Blog number 1186. ಎಸ್ ಆರ್ ಕೃಷ್ಣಪ್ಪ ಅವರನ್ನು SRK ಎಂದೇ ಅವರ ವಿದ್ಯಾರ್ಥಿಗಳು ಕರೆಯುತ್ತಾರೆ, ಇವರು ಆನಂದಪುರಂನ ಸಮಸ್ತ ಅಭಿವೃದ್ದಿಯ ಪ್ರೇರಕರಾಗಿದ್ದರು.
#SRK ಅಂದರೆ ಆನಂದಪುರಂನ ಸಮಸ್ತ ಅಭಿವೃದ್ಧಿ ಪ್ರೇರಕರು. #ಎಸ್.ಆರ್.ಕೃಷ್ಣಪ್ಪ. #ಅವರ ಅಭಿನಂದನಾ ಗ್ರಂಥದಲ್ಲಿ ನನಗೆ ಬರೆಯಲು ಸಿಕ್ಕಿದ ಅವಕಾಶ ನನ್ನ ಪುಣ್ಯ ಎಂದು ಬಾವಿಸಿದ್ದೇನೆ. "SRK ಅಂದರೆ ಆನಂದಪುರಂನ ಸಮಸ್ತ ಅಭಿವೃದ್ದಿಗೆ ಪ್ರೇರಕರು" ಹಾಗಂತ ನಾನು ಅವರ ಅಭಿನಂದನಾ ಗ್ರಂಥದಲ್ಲಿ ಬರೆದ ಲೇಖನ. ಅವರನ್ನ ನಮ್ಮ ಬಾಲ್ಯದಲ್ಲಿ ದೂರದಿಂದಲೇ ನೋಡಿದ್ದೆ ಆದರೆ ಅವರ ಜೊತೆ ಕುಳಿತು ಮಾತಾಡಿದ್ದು ಇತ್ತೀಚಿಗೆ, ಅವರ ಬಗ್ಗೆ ಅಭಿನಂದನಾ ಗ್ರಂಥ ತರುವ ಸಂದಭ೯ ಸಂಪಾದಕರಾದ ಎಸ್.ಎಂ.ಗಣಪತಿ ನನ್ನದೊಂದು ಲೇಖನ ಕೇಳಿದ್ದರು, ಆಗ ನಾನು ನನ್ನ ಅಣ್ಣ ಮತ್ತು ಅಕ್ಕಂದಿರಿಗೆ ಅವರು ಗುರುಗಳು,ನಾನು ಆ ವಯಸ್ಸಿಗೆ ಬರುವಾಗ ವಗ೯ವಾಗಿದ್ದರು ಅಂದೆ ಪರವಾ ಇಲ್ಲ ನೀವು ಜಿಲ್ಲಾ ಪಂಚಾಯತ್ ಸದಸ್ಯರಾದವರು SRK ಬಗ್ಗೆ ನಿಮ್ಮ ಅನುಭವ ಬರೆಯಿರಿ ಅಂದರು. ನಾನು ಒಂದು ಲೇಖನ ಬರೆದೆ, ಅದರಲ್ಲಿ ನಮ್ಮ ಬಾಲ್ಯದಲ್ಲಿ ಅವರು ಯಾವ ರೀತಿ ಪ್ರೇರಣೆ ಆದರು ಮತ್ತು ಅವರು ಕರೆಸುತ್ತಿದ್ದ ವಿಷೇಷ ಸಾದಕರನ್ನ ನೋಡಿ ಅವರ ಮಾತು ಕೇಳಿ ನಮ್ಮ ಜೀವನದಲ್ಲಿ ಯಾವ ರೀತಿ ಬದಲಾವಣೆ ಆಯಿತು ಹಾಗು ಇಡೀ ಆನಂದಪುರ ಆ ಕಾಲದಲ್ಲಿ ಸಣ್ಣ ಹಳ್ಳಿ ಇಲ್ಲಿನ ಬದರಿನಾರಾಯಣ್ ಅಯ್ಯOಗಾರ ಕುಟುಂಬ ದೊಡ್ಡ ಇನಾಂದಾರರು, ಅವರು ಶಾಸಕರು, ಸಂಸದರು ಮತ್ತು ವಿದ್ಯಾಮಂತ್ರಿಗಳಾದವರು, ಅವರ ಕುಟುಂಬಕ್ಕೆ ಶೃಂಗೇರಿ ಮಠಕ್ಕೆ ವಷ್...