Blog number 2085. ಇನ್ಪೋಸಿಸ್ ಸಂಸ್ಥಾಪಕರಾದ ಶ್ರೀಮತಿ ಸುಧಾ ಮೂರ್ತಿ ಶಿಕಾರಿಪುರ ತಾಲ್ಲೂಕಿನ ತಾಳಗುಂದ ಮತ್ತು ಸುತ್ತ ಮುತ್ತಲಿನ ಕದಂಬರ ಇತಿಹಾಸಕ್ಕೆ ಸಂಬಂಧಿಸಿದ ಸ್ಥಳಗಳ ಮಾಹಿತಿ ವೀಕ್ಷಣೆ ಸ್ಥಳಿಯ ಇತಿಹಾಸ ಸಂಶೋಧಕ ಶಿರಾಳಕೊಪ್ಪದ ಪ್ರಜಾವಾಣಿ ವರದಿಗಾರ ನವೀನ್ ಕುಮಾರ್ ಜೊತೆ ಪಡೆದಿದ್ದರು.
#ತಾಳಗುಂದದ_ಉತ್ಕನನ_ಸಮಯದಲ್ಲಿ_ತಾಳಗುಂದ_ವೀಕ್ಷಿಸಲು_ಆಗಮಿಸಿದ್ದ_ಇನ್ಪೋಸಿಸ್_ಸುದಾಮೂರ್ತಿ
#ಅವರಿಗೆ_ಸ್ಥಳಿಯ_ಮಾಹಿತಿ_ನೀಡಿದ_ನವೀನ್_ಕುಮಾರ್
#ಸುದಾಮೂರ್ತಿ_ಸ್ವತಃ_ತಯಾರಿಸಿ_ಡಬ್ಬಿಯಲ್ಲಿ_ತಂದಿದ್ದ_ಅವರ_ಮಧ್ಯಾಹ್ನದ_ಊಟ_ಚಿತ್ರಾನ್ನ
#ತಾಳಗುಂದ_ಶಾಸನ_ಕನ್ನಡದ_ಮೊದಲ_ಶಾಸನ
#ಕದಂಬರು_ಸ್ಥಾಪಿಸಿದ್ಧ_ತಾಳಗುಂದ_ವಿಶ್ವವಿದ್ಯಾಲಯ
#ಹವ್ಯಕ_ಬ್ರಾಹ್ಮಣ_ಮಯೂರ_ವರ್ಮ
#ಮುಂತಾದ_ಶಾಸನಗಳು_ಪುರಾತತ್ವ_ಇಲಾಖೆ_ಸಂಶೋದನೆ_ಮತ್ತು_ಉತ್ಕನಗಳಲ್ಲಿ_ದೊರೆತಿದೆ
#ಈ_ಬಗ್ಗೆ_ಶ್ರಮಿಸುತ್ತಿರುವ_ಶಿರಾಳಕೊಪ್ಪದ_ಪ್ರಜಾವಾಣಿ_ವರದಿಗಾರ_ನವೀನ್_ಕುಮಾರ್
#ಸಂದರ್ಶನದಲ್ಲಿ_ಹೇಳಿದ_ಸುದಾಮಾರ್ತಿ_ತಾಳಗುಂದ_ಬೇಟಿಯ_ಮಾಹಿತಿ
ನಮ್ಮ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ತಾಳಗುಂದದ ಕದಂಬ ವಂಶದ ಮಾಹಿತಿಗಾಗಿ ಉತ್ಕನನಗಳು ನಡೆಯುವ ಸಂದರ್ಭದಲ್ಲೇ ವಿಶ್ವ ವಿಖ್ಯಾತ #ಇನ್ಪೋಸಿಸ್ ಸಂಸ್ಥೆ ಸಂಸ್ಥಾಪಕಿ ಶ್ರೀಮತಿ ಸುಧಾ ಮೂರ್ತಿ ತಾಳಗುಂದ ವೀಕ್ಷಣೆಗೆ ಬಂದಿದ್ದರು.
ಅವರು ಬರುವ ವಿಚಾರ ಯಾರಿಗೂ ಬಹಿರಂಗ ಪಡಿಸದಂತೆ ತಿಳಿಸಿದ್ದರಂತೆ, ತಾಳಗುಂದದ ಬಗ್ಗೆ ಮತ್ತು ಕದಂಬರ ಬಗ್ಗೆ ಹೆಚ್ಚಿನ ಮಾಹಿತಿ ಮೊದಲೇ ತಮ್ಮ ಕಿರು ಡೈರಿಯಲ್ಲಿ ನೋಟ್ ಮಾಡಿಕೊಂಡು ಬಂದಿದ್ದರಂತೆ.
