#ನೀರಿನ_ಟ್ಯಾಂಕ್_ಒವರ್_ಪ್ಲೋ_ಶಂಭೂರಾಮನಿಗೆ_ಸಹಿಸಲು_ಸಾಧ್ಯವಿಲ್ಲ
#ನೀರು_ಸಂಪೂರ್ಣ_ನಿಲ್ಲುವವರೆಗೆ_ಅವನು_ವಿರಮಿಸುವುದಿಲ್ಲ
#ಬೀಳುವ_ನೀರನ್ನು_ಕಚ್ಚಿ_ಕಚ್ಚಿ_ಕೂಗುತ್ತಾನೆ
#ಬಿರು_ಬೇಸಿಗೆಯಲ್ಲಿ_ನೀರು_ಪೋಲಾಗುವುದು_ಅವನಿಗಿಷ್ಟವಿಲ್ಲ_ಎಂದು_ಬಾವಿಸಿದರೆ_ತಪ್ಪು
#ಅದಕ್ಕೊಂದು_ಕಾರಣವಿದೆ.
https://youtu.be/MlW8ZiNlPfY?feature=shared
ದೊಡ್ಡ ಕಟ್ಟಡಗಳಲ್ಲಿ ನೂರಕ್ಕಿಂತ ಹೆಚ್ಚು ನಲ್ಲಿಗಳಿದ್ದರೆ ಒಮ್ಮೆ ಟ್ಯಾಂಕ್ ನೀರು ಸಂಪೂರ್ಣ ಖಾಲಿ ಆದರೆ ಪೈಪ್ ಲೈನ್ ನಲ್ಲಿ ನಿರ್ಯಾತ (Air lock) ಉಂಟಾಗುತ್ತದೆ ಆಗ ಟ್ಯಾಂಕ್ ನೀರು ತುಂಬ ತುಂಬಿದರೂ ಪೈಪಿನಲ್ಲಿ ಗಾಳಿಯ ನಿರ್ಯಾತದ ಗಾಳಿ ಚೆಂಡು ನೀರು ಹರಿಯದಂತೆ ತಡೆ ಮಾಡುತ್ತದೆ.
ಆಗ ಪೈಪ್ ಲೈನ್ ಒಳಗಿನ ಗಾಳಿ ಹೊರಕಳಿಸ ಬೇಕು ಇದಕ್ಕಾಗಿ ಪ್ರತ್ಯೇಕ ವಾಲ್ವ್ ತಿರುಗಿಸಿ ಅದರಿಂದ ಲಾಕ್ ಮಾಡಿರುವ ಗಾಳಿ ಹೊರ ಬಿಡಬೇಕು ಆಗ ಪೈಪಿನಲ್ಲಿರುವ ಗಾಳಿ ಹೆಚ್ಚು ಒತ್ತಡದಿಂದ ನೀರಿನ ಜೊತೆ ಹೊರ ಹಾರುತ್ತದೆ.
ಇಂತದೇ ಒಂದು ದಿನ ನಮ್ಮ ಶಂಭೂರಾಮ ನನ್ನ ಜೊತೆ ವಾಕಿಂಗ್ ಮಾಡುವಾಗ ಅಲ್ಲಿ ಅವನ ಮೇಲೆ ದಬ ದಬ ಅಂತ ನೀರು ಬಿದ್ದಾಗ ಗಾಭರಿ ಆಗಿದ್ದ ನಂತರ ಅವನಿಗೆ ಬೀಳುವ ನೀರಿನ ಮೇಲೆ ಅಸಾಧ್ಯ ಕೋಪ ಕೂಡ ಉಂಟಾಯಿತು ಹಾಗೆ ಬೀಳುವ ನೀರನ್ನು ಕಚ್ಚುವುದು ಬೊಗಳುವುದು ಮಾಡುತ್ತಾನೆ.
ಪೈಪ್ ಲೈನ್ ಏರ್ ಲಾಕ್ ಸಂಪೂರ್ಣ ಹೊರ ತೆಗೆದ ಮೇಲೆ ವಾಲ್ವ್ ನಿಲ್ಲಿಸುತ್ತಾರೆ ಆಗ ಹೊರ ಬೀಳುವ ನೀರು ನಿಲ್ಲುತ್ತದೆ ಅಂತಿಮವಾಗಿ ಹನಿ ಹನಿ ಆಗಿ ಸಂಪೂರ್ಣವಾಗಿ ನಿಲ್ಲುವ ತನಕ ಶಂಭೂರಾಮ ವಿರಮಿಸುವುದಿಲ್ಲ ಬಹುಶಃ ಅವನೇ ಬೆದರಿಸಿ ನೀರು ಬೀಳುವುದು ನಿಲ್ಲಿಸಿದೆ ಎಂಬ ಜಂಬದಿಂದ ನೀರು ನಿಂತ ಮೇಲೆ ನನ್ನ ಹತ್ತಿರ ಬರುತ್ತಾನೆ.
Comments
Post a Comment