Skip to main content

Blog number 2070. ಅಯೋಧ್ಯೆಯಲ್ಲಿ ಪ್ರತಿ ನಿತ್ಯ ಮೊಳಗುವ ನಮ್ಮ ಸಾಗರ ತಾಲೂಕಿನ ಖ್ಯಾತ ಸಾಹಿತಿ ಗಜಾನನ ಶರ್ಮರು ರಚಿಸಿದ ಖ್ಯಾತ ಗಾಯಕಿ ಹಾಡಿರುವ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ ಎಂಬ ಹಾಡು

#ಇವತ್ತು_ರಾಮ_ನವಮಿ

#ಅಯೋಧ್ಯಾದಲ್ಲಿ_ಮೊದಲ_ರಾಮ_ನವಮಿ

#ಪ್ರಖ್ಯಾತ_ಗಾಯಕಿ_ಸೂಯ೯_ಗಾಯಿತ್ರಿ_ಹಾಡಿರುವ

#ಸಾಗರ_ತಾಲ್ಲೂಕಿನ_ಖ್ಯಾತ_ಸಾಹಿತಿ_ಗಜಾನನ_ಶರ್ಮರು_ರಚನೆ_ಮಾಡಿದ

#ಇನ್ನಷ್ಟು_ಬೇಕೆನ್ನ_ಹೃದಯಕ್ಕೆ_ರಾಮ

#ಎಂಬ_ಹಾಡು_ನಿತ್ಯ_ಅಯೋಧ್ಯದಲ್ಲಿ_ಮೊಳಗುತ್ತಿದೆ

#ರಾಮ_ನವಮಿ_ಶುಭಾಷಯಗಳ_ಜೊತೆ_ಗಜಾನನ_ಶರ್ಮರನ್ನ_ಅಭಿನಂದಿಸೋಣ

#ಗಜಾನನ_ಶರ್ಮರ_ಹಾಡು_ಇವತ್ತು_ಶ್ರೀರಾಮನಿಗೆ_ಸಮರ್ಪಿಸಿದ_ಸೂರ್ಯತಿಲಕ

#ನೋಡಲು_ಈ_ಲೇಖನದಲ್ಲಿರುವ_ಲಿಂಕ್_ಕ್ಲಿಕ್_ಮಾಡಿ


 ಪ್ರತಿ ಯುಗಾದಿ ಹಬ್ಬದ ಒಂಬತ್ತನೆ ದಿನ ರಾಮ ನವಮಿ ಅವತ್ತು ಶ್ರೀರಾಮ ಜನಿಸಿದ ದಿನ.
     ಶೀರಾಮ ಜನಿಸಿದ ದಿನಾಂಕ 10 - ಜನವರಿ-5114 BC ಸ್ಥಳ ಅಯೋಧ್ಯ ಸಮಯ ಮಧ್ಯಾಹ್ನ 12 ರಿಂದ 1.
    ಅಂದರೆ ಶ್ರೀರಾಮನ ಏಳು ಸಾವಿರದ ನೂರಾ ಮುವತ್ತೊಂಬತ್ತನೆ ಜನ್ಮ ದಿನ ಈ ದಿನ ಆಚರಿಸಲಾಗುತ್ತಿದೆ.
   ಅಂದರೆ ಏಳು ಸಾವಿರದ ವರ್ಷಗಳ ಹಿಂದೆ ಶ್ರೀರಾಮ ಭಗವಾನ್ ವಿಷ್ಣುವಿನ ಏಳನೆ ಅವತಾರಾಗಿ ಜನಿಸಿದ್ದರು ಎಂಬುದು ಭಾರತೀಯ ಹಿಂದೂ ಪುರಾಣಗಳ ಉಲ್ಲೇಖವಾಗಿದೆ.
  ಅಯೋಧ್ಯೆಯ ರಾಮ ಮಂದಿರ ನಿಮಾ೯ಣಗೊಂಡು ಲೋಕಾರ್ಪಣೆ ಆದ ನಂತರದ ಮೊದಲ ರಾಮ ನವಮಿ ಅಯೋದ್ಯದಲ್ಲಿ ಈ ದಿನ ಆಚರಿಸಲಾಗುತ್ತಿದೆ.
  https://www.youtube.com/live/oVcppkRy2VE?feature=shared
ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ ಇವತ್ತು ಅಯೋಧ್ಯ ರಾಮನಿಗೆ ಸೂರ್ಯ ತಿಲಕ ಸಮರ್ಪಣೆಯ ವಿಶೇಷ ಪೂಜೆ ವೀಕ್ಷಿಸಿ
  
