#ನಾನು_ಯಾರು? #ರಾಜಕಾರಣಿ_ಹೋರಾಟಗಾರ_ಕೃಷಿಕ_ವ್ಯಾಪಾರಿ_ಪತ್ರಕತ೯_ಸಾಹಿತಿ_ಇತಿಹಾಸಕಾರ #ಅಂತೆಲ್ಲ_ಕರೆಸಿಕೊಳ್ಳಲು_ನನಗೆ_ಇಷ್ಟವೂ_ಇಲ್ಲ #ಅದು_ಕಪಟದ_ಮುಖವಾಡ_ಅಂತ_ಅನ್ನಿಸಿದೆ #ಸನ್ಮಾನ_ಪ್ರಶಸ್ತಿಗಳೂ_ನನಗೆ_ಇಷ್ಟವಿಲ್ಲ #ಸಭೆ_ಸಮಾರಂಭದಲ್ಲೂ_ಭಾಗವಹಿಸುವುದಿಲ್ಲ #ನನ್ನ_ಹೆಸರೂ_ಪ್ರಚಾರಕ್ಕೂ_ಬೇಡವೇ_ಬೇಡ ಇತ್ತೀಚಿಗೆ ಗೆಳೆಯರು ಅವರ ಗೆಳೆಯರೊಡನೆ ಬಂದಾಗ ನನ್ನನ್ನು ಅವರ ಗೆಳೆಯರಿಗೆ ಪರಿಚಯಿಸುವಾಗ ನನ್ನ ಮೇಲಿನ ಅವತಾರಗಳನ್ನೆಲ್ಲ ಉಪಮೆಗಳ ಜೊತೆ ಅವರಿಗೆ ವಿವರಿಸುವಾಗ ನಾನು ನನ್ನ ತಲೆ ನಕರಾತ್ಮಕವಾಗಿ ತಿರುಗಿಸಿದೆ... #ಹಾಗಾದರೆ_ನಾನ್ಯಾರು?... ಜನಪರ ಹೋರಾಟಗಳಲ್ಲಿ ಭಾಗವಹಿಸಿದ್ದು ಹೌದು, ರಾಜಕೀಯ ಪಕ್ಷಗಳ ಸಂಘಟನೆಯಲ್ಲಿ ಇದ್ದಿದ್ದು ಹೌದು, ಜನಪ್ರತಿನಿಧಿ ಆಗಿದ್ದು ಹೌದು, ಪತ್ರಿಕೆಗಳಿಗೆ ವರದಿ ಲೇಖನ ಬರೆದಿದ್ದು ಹೌದು, ಕೃಷಿಯಲ್ಲಿ ತೊಡಗಿದ್ದು ಹೌದು, ವ್ಯವಹಾರದಲ್ಲಿ ಹಲವು ರೂಪಾಂತರದಲ್ಲಿ ತೊಡಗಿದ್ದು ಹೌದು, ಕಥೆ ಕಾದಂಬರಿ ಬರೆದಿದ್ದು ಹೌದು, ಇತಿಹಾಸದ ಓದುಗ ಹೌದು, ನಮ್ಮ ಊರಾದ ಆನಂದಪುರಂ ಇತಿಹಾಸ ಪುಸ್ತಕ ಪ್ರಕಟಿಸಲಿರುವುದೂ ಹೌದು... ಹಾಗಂತ ನಾನು ಅದ್ಯಾವುದೂ ಅಲ್ಲ. ಎಂತೆಂಥಹ ಸಾಹಿತಿಗಳನ್ನು ಹತ್ತಿರದಿಂದ ನೋಡಿದ್ದೇನೆ ಅವರು ಇಹಲೋಕ ತ್ಯಜಿಸಿದ ಮರುದಿನ ಅವರ ಸಾಹಿತ್ಯ ಸಂಗ್ರಹದ ದೊಡ್ಡ ಶೋಕೇಸ್ ಖಾಲಿ ಮಾಡಿ ಗುಜರಿಗೆ ತೂಕಕ್ಕ...