ಇವರ ಜೊತೆ ಶಿರಾಳಕೊಪ್ಪದ ಪ್ರಜಾವಾಣಿ ವರದಿಗಾರ ಮತ್ತು ಇತಿಹಾಸ ಸಂಶೋಧಕ ನವೀನ್ ಕುಮಾರ್ ಎಲ್ಲಾ ಸ್ಥಳಗಳಿಗೆ ಅವರನ್ನ ಕರೆದೊಯ್ದು ಮಾಹಿತಿ ನೀಡಿದ್ದರು.
ನಾನು ನವೀನ್ ಕುಮಾರ್ ಅವರ ಸಂದರ್ಶನದಲ್ಲಿ ಈ ವಿಚಾರ ತಿಳಿದು ಕುತೂಹಲ ಹಾಗೂ ಆಸಕ್ತಿಯಿಂದ ಹೆಚ್ಚಿನ ಮಾಹಿತಿ ಅವರಿಂದ ಪಡೆದಿದ್ದೆ.
ಇನ್ನೊಂದು ವಿಶೇಷ ಸುದಾಮೂರ್ತಿ ಸರಳತೆಗೆ ಇನ್ನೊಂದು ಸಾಕ್ಷಿ ಅವತ್ತು ಮಧ್ಯಾಹ್ನದ ಊಟ #ಸುಧಾಮೂರ್ತಿ ತಾವೇ ಸ್ವತಃ ತಯಾರಿಸಿ ತಂದು ತಿಂದಿದ್ದು ಚಿತ್ರಾನ್ನ, ಸುದಾ ಮೂರ್ತಿ ಎಲ್ಲೇ ಪ್ರವಾಸ ಹೋದರು ಹೊರಗಿನ ಹೋಟೆಲ್ ಆಹಾರ ಸೇವಿಸುವುದಿಲ್ಲ ಈ ಮೂಲಕ ತಮ್ಮ ಆರೋಗ್ಯ ಕಾಳಜಿ ಮಾಡುತ್ತಾರೆ ಎಂದು ಓದಿದ್ದೆ.
ನವೀನ್ ಕುಮಾರ್ ಕದಂಬರ ಶಾಸನಗಳ ಸಂರಕ್ಷಣೆ ಬಗ್ಗೆ ಇನ್ಪೋಸಿಸ್ ಸಂಸ್ಥೆ ಮತ್ತು ಸುದಾಮಾರ್ತಿ ವಹಿಸಿಕೊಳ್ಳಲು ವಿನಂತಿಸಿದಾಗ ಅವರು ನೀಡಿದ ಪ್ರತಿಕ್ರಿಯೆ " ನಿಮ್ಮ ಜಿಲ್ಲೆಯಲ್ಲಿ ಎಂತೆಂತಹ ದೊಡ್ಡವರಿದ್ದಾರೆ ಅವರು ಮಾಡಲಿ ನಮ್ಮ ಸಂಸ್ಥೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂತಹ ನೂರಾರು ಕೆಲಸ ಮಾಡುತ್ತಿದೆ" ಎಂದು ಮಾಮಿ೯ಕ ಉತ್ತರ ನೀಡಿದ್ದರಂತೆ, ಆರ್ಥಿಕವಾಗಿಯೊ ಅಥವ ಸಾಂಸ್ಕೃತಿಕವಾಗಿಯೋ ನಮ್ಮ ಜಿಲ್ಲೆಯ ರಾಜಕಾರಣಿಗಳ ಬಗ್ಗೆ ಅವರು ಪ್ರಸ್ತಾವಿಸಿದ್ದು ನವೀನ್ ಕುಮಾರ್ ತಮಗೆ ಅರ್ಥವಾಗಿಲ್ಲ ಎಂದರು.
ಎನೇ ಆಗಲಿ ಇನ್ಪೋಸಿಸ್ ಸುದಾ ಮೂರ್ತಿ ತಾಳಗಂದಕ್ಕೆ ಆಗಮಿಸಿದ್ದರು ಮತ್ತು ಕದಂಬರ ಕುರುಹುಗಳ ವೀಕ್ಷಿಸಿದ್ದರು ಎಂಬುದೇ ವಿಶೇಷ ಅವರಿಗೆ ಜೊತೆಯಾಗಿ ನಮ್ಮ ಜಿಲ್ಲೆಯ ಉದಯೊನ್ಮುಖ ಇತಿಹಾಸ ಸಂಶೋಧಕ ನವೀನ್ ಕುಮಾರ್ ಮಾಹಿತಿ ನೀಡಿದರು ಎಂಬುದು ಹೆಮ್ಮೆಯ ಸಂಗತಿ.
( ನಾಳೆ ಸುದಾ ಮೂರ್ತಿ ತಾಳಗುಂದದ ಬೇಟಿಯ ಬಗ್ಗೆ ನಾನು ಮಾಡಿದ ನವೀನ್ ಕುಮಾರ ವಿಡಿಯೋ ಸಂದರ್ಶನ ನಿರೀಕ್ಷಿಸಿ)
Comments
Post a Comment