Skip to main content

Posts

Showing posts with the label Rangoli it's not only folk arts but ancient history -tradition

Blog number 1184. ರಂಗೋಲಿ ಏನು ನಿನ್ನ ಮಹಿಮೆ? ನನ್ನ ಕಾದಂಬರಿಯಲ್ಲಿ ರಂಗೋಲಿ ಬಗ್ಗೆ ಒಂದು ಅದ್ಯಾಯವಿದೆ.

#ರOಗೋಲಿ ಏನಿದರ ಮಹತ್ವ?  ನಾನು ಬರೆದಿರುವ ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತ ಬೆಸ್ತರ ರಾಣಿ ಚಂಪಕಾ ಪುಸ್ತಕದಲ್ಲಿ ಚಂಪಕಾ ರಂಗೋಲಿ ಪ್ರವೀಣೆ, ರಾಜ ವೆಂಕಟಪ್ಪ ನಾಯಕರು ಅವಳು ಬಿಡಿಸುವ ರಂಗೋಲಿ ನೋಡಿಯೇ ಅವಳ ಮೇಲೆ ವ್ಯಾಮೋಹಗೊ೦ಡು ವಿವಾಹ ಆಗುತ್ತಾರೆ.   ಈ ಕಾದಂಬರಿಯಲ್ಲಿ....   "ಚಂಪಕಾಳ ರಂಗೋಲಿಯಲ್ಲಿ ಅದೆಂತಹ ಆಕಷ೯ಣೆ ಇದೆ"  ರಂಗೋಲಿಯ ಬಗ್ಗೆ ಆಸ್ಥಾನದ ಪಂಡಿತರ ಹತ್ತಿರ ಒಮ್ಮೆ ಚಚಿ೯ಸಿದಾಗ ಅವರು ಹೇಳಿದ್ದು ಅರುಣೋದಯದಲ್ಲಿ ಲಲನೆಯರು ತಮ್ಮ ಮನೆಯಂಗಳದಲ್ಲಿ ವಿವಿದ ರೀತಿಯ ರಂಗೋಲಿಯನ್ನ ರಚಿಸುವುದು ಭಾರತೀಯ ಸಂಸ್ಕೃತಿಯ ಒಂದು ಪ್ರಾಚೀನ ಸಂಪ್ರದಾಯವಾಗಿದೆ.ರಂಗೋಲಿಯು ಶಿಲ್ಪ ಕಲೆಗೂ ಆದಾರವಾಗಿತ್ತೆ೦ದು ತಿಳಿದು ಬಂದಿದೆ, ದೇವಾಲಯಗಳಲ್ಲಿ ದಾಮಿ೯ಕ ವಿಧಿ ವಿಧಾನಗಳಲ್ಲಿ ರಂಗೋಲಿ ಬಿಡಿಸುತ್ತಾರೆ.ಇದರಲ್ಲಿ ನಾನಾ ರೀತಿಯ ಕೋನಗಳು, ಆಕೃತಿಗಳು, ಆಯತಗಳು, ಮಂಡಲಗಳು ಇದೆ. ಸಮೂಹ ಚುಕ್ಕಿಗಳನ್ನ ಹಾಕಿ ಅದಕ್ಕೆ ರೇಖೆಗಳನ್ನ ಕೂಡಿಸಿ ಪ್ರಮಾಣಬದ್ಧವಾದ ರಂಗೋಲಿ ಹಾಕಿದರೆ ಮಾತ್ರ ರಂಗೋಲಿ ಸುಂದರವಾಗುತ್ತದೆ. ರಂಗೋಲಿಯಲ್ಲಿ ಆಧಿಕೃತ ಅಳತೆಗಳಿದೆ, ಈ ಕಲೆಯ ಪ್ರಾಚೀನತೆ ನಿಖರವಾಗಿ ತಿಳಿದಿಲ್ಲ, ವಿನ್ಯಾಸಗಳಂತೂ ಲೆಖ್ಖಕ್ಕೆ ಸಿಗುವುದಿಲ್ಲ.   ರಂಗೋಲಿಯು ದೇವರನ್ನ ಒಲಿಸಿಕೊಳ್ಳುವ ಒಂದು ಆರಾದನಾ ಸಂಪ್ರದಾಯವೂ ಆಗಿದೆ, ಬಣ್ಣ ಬಣ್ಣದ ಹಿಟ್ಟುಗಳಿ೦ದ, ಕಲ್ಲಿನ ಪುಡಿಗಳಿಂದ ರಂಗ...