Blog number 2076. ನನ್ನ ಮತ್ತು ನನ್ನ ಪ್ರೀತಿಯ ಶಂಭೂರಾಮನ ವಾಕಿಂಗ್ ಟ್ರ್ಯಾಕ್ ನ ಕೈ ತೋಟದಲ್ಲಿ ಪಿಕರಾಳ ಹಕ್ಕಿಯ ಗೂಡು ಅದರಲ್ಲಿ ಎರೆಡು ಮೊಟ್ಟೆಗಳು
#ನನ್ನ_ಮತ್ತು_ಶಂಭೂರಾಮನ_ನಿತ್ಯ_ವಾಕಿಂಗ್_ಟ್ರಾಕ್_ಆಲಂಕಾರಿಕ_ಕ್ಯಾಕ್ಟಸ್
#ಗಿಡದಲ್ಲಿ_ಬುಲ್_ಬುಲ್_ಹಕ್ಕಿ_ಗೂಡು_ಕಟ್ಟಿ_ಮೊಟ್ಟೆ_ಇಟ್ಟಿದೆ
#ಬುಲ್_ಬುಲ್_ಅಥವ_ಕನ್ನಡದ_ಪಿಕರಾಳ_ಹಕ್ಕಿ
#ಮುಳ್ಳಿನ_ಕ್ಯಾಕ್ಟಸ್_ಗಿಡದಲ್ಲಿ_ಶತೃವಿನಿಂದ_ರಕ್ಷಣೆ_ಜಾಸ್ತಿ_ಇರಬಹುದು
#ವೃತ್ತಾಕಾರದ_ಸುಂದರವಾದ_ಗೂಡು
#ಪಕ್ಷಿ_ಲೋಕದಲ್ಲಿ_ಹೆಚ್ಚಾಗುತ್ತಿರುವ_ಪ್ಲಾಸ್ಟಿಕ್_ಬಳಕೆ
https://youtube.com/shorts/K-r-yeN4JMQ?feature=shared
ನಿನ್ನೆ ಈ ಪಿಕರಾಳ ಹಕ್ಕಿ ಗೂಡಿನಲ್ಲಿ ಒಂದು ಮೊಟ್ಟೆ ಇತ್ತು ಇವತ್ತು ಬೆಳಗಿನ ಮಳೆಯಲ್ಲೇ ವಾಕಿಂಗ್ ಪ್ರಾರಂಬಿಸಿದಾಗ ಈ ಗೂಡಲ್ಲಿ ಎರಡು ಮೊಟ್ಟೆಗಳಿದೆ.
ಪಿಕರಾಳ ಅಥವ ಬುಲ್ ಬುಲ್ ಹಕ್ಕಿ ವೃತ್ತಾಕಾರದ ಚಿಕ್ಕದಾದ ಸುಂದರ ಗೂಡು ಹೆಣೆಯುತ್ತದೆ ಆದರೆ ಮನುಷ್ಯ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಿದರೂ ಪಕ್ಷಿಗಳು ಮನುಷ್ಯ ತ್ಯಾಜ್ಯದ ಪ್ಲಾಸ್ಟಿಕ್ ತನ್ನ ಗೂಡುಗಳಿಗೆ ಬಳಸುತ್ತಿರುವುದು ದುರಂತ.
#ಪಿಕಳಾರ (Bulbul) : ಮೈನಾಕ್ಕಿಂತ ಕೊಂಚ ಚಿಕ್ಕದಾದ ಗುಬ್ಬಿಗಿಂತ ದೊಡ್ಡದಾದ ಈ ಹಕ್ಕಿ ಭಾರತದಾದ್ಯಂತ ಕಂಡುಬರುವ ಒಂದು ಸಾರ್ವತ್ರಿಕ ಹಕ್ಕಿ. ಇವುಗಳನ್ನು ದಟ್ಟ ಕಾಡುಗಳಲ್ಲಿ, ಪೇಟೆಯ ಉದ್ಯಾನಗಳಲ್ಲಿ, ಮನೆಯ ಹೂದೋಟ ಹೀಗೆ ಎಲ್ಲೆಡೆ ನೋಡಬಹುದು. ಪಶ್ಚಿಮ ಘಟ್ಟದ ಕಾಡುಗಳಲ್ಲಿ ನಾಡಿನಲ್ಲಿ ಗುಬ್ಬಚ್ಚಿಗಳು ಹೇಗೊ ಹಾಗೆ ವಿಪುಲವಾಗಿವೆ. ಕರ್ನಾಟಕದಲ್ಲಿ ಇವುಗಳ ಅನೇಕ ಪ್ರಭೇದಗಳನ್ನು ನೋಡಬಹುದು : ಕೆಂಪು ಕಪೋಲದ ಪಿಕಳಾರ ಅಥವಾ ಕೆಮ್ಮೀಸೆ ಪಿಕಳಾರ(Red-whiskered Bulbul), ಕೆಂಪು ಬಾಲದ ಪಿಕಳಾರ(Red-vented Bulbul), ಕರಿ ಪಿಕಳಾರ(Black Bulbul), ಹಳದಿ ಕತ್ತಿನ ಪಿಕಳಾರ (Yellow-throated Bulbul), ಬಿಳಿ ಹುಬ್ಬಿನ ಪಿಕಳಾರ (White-browed Bulbul). ಕೆಂಪು ಕಪೋಲದ ಪಿಕಳಾರ ಅಥವಾ ಕೆಮ್ಮೀಸೆ ಪಿಕಳಾರದ ತಲೆಯ ಮೇಲೆ ಜುಟ್ಟಿನಂತಹ ಚೊಟ್ಟಿ ಇದ್ದು, ಕಪೋಲದ ಭಾಗ ಕೆಂಪಾಗಿರುತ್ತದೆ. ಇವನ್ನು ಸಾಮಾನ್ಯವಾಗಿ ನಗರದ ಹೂದೋಟಗಳಿಂದ ಹಿಡಿದು ಮಲೆನಾಡಿನ ಕಾಡುಗಳಲ್ಲಿ ಎಲ್ಲೆಡೆ ನೋಡಬಹುದು. ಕೆಂಪು ಬಾಲದ ಪಿಕಳಾರಗಳ ಬಾಲದ ಬುಡದಲ್ಲಿ ಕೆಂಪು ಬಣ್ಣವಿದ್ದು, ಇವು ಹೆಚ್ಚಾಗಿ ತೋಟ,ಉದ್ಯಾನದಲ್ಲಿ ಕಾಣಿಸಿಕೊಳ್ಳುತ್ತವೆ.ಬೆಳಗಿನ ಸಮಯದಲ್ಲ್ಲಿ ಸಿಳ್ಳು ಹಾಕುತ್ತಾ ಸುಶ್ರಾವ್ಯವಾಗಿ ಹಾಡುತ್ತವೆ.ಇವು ಗುಂಪಿನಲ್ಲಿರುವುದು ಅಪರೂಪ, ಬದಲಾಗಿ ಒಂಟಿ ಅಥವಾ ಜೋಡಿ ಹಕ್ಕಿಗಳಾಗಿ ಕಾಣಿಸಿಕೊಳ್ಳುವುದು ಹೆಚ್ಚು
Comments
Post a Comment