 ದೇಶದಾದ್ಯಂತ ರಾಮ ನವಮಿಯಂದು ಪಾನಕ, ತಮಿಳುನಾಡಿನಲ್ಲಿ ನೀರ್ ಮೋರ್ (ನೀರು ಮಜ್ಜಿಗೆ),ಕೊಸಂಬರಿ, ಫಲಾಹಾರ, ತೆಂಗಿನಕಾಯಿ ಲಡ್ಡು, ಕಾಜು ಬರ್ಪಿ, ತೊಗರಿ ಬೇಳೆಯ ಹಲ್ವ, ಪಂಚಾಮೃತO, ಸಬ್ಬಕ್ಕಿಯ ಪಾಯಸ, ಎಳ್ಳುಂಡೆ, ಅಪ್ಪಾ ರಾಮ ನವಮಿಗೆ ಮಾಡುವ ವಿಶೇಷ ಆಹಾರ ಪದಾರ್ಥಗಳು.
   ನಮ್ಮ ತಾಲ್ಲೂಕಿನ ಖ್ಯಾತ ಸಾಹಿತಿ ಗಜಾನನ ಶರ್ಮರು ಬರೆದ #ಇನ್ನಷ್ಟು_ಬೇಕನ್ನ_ಹೃದಯಕ್ಕೆ_ರಾಮ ಎಂಬ ಹಾಡು ಪ್ರಸಿದ್ಧಿ ಆಗಿದ್ದು ಈ ಹಾಡನ್ನು ಪ್ರಖ್ಯಾತ ಗಾಯಕಿ ಸೂರ್ಯಗಾಯಿತ್ರಿ ಹಾಡಿದ್ದಾರೆ ಈ ಹಾಡು ಪ್ರತಿ ನಿತ್ಯ ಅಯೋಧ್ಯಯ ಶ್ರೀರಾಮ ಮಂದಿರದಲ್ಲಿ ಹಾಕುತ್ತಾರೆ.
   ಈ ಲಿಂಕ್ ಕ್ಲಿಕ್ ಮಾಡಿ ಸೂರ್ಯಗಾಯಿತ್ರಿ ಹಾಡುತ್ತಿರುವ ಗಜಾನನ ಶರ್ಮ ರಚಿಸಿದ ಹಾಡು ಕೇಳಬಹುದು
https://youtu.be/_PrCS-e3L-0?si=nbVOF_x4fcnFvpgC
   #ಶ್ರೀಗಜಾನನಶರ್ಮರು ಚೆನ್ನಬೈರಾದೇವಿ-ಪ್ರಮೇಯ-ಪುನರ್ವಸು ಕಾದಂಬರಿ, ಅನೇಕ ನಾಟಕಗಳು ಹಾಗೂ ಅನೇಕ ಪ್ರವಾಸ ಕಥನಗಳನ್ನು ಬರೆದಿದ್ದಾರೆ ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹಕ್ಲು ಎಂಬ ಹಳ್ಳಿಯಲ್ಲಿ ಜನಿಸಿದವರು.
   ಅಯೋಧ್ಯೆಯ ರಾಮ ಮಂದಿರದಲ್ಲಿ ಆಚರಿಸುತ್ತಿರುವ ಮೊದಲ ರಾಮ ನವಮಿ (7138ನೇ ಜನ್ಮದಿನ) ಯ ಈ ದಿನ ನಮ್ಮ ತಾಲ್ಲೂಕಿನ ಶ್ರೀ ಗಜಾನನ ಶರ್ಮರ ಅದ್ಬುತವಾದ ರಾಮನ ಹಾಡು ರಚನೆ ಮಾಡಿದ್ದಕ್ಕೆ ಮತ್ತು ಆ ಹಾಡು ನಿತ್ಯ ಆಯೋಧ್ಯದ ರಾಮ ಮಂದಿರದಲ್ಲಿ ಮೊಳಗುವ ಬಾಗ್ಯ ಪಡೆದಿದ್ದಕ್ಕಾಗಿ ಅವರನ್ನ ಅಭಿನಂದಿಸೋಣ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...