Blog number 2069. ಮಲೆನಾಡಿನ ಅಪ್ಪೆ ಮಿಡಿ ಕೊರತೆ ಮತ್ತು ಆಂದ್ರ ಶೈಲಿಯ ಬೆಳೆದ ಗೊರಟಾದ ಮಾವಿನ ಕಾಯಿ ಅವಕಾಯಿ ಉಪ್ಪಿನ ಕಾಯಿ
#ಈ_ವರ್ಷ_ಅಪ್ಪೆಮಾವಿನ_ಮಿಡಿ_ಇಲ್ಲ.
#ಮೊದ_ಮೊದಲು_ಬಂದ_ಮಿಡಿ_ಖರೀದಿಸಲಿಲ್ಲ
#ಸ್ವಲ್ಪ_ದಿನದ_ನಂತರ_ಇನ್ನೂ_ಒಳ್ಳೆ_ಮಿಡಿ_ಬಂದಿತೆಂಬ_ನಿರೀಕ್ಷೆ
#ಈ_ವರ್ಷದ_ವಿಪರೀತ_ಬಿಸಿಲು_ಉಷ್ಣಾಂಶಗಳು_ಮೊನ್ನೆ_ಬಂದ_ಗಾಳಿ_ಮಳೆ
#ಉಪ್ಪಿನಕಾಯಿ_ಮಾವಿನಮಿಡಿ_ಮುಗಿದ_ಅಧ್ಯಾಯ
#ಗಾಳಿ_ಮಳೆಗೆ_ಉದುರಿದ_ಗೊರಟು_ಆಗಿರುವ_ಬಲಿತ_ಮಾವಿನಕಾಯಿಂದ
ಪಶ್ಚಿಮ ಘಟ್ಟದ ಮಲೆನಾಡಿನ ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ ಜಿಲ್ಲೆ, ಚಿಕ್ಕಮಗಳೂರು, ಉಡುಪಿ ಮತ್ತು ಮಂಗಳೂರು ಜಿಲ್ಲೆಯವರಿಗೆ ಮಾತ್ರ ಅತ್ಯಂತ ಪ್ರಿಯವಾದ ಅಪ್ಪೆಮಿಡಿ (tender mango) ಉಪ್ಪಿನ ಕಾಯಿ ಬೇಕೇ ಬೇಕು.
ಬೇರೆ ಪ್ರದೇಶದವರಿಗೆ ಇದು ಇಷ್ಟವಿಲ್ಲ ಮತ್ತು ಅದರ ಬಳಕೆಯೂ ಇಲ್ಲ.
ಆಯಾ ಜಿಲ್ಲೆಯ ನಿರ್ದಿಷ್ಟ ಪ್ರದೇಶದ ಅಪ್ಪೆಮಿಡಿ ಮತ್ತು ಅದರಲ್ಲಿ ವಿವಿಧ ಸ್ವಾದದ್ದು ಅವರ ಆಯ್ಕೆ ಆಗಿದೆ.
ಅಪ್ಪೆ ಮಿಡಿ ಉಪ್ಪಿನಕಾಯಿ ತಯಾರಿ ಮತ್ತು ಅದನ್ನು ಸಂರಕ್ಷಿಸಿ ವರ್ಷಪೂರ್ತಿ ಬಳಸುವುದು ಶ್ರಮದಾಯಕ ಮತ್ತು ಅದರ ತಯಾರಿಯ ಕೌಶಲ್ಯ ಗೊತ್ತಿರುವ ವೃತ್ತಿಪರರಿಗೆ ಮಾತ್ರ ಸಾಧ್ಯ.
ಅಪ್ಪೆ ಮಿಡಿ ಆಯ್ಕೆ, ಅದನ್ನು ಶುಭ್ರವಾಗಿ ಒರೆಸಿ ತೊಟ್ಟು ನಿವಾರಿಸಿ ಅದನ್ನ ಹುರಿದ ಹರಳು ಉಪ್ಪಿನಲ್ಲಿ ಪದರ ಪದರವಾಗಿ ಭರಣಿಯಲ್ಲಿ ಇರಿಸಿ ಅದರ ಮೇಲೆ ಗಾಳಿ ಆಡದಂತೆ ಭದ್ರ ಮಾಡಿ ಬಾರ ಹೇರಿ ಅದು ಚಟ್ಟು ಆದ ನಂತರ ಅದನ್ನು ಹೊರ ತೆಗೆದು ಸೂಕ್ತ ಮಸಾಲೆ ಸೇರಿಸಿ ಉಪ್ಪಿನ ಕಾಯಿ ಮಾಡುವ ಉದ್ದದ ಕೆಲಸ (lengthy process) ಇದೆ.
ಆದರೆ ದೇಶದ ಬೇರೆ ಬೇರೆ ಪ್ರದೇಶದಲ್ಲಿ ಮಾವಿನ ಚಿಗುರು ಮಿಡಿ ಬಳಸಿ ಉಪ್ಪಿನಕಾಯಿ ತಯಾರಿಸುವುದಿಲ್ಲ ಅವರದ್ದೆಲ್ಲ ಕಡಿ ಉಪ್ಪಿನಕಾಯಿ.
ಇದಕ್ಕೆ ಬೆಳೆದ ಗೊರಟಾದ ಮಾವಿನ ಕಾಯಿಯೇ ಬೇಕು ಇದನ್ನು 4 ಅಥವ 8 ಬಾಗ ಗೊರಟಿನ ಜೊತೆ ತುಂಡರಿಸ ಬೇಕು (ಶ್ರಮದ ಕೆಲಸ) ಒಳಗಿನ ಬೀಜ ನಿವಾರಿಸಿ ಗೊರಟಿನ ಹೊರ ಪದರ ಹಾಗೇ ಇರಿಸಿ ನಂತರ ತೊಳೆದು ಬಿಸಿಲಲ್ಲಿ ಒಣಗಿಸಿ ಉಪ್ಪು ಮಸಾಲೆ ಮತ್ತು ಎಳ್ಳೆಣ್ಣೆ ಅಥವ ಸಾಸಿವೆ ಎಣ್ಣೆ ಸೇರಿಸಿ 3 ರಿಂದ 4 ಬಿಸಿಲಲ್ಲಿ ಇಟ್ಟರೆ ಆಂಧ್ರ ಸ್ಟೈಲ್ ಅವಕಾಯಿ ಸಿದ್ದವಾಗುತ್ತದೆ.
ಇದನ್ನು ಅನ್ನದ ಜೊತೆ ಕಲೆಸಿ ತಿನ್ನಲು ಬಹು ರುಚಿ ನಾನು ಈ ವರ್ಷದ ಅಪ್ಟೆ ಮಿಡಿಯ ಆಸೆ ಬಿಟ್ಟು ಇದನ್ನು ತಯಾರಿಸಿಕೊಂಡೆ.
ಯೂಟ್ಯೂಬ್ ನಲ್ಲಿ ಆಂಧ್ರ ಶೈಲಿ ಅವಕಾಯಿ ರೆಸಿಪಿ ಬೇಕಾದಷ್ಟಿದೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ
https://www.indianhealthyrecipes.com/avakaya/
https://youtu.be/wvmCoImHfuA?feature=shared
Comments
Post a Comment