Skip to main content

Posts

Showing posts with the label 2026 huj mecca yatre

4006. ಮೆಕ್ಕಾ ಯಾತ್ರೆ / ಹಜ್ ಯಾತ್ರೆ 2026

ಹಜ್_ಯಾತ್ರೆ (ಭಾಗ-1)   ಇಸ್ಲಾಂ ಧರ್ಮದಲ್ಲಿ ಹಜ್ ಯಾತ್ರೆ ವಾರ್ಷಿಕ ತೀರ್ಥಯಾತ್ರೆಯಾಗಿದೆ.     2026ರ ( ಹಿಜರ ಶಕೆ 1447 AH)  ಸೌದಿ ಅರೇಬಿಯಾದಲ್ಲಿ ಚಂದ್ರನ ವೀಕ್ಷಣೆಗೆ ಒಳಪಟ್ಟುಮೇ ತಿಂಗಳ ದಿನಾಂಕ 25-30 ರ ಪ್ರಮುಖ ದಿನಗಳನ್ನು ನಿರೀಕ್ಷಿಸಲಾಗಿದೆ.   ಹಜ್ ಮೆಕ್ಕಾ ಯಾತ್ರೆಯಲ್ಲಿ ಭಾರತದಿಂದ ಎಷ್ಟು ಇಸ್ಲಾಂ ಧರ್ಮದ ಅನುಯಾಯಿಗಳು ಭಾಗವಹಿಸುತ್ತಾರೆ?...   ಇದಕ್ಕೆ ಮಾನದಂಡ ಏನು?... ಇತ್ಯಾದಿ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರದ ಮೂಲಕ ಮಾಹಿತಿ ನೀಡುವ ಸರಣಿ ಲೇಖನ ಓದಿ.      ಈ ವರ್ಷ 2026ರ ಹಜ್ ಯಾತ್ರೆಗೆ ಅಲ್ಲಿನ ಸೌದಿ ಅರೇಬಿಯಾ ಸರ್ಕಾರ ಮತ್ತು ಭಾರತ ಸರ್ಕಾರಗಳ ಒಪ್ಪಂದದಂತೆ ನಿಗದಿ ಪಡಿಸಿದ ಒಂದು ಲಕ್ಷದ ಎಪ್ಪತ್ತೈದು ಸಾವಿರದ ಇಪ್ಪತ್ತೈದು ಇಸ್ಲಾಂ ಧರ್ಮಿಯ ಯಾತ್ರಿಗಳು ಮಾತ್ರ ಭಾರತದಿಂದ ಹಜ್ ಯಾತ್ರೆ ಮಾಡಲು ಸಾಧ್ಯವಿದೆ.   ಸೌದಿ ಅರೇಬಿಯಾ ಜೊತೆಗಿನ ಹೊಸ ದ್ವಿಪಕ್ಷೀಯ ಒಪ್ಪಂದದ ಅಡಿಯಲ್ಲಿ ಭಾರತವು 2026 ಕ್ಕೆ 175,025 ಹಜ್ ಯಾತ್ರೆಗೆ ಅವಕಾಶಗಳನ್ನು ಪಡೆದುಕೊಂಡಿದೆ, ಕಳೆದ ವರ್ಷ 2025ರಲ್ಲೂ ಇಷ್ಟೇ ಸಂಖ್ಯೆಯ ಯಾತ್ರಿಗಳು ಅವಕಾಶ ಕಲ್ಪಿಸಲಾಗಿತ್ತು.   ಭಾರತ ದೇಶ ವಿಶ್ವದ ಎರಡನೆ ಅತಿ ಹೆಚ್ಚು ಹಜ್ ಯಾತ್ರಿಗಳು ಭಾಗವಹಿಸಲು ಅವಕಾಶ ಪಡೆದ ದೇಶವಾಗಿದೆ.   ವಿಶ್ವದ ಅತಿ ಹೆಚ್ಚು ಹಜ್ ಯಾತ್ರಿಗಳ ಅವಕಾಶ ಪಡೆಯುವ ದೇಶ ಇಂಡೋನೇಷಿಯ, ಅಲ...