Skip to main content

Posts

Showing posts with the label Tank bunds constructed in15-16 century then they put these naked stone statues for enrichment of soil and crops

Blog number 1683. ಶಾಸನ ರಹಿತ ಶಿಲ್ಪಗಳಾದ ಫಲವತ್ತತೆಯ ಸಂಕೇತವಾದ ಶಿವಮೊಗ್ಗ ಜಿಲ್ಲೆಯ ಸೊರಬ-ಸಾಗರ ಮತ್ತು ಶಿಕಾರಿಪುರ ತಾಲ್ಲೂಕಿನಲ್ಲಿ 15 - 16 ನೇ ಶತಮಾನದಲ್ಲಿ ನಿಮಿ೯ಸಿದ ಕೆರೆ ದಂಡೆಯಲ್ಲಿ ಮಾತ್ರ ಇರುವ ನಗ್ನ ಸ್ತ್ರೀ-ಪುರುಶ ವಿಗ್ರಹ ಇದನ್ನು ರಾತ್ರಿ ವೇಳೆ ಗುಪ್ತವಾಗಿ ಅವಿವಾಹಿತರು ಪೂಜಿಸುವ ಪದ್ಧತಿ ಇದೆ ಅಂತೆ.

#ಶಾಸನರಹಿತ_ಶಿಲ್ಪಗಳು. #ನಮ್ಮ_ಚೆನ್ನಶೆಟ್ಟಿಕೊಪ್ಪದ_ಕೆರೆದಂಡೆಯ_ನಗ್ನ_ಸ್ತ್ರೀ_ಪುರುಷ_ವಿಗ್ರಹದ_ಮಾಹಿತಿ_ನೀಡಿದ #ಇತಿಹಾಸ_ಸಂಶೋದನೆ_ಸಂರಕ್ಷಣೆ_ಮತ್ತು_ಅಧ್ಯಯನದಲ್ಲಿ_ತೊಡಗಿರುವ  #ನಿವೃತ್ತ_ಕೃಷಿ_ಅಧಿಕಾರಿ_ಹಿರೇನೆಲ್ಲೂರು_ಪಾಂಡುರಂಗ_ ಕಳಸ  #ಇವರು_ಹುಟ್ಟಿದ್ದು_ಸಾಗರ_ತಾಲ್ಲೂಕಿನಲ್ಲಿ #ಇವರ_ತಂದೆ_ಮಡಸೂರುಲಿಂಗದಳ್ಳಿ_ಮಂಗಳಬೀಸು_ಶಾಲೆಯಲ್ಲಿ_ಶಿಕ್ಷಕರಾಗಿದ್ದ. #ಹೆಚ್_ಜಿ_ರುದ್ರಪ್ಪನವರು.   ಮೊನ್ನೆ ಸಾಗರ ತಾಲೂಕಿನ ಆನಂದಪುರಂ ಹೋಬಳಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಶೆಟ್ಟಿಕೊಪ್ಪದ ಕೆರೆ ದಂಡೆಯ ಶಾಸನದ ಬಗ್ಗೆ ಬರೆದ ಲೇಖನ ಪೋಸ್ಟ್ ಮಾಡಿದ್ದೆ ಈ ಕ್ಷಣದವರೆಗೆ 14 ಸಾವಿರದ 554 ಜನರಿಗೆ ತಲುಪಿದೆ ಮತ್ತು ಆ ಕೆರೆ ದಂಡೆಯ ಮೇಲಿನ ನಗ್ನ ಸ್ತ್ರೀ ಪುರುಷ ವಿಗ್ರಹದ ಪೋಟೋದ ಬಗ್ಗೆ ಬಹು ಜನರು ಮಾಹಿತಿ ಕೇಳಿದ್ದರು.   ನನಗೆ ಅಷ್ಟು ಹೆಚ್ಚು ಮಾಹಿತಿ ಇಲ್ಲವಾದ್ದರಿಂದ ನಾನು ಕಳಸದ ನಿವೃತ್ತ ಕೃಷಿ ಅಧಿಕಾರಿಗಳಾದ ಹಿರೇನೆಲ್ಲೂರು ಪಾಂಡುರಂಗ ಕಳಸ ಅವರನ್ನು ಸಂಪರ್ಕಿಸಿ ಮಾಹಿತಿ ಕೇಳಿದ್ದೆ.    ಚಿಕ್ಕಮಗಳೂರು ಜಿಲ್ಲೆಯ ಹಿರೇನೆಲ್ಲೂರಿನ ಮೂಲದವರಾದ ಇವರ ತಂದೆ ಶಿಕ್ಷಕರಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮಂಗಳಬೀಸು ಮತ್ತು ಮಡಸೂರು ಲಿಂಗದಳ್ಳಿ ಶಾಲೆಯಲ್ಲಿ ಕಾರ್ಯನಿರ್ವಹಿಸಿದ್ದರಂತೆ ಆದ್ದರಿಂದ ಸಾಗರ  ಪಾಂಡುರಂಗ ಅವರು ಹುಟ್ಟಿದ ಸ್ಥಳ ಸಾಗರ.    ಸ...