ಆನಂದಪುರಂ ಇತಿಹಾಸ ಭಾಗ-71, ಆನಂದಪುರಂ ಸಮೀಪದ ಆಚಾಪುರದ ಸಮೀಪದ ತೀರ್ಥದ ದೇವಾಲಯದಲ್ಲಿರುವ ಶಿಲಾ ಶಾಸನದಲ್ಲಿ ಇರುವುದು ಮಾಚೇಶ್ವರ - ಆದಿತ್ಯ - ವಿಷ್ಣು ದೇವಾಲಯ ( 25- ಡಿಸೆಂಬರ್ -1079ರಲ್ಲಿ) ಪ್ರತಿಷ್ಠಾಪಿಸಿ ಭೂದಾನ ನೀಡಿದ ರಾಜ ಮಾಚಿದೇವರ ಶಾಸನ
#ಆನಂದಪುರಂ_ಇತಿಹಾಸ_ಭಾಗ_71 #ಆಚಾಪುರ_ತೀರ್ಥದಲ್ಲಿನ_ಹತ್ತನೇ_ಶತಮಾನದ_ಶಿಲಾಶಾಸನ. #ಆಚಾಪುರ_ಅಂದಾಸುರದ_ಇತಿಹಾಸಕ್ಕೆ_ಅತ್ಯಂತ_ಪ್ರಮುಖ_ದಾಖಲೆ_ಇದು. #ಕಲ್ಯಾಣಿ_ಚಾಲುಕ್ಯರಾಜ_ಇಮ್ಮುಡಿ_ಜಯಸಿಂಹನ_ಸಾಮಂತ_ಮಾಚಿರಾಜನ_ಶಾಸನ #ಹತ್ತನೆ_ಶತಮಾನದಲ್ಲಿ_ಆಚಾಪುರದ_ಹೆಸರು_ಮಾಚರಾಜಪುರ #ಈಗಿನ_ಅಂದಾಸುರ_ಆ_ಕಾಲದಲ್ಲಿ_ಮಾಚಿರಾಜನ_ರಾಜದಾನಿ_ಆಗಿತ್ತು. #ಆಚಾಪುರದ_ಜಮೀನ್ದಾರರಾಗಿದ್ದ_ದಿವಂಗತ_ಬಸಪ್ಪಗೌಡರು_ಶಿಲಾಶಾಸನ_ಸಂರಕ್ಷಿಸಿಟ್ಟಿದ್ದಾರೆ #ಮಾಚಿರಾಜ_ಸ್ಥಾಪಿಸಿದ_ಮಾಚೇಶ್ವರ_ಆದಿತ್ಯ_ವಿಷ್ಣು #ಈಗ_ಇರುವುದು_ಮಾಚೇಶ್ವರ_ಮಾತ್ರ_ಅದು_ಜನರ_ಬಾಯಲ್ಲಿ_ತೀರ್ಥದ_ಈಶ್ವರ. #ಕಾಲಾಂತರದಲ್ಲಿ_ಇಲ್ಲಿದ್ದ_ಆದಿತ್ಯ_ಮತ್ತು_ವಿಷ್ಣು_ದೇವರು_ಇಲ್ಲವಾಗಿದೆ 3). ಎಪಿಗ್ರಾಪಿಯ ಕ್ರ.ಸ. 109. ಕಾಲ ಮಾನ ಕ್ರಿ.ಶ. 1079AD. ಆಚಾಪುರ ತೀರ್ಥದಲ್ಲಿರುವ ಶಿಲಾ ಶಾಸನ. (5 ಅಡಿ ಎತ್ತರ X 2.5 ಅಡಿ ಅಗಲ ) ಎಪಿಗ್ರಾಪಿಯಾ ಕನಾ೯ಟಕ ಸಂಪುಟದಲ್ಲಿ 1902 ರಲ್ಲಿ ಆಗಿನ ಮೈಸೂರು ರಾಜ್ಯದ ಆರ್ಕಾಲಾಜಿಕಲ್ ಡಿಪಾರ್ಟ್ಮೆ೦ಟ್ ನಿರ್ದೇಶಕರಾಗಿದ್ದ ಬೆ೦ಜಮಿನ್ ಲೇವಿಸ್ ರೈಸ್ ರವರು ಸ್ವತಃ ಬಂದು ಆನಂದಪುರಂನ ಈ ಶಿಲಾ ಶಾಸನಗಳ ದಾಖಲು ಮಾಡಿರುವುದು ವಿಶೇಷ. ಈ ಶಿಲಾ ಶಾಸನದ ಕಾಲ ಮಾನ ಕ್ರಿ.ಶ.1079 ಅಂದರೆ 943 ವರ್ಷಗಳ ಹಿಂದಿನ ಈ ಶಿಲಾ ಶಾಸನ ಆನಂದಪುರಂ ಇತಿಹಾಸಕ್ಕೆ ಅತ್ಯಂತ ಮಹತ್ವದಾಗಿದೆ. ಈ ಶಿಲಾ ಶಾಸನ ಆಚಾಪುರದ ತೀರ್ಥದ ಹಾಲಿ ಈಶ್ವರ ದೇವಸ್ಥಾ...