ಬೌದ್ದರಿಗೆ ಪವಿತ್ರ ಆದರೆ ಭಾರತೀಯ ವಾಸ್ತು ಶಾಸ್ತ್ರ ವಿರೋದಿಸುವ ಪಾಪಸ್ ಕಳ್ಳಿಯ ಜಾತಿಯ ಡ್ರಾಗನ್ ಪ್ರೂಟ್ ಗೆ ಸಕಾ೯ರದ ಸಹಾಯ ಧನದ ಪ್ರೋತ್ಸಾಹ ಇದೆ.
#ಪಾಪಸು_ಕಳ್ಳಿ_ಎಂಬ_ಕ್ಯಾಕ್ಟಸ್ #ಅತಿಕಡಿಮೆ_ನೀರು_ದೀರ್ಘಬಾಳಿಕೆ. #ವಾಸ್ತು_ಶಾಸ್ತ್ರ_ಪೆಂಗ್_ಶು_ಬೆಂಬಲವಿಲ್ಲ #ಬೌದ್ಧರಿಗೆ_ಪವಿತ್ರ_ಸಸ್ಯ #ಡ್ರಾಗನ್_ಪ್ರೂಟ್_ಬೆಳೆಗೆ_ಸರ್ಕಾರದ_ಸಹಾಯಧನ. 2008ರಲ್ಲಿ ನನ್ನ ತಂದೆ ಮತ್ತು ತಾಯಿ ಹೆಸರಲ್ಲಿ ಶ್ರೀ ಕೃಷ್ಣ - ಸರಸ ಕನ್ವೆನ್ಷನ್ ಹಾಲ್ ಎಂಬ ನನ್ನ ಕನಸಿನ ಕಲ್ಯಾಣ ಮಂಟಪ ಕಟ್ಟಿಸಿದಾಗ ಅದರ ಅವರಣದಲ್ಲಿ ಹೂತೋಟ ಮಾಡಲಿಕ್ಕಾಗಿ #ಹಕ್ರೆ_ಗಿರೀಶ್ (ಈಗ ಎಡಜಿಗಳೆ ಮನೆ ಗ್ರಾಮ ಪ೦ಚಾಯತನ ಉಪಾಧ್ಯಕ್ಷರು ) ಸಿರ್ಸಿಯ ವಿನಾಯಕ ಭಟ್ಟರನ್ನು ಪರಿಚಯಿಸಿದ್ದರು (ಈಗ ಅವರು ಯಡೂರಪ್ಪರ ಪೆಸಿಟ್ ಕಾಲೇಜಿನ ಅವರಣದ ಗಾರ್ಡ್ ನ್ ಮಾಡಿದ್ದಾರೆ) ಅವರು ಕೆಲ ಆಲಂಕಾರಿಕಾ ಕ್ಯಾಕ್ಟಸ್ ಹಾಕಿದ್ದರು. ಈಗ 14 ವರ್ಷದಲ್ಲಿ ಅದು ವಿವಿಧ ಆಕಾರದಲ್ಲಿ ನಮ್ಮಲ್ಲಿ ಇದೆ ಅದರಿಂದ ನೂರಾರು ಮರಿ ಆಸಕ್ತರಿಗೆ ರವಾನೆಯೂ ಆಗಿದೆ. ಅಲಂಕಾರಿಕ ಪಪಾಸುಕಳ್ಳಿ ಹತ್ತು ವರ್ಷ ಬಾಳಿಕೆ ಬರುತ್ತದೆ ಅದೇ ವೈಲ್ಡ್ ಜಾತಿಯದ್ದು ನೂರು ವರ್ಷ ಬದುಕತ್ತದೆ ಎನ್ನುತ್ತಾರೆ. ಇದರ ಮೂಲ ಅಮೆರಿಕಾ ಇದು ಭಾರತಕ್ಕೆ ಪೋಚು೯ಗೀಸರಿಂದ ಬಂತು ಈಗ ಭಾರತದಲ್ಲಿ ಕಳೆ ಗಿಡವಾಗಿ ಹರಡಿದೆ. ಭಾರತೀಯರ ವಾಸ್ತು ಶಾಸ್ತ್ರ ಮತ್ತು ಹಿಂದೂ ಧರ್ಮದಲ್ಲಿ ಇದು ಅನಿಷ್ಟ ಎಂಬ ನಂಬಿಕೆ ದಟ್ಟವಾಗಿದೆ ಇದಕ್ಕೆ ಕಾರಣ ಇದು ಇತ್ತೀಚೆಗೆ ಬೇರೆ ಖಂಡಾಂತರವಾಗಿ ಬಂದ ಅಪರಿಚಿತ ಮುಳ್ಳು ಸಸ್ಯವಾಗಿರಬಹುದು ಆದರೆ ಬೌದ್ದ ದಮಿ೯...