ನಿರ್ಧರಿಸುವುದಿಲ್ಲ, ಇವತ್ತಿನ ಪರೀಕ್ಷೆಯೇ ಜೀವನದ ಅಂತಿಮ ಪರೀಕ್ಷೆ ಅಲ್ಲ.
ಪ್ರಪಂಚದಲ್ಲಿ ನಾವು ಆರಾದಿಸುವ ಯಶಸ್ವಿ ವ್ಯಕ್ತಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಯಶಸ್ವಿ ಆದವರಲ್ಲ ಅವರೆಲ್ಲ ಅನುತ್ತೀರ್ಣರಾದವರು ಶಾಲೆ ಬಿಟ್ಟವರು ಆಗಿದ್ದಾರೆ.
ಭಾರತೀಯ ಪ್ರಸಿದ್ದ ವ್ಯಕ್ತಿಗಳಾದ ಮುಕೇಶ್ ಅಂಬಾನಿ, ಗೌತಮ್ ಅದಾನಿ, ಅಜಿಂ ಪ್ರೇಂಜಿ, ಕಪಿಲ್ ದೇವ್, ಮೇರಿ ಕೊಂ, ಸಚಿನ್ ತೆಂಡೂಲ್ಕರ್, ಸ್ಮೃತಿ ಇರಾನಿ, ಚಿತ್ರ ತಾರೆಗಳಾದ ಅಕ್ಷಯ ಕಪೂರ್, ಸಲ್ಮಾನ್ ಖಾನ್, ಐಶ್ವರ್ಯ ರೈ, ಅಮೀರ್ ಖಾನ್, ಕಮಲ್ ಹಾಸನ್ ಎಲ್ಲಾ ಡ್ರಾಪ್ ಔಟ್ ಆದವರೆ.
ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ಆದರೆ ಅವರ ಕ್ಷೇತ್ರಗಳಲ್ಲಿ ಸಾದನೆ ಮಾಡಿ ವಿಶ್ವ ವಿಖ್ಯಾತರಾದ ನ್ಯೂಟನ್, ಅಬ್ರಹಾಂ ಲಿಂಕನ್, ರೈಟ್ ಸಹೋದರರು, ಡಾರ್ವಿನ್, ಚರ್ಚಿಲ್, ವಾಲ್ ಡಿಸ್ನಿ, ಲೂಯಿಸ್ ಮೆ ಆಲ್ಕಟ್, ಜೆ.ಕೆ.ರೋಲಿಂಗ್, ಎಡಿಸನ್, ಓಪ್ರಾ ವಿಸ್ಪ್ರೆ ಹೀಗೆ ಸಾಲು ಸಾಲು ಸಾಗುತ್ತದೆ.
ಕನ್ನಡದ ಪ್ರಖ್ಯಾತ ಸಾಹಿತಿ ಬರಹಗಾರ ಹಾಯ್ ಬೆಂಗಳೂರು ರವಿ ಬೆಳಗೆರೆ ಕೂಡ ಎಸ್.ಎಸ್.ಎಲ್.ಸಿ. ಪೇಲ್ ಆದವರು.
ನಾನು 7 ನೇ ತರಗತಿಯಲ್ಲಿ ಮೆರಿಟ್ ವಿದ್ಯಾರ್ಥಿ ಆದರೆ 8ನೇ ತರಗತಿಯಿಂದ SSLC ತನಕ ತರಗತಿಗೆ ಸರಿಯಾಗಿ ಹೋಗಲಿಲ್ಲ SSLC ಯಲ್ಲಿ ಕನ್ನಡ ಇಂಗ್ಲೀಷ್ ಹಿಂದಿ ವಿಷಯದ ಪರೀಕ್ಷೆಗೆ ಮಾತ್ರ ಗೈಡ್ ಓದಿ ಭಾಗವಹಿಸಿ ಅದನ್ನು ಪಾಸ್ ಮಾಡಿದ್ದೆ ಉಳಿದ ಗಣಿತ ವಿಜ್ಞಾನ ಮತ್ತು ಸಮಾಜ ಪರೀಕ್ಷೆ ಬರೆಯದೆ ಪೇಲ್ ಆಗಿದ್ದೆ ನಂತರ ಸಪ್ಲಿಮೆಂಟರಿ ಪರೀಕ್ಷೆ ಬರೆದು ಪಾಸ್ ಮಾಡಿದ್ದೆ.
ಶಿಕ್ಷಕರು ಮತ್ತು ಪೋಷಕರಿಗೆ ವಿನಂತಿ ಏನೆಂದರೆ ದಯವಿಟ್ಟು ಕಡಿಮೆ ಅಂಕ ಪಡೆದವರನ್ನ ತೆಗಳುವುದು ಮತ್ತು ಹೆಚ್ಚು ಅಂಕ ಪಡೆದವರೊಡನೆ ಹೋಲಿಸುವುದು ಮಾಡಬೇಡಿ ಹಾಗೂ ಪೇಲ್ ಆದರೆ ಅವಮಾನ ಮಾಡಬೇಡಿ ಈ ಮೇಲಿನ ಲೇಖನ ಅವರಿಗೆ ತೋರಿಸಿ ಅವರ ಭವಿಷ್ಯದ ಜೀವನ ಪರೀಕ್ಷೆಯ ಅಂಕಗಳಿಗೆ ಸೀಮಿತವಲ್ಲ ಎಂಬ ವಾಸ್ತವ ತಿಳಿಸಿ.
Comments
Post a Comment