#ನನ್ನ_ಬ್ಲಾಗ್_ಲೇಖನಗಳು_1717 #ಎರೆಡು_ಸಾವಿರ_ಲೇಖನ_ತಲುಪಲು_ಮೂರನೆ_ಸೆಲ್_ಫೋನ್ #ಮಗಳು_ಅಳಿಯ_ನೀಡಿದ_ಹೊಸ_ಫೋನ್ #ಇತ್ತೀಚೆಗೆ_ಸೆಲ್_ಫೋನ್_ಬಾಳಿಕೆ_ಬರುವುದಿಲ್ಲ_ಯಾಕೆ? #ಅಪ್_ಗ್ರೇಡ್_ಆದ_ಹಾಗೆ_ಶಿಥಿಲವಾಗುವುದು. #ಪ್ರತಿ_ವರ್ಷ_ಹೆಚ್ಚಾಗುವ_ಬೆಲೆ. ಬರಹಗಾರನಿಗೆ ತನ್ನ ಲೇಖನಗಳು ಸುರಕ್ಷಿತವಾಗಿಡುವ ಕಾಳಜಿ ಸದಾ ಇರುವಂತೆ ಆ ಲೇಖನಗಳು ಪುಸ್ತಕವಾಗಿ ಪ್ರಕಟವಾಗಲಿ ಎಂಬ ಹಂಬಲವೂ ಇರುತ್ತದೆ. ಇವತ್ತಿನ ಆಧುನಿಕ ಸಾಮಾಜಿಕ ಜಾಲ ತಾಣದಲ್ಲಿ ಹಾಳೆಯಲ್ಲಿ ಬರೆದಿಡುವ ಕೆಲಸ ಇಲ್ಲ, ಪೆನ್ನು ಇಂಕು ಬೇಕಾಗಿಲ್ಲ ಮೊಬೈಲ್ ಫೋನ್ ನಲ್ಲಿ ಬರೆದದ್ದು ಬ್ಲಾಗ್ ನಲ್ಲಿ ಸೇವ್ ಮಾಡಿದರೆ ಆಯಿತು. ಈ ರೀತಿ 2017 ಜನವರಿ 1 ರಿಂದ ಪ್ರಾರಂಬಿಸಿದ ನನ್ನ ಬ್ಲಾಗ್ ನಲ್ಲಿ ಇವತ್ತಿನ ಈ ಲೇಖನ ಸೇರಿ 1717ನೇ ಲೇಖನ ಆಗಿದೆ, ಈಗಾಗಲೇ 2 ಸೆಲ್ ಫೋನ್ ಗಳು ಶಿಥಿಲವಾಗಿದೆ ಈಗ 3 ನೇ ಹೊಸ ಸೆಲ್ ಫೋನ್ ಮಗಳು ಅಳಿಯ ಕಳಿಸಿದ್ದಾರೆ ಇದರಲ್ಲಿ ಹಿಂದಿನ ಫೋನಿಗಿಂತ 4 ಪಟ್ಟು ಕಾರ್ಯಕ್ಷಮತೆ ಇದೆ ಮತ್ತು ನನ್ನ ಹಿಂದಿನ ಫೋನಿನ 2 ಪಟ್ಟು ಬೆಲೆ ಜಾಸ್ತಿ. ನಾನು ಯಾರಿಂದಲೂ ಉಡುಗೊರೆ ಸ್ವೀಕರಿಸುವುದಿಲ್ಲ ಎ೦ದು ಗೊತ್ತಿದ್ದ ಮಗಳು ಫೋನ್ ನನಗೆ ತಲುಪುವ ಅಂತಿಮ ಘಳಿಗೆಯಲ್ಲಿ ಅಳಿಯರಿಂದ ಫೋನ್ ಕಳಿಸಿದ ಸುದ್ದಿ ತಿಳಿಸಿದ್ದಾಳೆ ಮತ್ತು ಇದು ಉಡುಗೊರೆ ಅಲ್ಲ ನಿಮ್ಮ ನಿರಂತರ ಬರವಣಿಗೆಗೆ ತಮ್ಮ ಸಣ್ಣ ಪಾಲು ಎಂದಿದ್ದಾರೆ. ಇವರ ಸಹೃದಯೀ...