https://youtu.be/VlkPSmYo9AE?feature=shared
#ಪೂರ್ವ_ಮುಂಗಾರಿನ_ಮಳೆಯಲ್ಲಿದೆ
#ಭೂಮಿ_ಹಸಿರು_ಮಾಡುವ_ನೈಟ್ರೋಜನ್
#ಕಳೆದ_ನವೆಂಬರ್_ತಿಂಗಳಿಂದ_ನನ್ನ_ಕೈತೋಟದ_ಗಿಡಗಳಿಗೆ_ನಿತ್ಯ_ನಾನುಣಿಸುತ್ತಿದ್ದ_ಕೈತಂಬಿಗೆ_ನೀರು
#ಈ_ತಿಂಗಳ_ಒಂದು_ಹೂಮಳೆ_ಮತ್ತೆರೆಡು_ದೊಡ್ಡ_ಮಳೆಯಿಂದ_ಹುವಾಗಿ_ನಗು_ಬೀರುತ್ತಿದೆ
ಪ್ರಕೃತಿಯಲ್ಲಿರುವ ಹೂವುಗಳ ವಿದ-ಬಣ್ಣ-ಸುವಾಸನೆ_ಆಕೃತಿಗಳನ್ನು ಲೆಖ್ಖವಿಡಲು ಸಾಧ್ಯವೇ? ಲೆಖ್ಬ ಮಾಡಿಟ್ಟರೂ ಪ್ರಕೃತಿಯಲ್ಲಿ ಹೊಸ ರೂಪದ ಹೊಸ ಹೂವುಗಳು ಬರುತ್ತಲೇ ಇರುತ್ತದೆ.
ನನ್ನ ಕಳೆದ 5 ವರ್ಷದ ತೂಕ ಇಳಿಸುವ ವಾಕಿಂಗ್ ನಿತ್ಯವೂ ನವನವೀನ ಉಂಟು ಮಾಡಲು ನನ್ನ ಪ್ರೀತಿಯ ಶಂಭೂರಾಮ ಜೊತೆಯಾದಂತೆ ಈ ಕೈ ತೋಟದ ಹೂವಿನ ಗಿಡಗಳ ಆರೈಕೆ - ಆಯ್ಕೆ ಕೂಡ ಜೊತೆ ಜೊತೆ ಆಗಿ ಸಾಗಿದೆ.
ಒಂದು ದಿನ ನೀರು ಉಣಿಸದೆ ಇರಲು ಸಾಧ್ಯವಿಲ್ಲ ಆ ಗಿಡಗಳು ನನ್ನ ಜೊತೆ ಮಾತಾಡಿದಂತ ಅನುಭೂತಿಯ ಅನುಭವ ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು.
ಕಳೆದ ಅಕ್ಟೋಬರ್ ನವೆಂಬರ್ ತಿಂಗಳಿಂದಲೇ ನಿತ್ಯ ಬೆಳಿಗ್ಗೆ ವಾಕಿಂಗ್ ನಂತರ ಈ ಗಿಡಗಳಿಗೆ ನೀರುಣಿಸುತ್ತಿದ್ದೆ ಸರಿ ಸುಮಾರು ಏಳು ತಿಂಗಳ ಕಾಲ, ಬಿರು ಬೇಸಿಗೆ,ಮಧ್ಯದಲ್ಲಿ ಬರಬೇಕಾದ ಸಂಪ್ರದಾಯಿಕ ಮಳೆ ಬಾರದೇ ಹೋದದ್ದು ಹಾಗು ಅತಿ ಹೆಚ್ಚು ಉಷ್ಣಾಂಶ 43 ಡಿಗ್ರಿ ದಾಟಿದ್ದು ಸೂಕ್ಷ್ಮವಾಗಿರುವ ಹೂವಿನ ಗಿಡಗಳಿಗೆ ಕಷ್ಟವಾಗಿತ್ತು.
ಈ ತಿಂಗಳ ಮೊದಲ ವಾರದ ಹೂಮಳೆ ಅದರ ಎರಡನೇ ವಾರದ ಬಿರುಗಾಳಿ ಮಳೆ ನಂತರ ಎರಡು ದಿನದಲ್ಲಿ ಗಾಳಿಯ ಸೋಂಕು ಇಲ್ಲದೆ ನಿರಂತರ ಒಂದು ಗಂಟೆ ಸುರಿದ ಪೂರ್ವ ಮುಂಗಾರು ಮಳೆ ಇಳೆಯನ್ನು ತಂಪಾಗಿಸಿತ್ತು.
ಪೂರ್ವ ಮುಂಗಾರು ಮಳೆ ನೀರ ಜೊತೆ ತರುವ ನೈಸರ್ಗಿಕ ನೈಟ್ರೊಜನ್ ಗಳು ತಂಪಾದ ಇಳೆಯನ್ನು ಹಸಿರು ಮಾಡುವ ವಿಶೇಷ ಶಕ್ತಿ ತುಂಬಿದೆ.
ಆದ್ದರಿಂದ ಕಳೆದ ಎರೆಡು ದಿನದಿಂದ ನನ್ನ ಕೈತೋಟದ ಹೂವಿನ ಗಿಡಗಳನ್ನು ನಿರೀಕ್ಷೆಯಿಂದ ಕಾಯುತ್ತಿದ್ದೆ ಇವತ್ತಿನ ಬೆಳಿಗ್ಗೆ ನನ್ನ ನಿರೀಕ್ಷೆ ಹುಸಿ ಆಗಲಿಲ್ಲ ನನ್ನ #ರೈನ್_ಲಿಲ್ಲಿ (ಹೆಸರಿನ ಅನ್ವರ್ಥದಂತೆ ಮೊದಲ ಮಳೆಗೆ ಹೂವು ಬಿಡುವ ಮಳೆ ಪುಷ್ಪ) ಗಿಡಗಳು ಹೂವು ಅರಳಿಸಿ ನಗು ಬೀರಿದೆ.
Comments
Post a Comment