ಕಾಡಿನ_ಕತೆಗಾರ_ವಿಸ್ಮಯಗಳ_ನಾಯಕ
ತೇಜಸ್ವಿಗೆ_88ರ_ನಮನ!.
ಇವತ್ತು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ 88ನೇ ಹುಟ್ಟುಹಬ್ಬ (ಸೆಪ್ಟೆಂಬರ್ -8_1938).
ಕನ್ನಡ ಸಾಹಿತ್ಯ ಲೋಕದಲ್ಲಿ ಓದುಗರನ್ನು ಪುಸ್ತಕದ ಕಪಾಟುಗಳಿಂದ ಹೊರತಂದು, ಕಾಡು-ಮೇಡು ಅಲೆಯುವಂತೆ ಮಾಡಿದ ಅಪರೂಪದ ಮಾಂತ್ರಿಕ ಅವರು.
ತೇಜಸ್ವಿ ಕೇವಲ ಸಾಹಿತಿಯಾಗಿರಲಿಲ್ಲ ಅವರು ಪರಿಸರಪ್ರೇಮಿ, ಛಾಯಾಗ್ರಾಹಕ, ಚಿತ್ರಕಾರ, ಬೇಟೆಗಾರ, ಎಲ್ಲಕ್ಕಿಂತ ಹೆಚ್ಚಾಗಿ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಕೊಂಡಿಯಾಗಿದ್ದವರು.
ನಮ್ಮ ಕಾಲದ ಯುವಪಡೆಗೆ ಓದುವ ಹುಚ್ಚು ಹತ್ತಿಸಿದ್ದೇ ಅವರ ಬರಹಗಳು.
#ತೇಜಸ್ವಿ_ಜಗತ್ತು_ನಮಗೆ_ಕಲಿಸಿದ್ದೇನು?..
ವಿಸ್ಮಯ ಲೋಕದ ಅನಾವರಣ ‘#ಕರ್ವಾಲೋ’ ಹಿಡಿದು ಹಾರುವ ಓತಿಯನ್ನು ಹುಡುಕಿದ ಬಗೆಯಾಗಲಿ, ‘#ಜುಗಾರಿ_ಕ್ರಾಸ್’ ಮೂಲಕ ಮಲೆನಾಡಿನ ಕರಾಳ ಮುಖ ಹಾಗೂ ಸಾಹಸವನ್ನು ಪರಿಚಯಿಸಿದ್ದಾಗಲಿ ಇಂದಿಗೂ ಮೈನವಿರೇಳಿಸುತ್ತದೆ.
#ಕಿರಗೂರಿನ ಗಯ್ಯಾಳಿಗಳು ಗ್ರಾಮೀಣ ಬದುಕಿನ ಜೀವಂತಿಕೆ, ಅಲ್ಲಿನ ಗಟ್ಟಿತನ ಮತ್ತು ವ್ಯಂಗ್ಯವನ್ನು ಅವರಷ್ಟು ಸಹಜವಾಗಿ ಕಟ್ಟಿಕ್ಕೊಟ್ಟವರು ವಿರಳ.
ಪರಿಸರದ ಒಡನಾಟ ‘#ಮಿಲೇನಿಯಮ್_ಸರಣಿ’ ಪುಸ್ತಕಗಳ ಮೂಲಕ ವಿಜ್ಞಾನ, ಖಗೋಳ ಮತ್ತು ಪ್ರಾಣಿ-ಪಕ್ಷಿಗಳ ಲೋಕವನ್ನು ಸಾಮಾನ್ಯರಿಗೂ ಅರ್ಥವಾಗುವಂತೆ ಬರೆದದ್ದು ಅವರ ಹೆಗ್ಗಳಿಕೆ.
ಈ ಸರಣಿಯಲ್ಲಿ ಕನೆತ್ ಅಂಡರ್ಸನ್ ಅವರು ಬರೆದ ನರಭಕ್ಷಕ ಹುಲಿ ಶಿಕಾರಿಯ ಕನ್ನಡ ಅನುವಾದ ಮೈನವಿರೇಳುಸುವಂತೆ ಬಾವಾನುವಾದ ಮಾಡಿದ್ದಾರೆ ಅದರಲ್ಲಿ ನಮ್ಮೂರ ಸಮೀಪದ #ಬೆಳಂದೂರಿನ_ನರಭಕ್ಷಕ_ಪುಸ್ತಕ ಕೂಡ.
ಕವಿಶೈಲ ಉದ್ಘಾಟನೆ ದಿನ ಕುಪ್ಪಳ್ಳಿಯಲ್ಲಿ ಅಕಸ್ಮಿಕವಾಗಿ ಅವರು ನನ್ನ ಪಕ್ಕದಲ್ಲಿ ಬಂದು ಕುಳಿತಾಗ ಪರಿಚಯ ಮಾತು ಕಥೆ ಜೊತೆಗೆ ಈ ಪುಸ್ತಕದ ಬಗ್ಗೆ ಮಾತಾಡಿದ್ದೆ ಅದೇ ನನ್ನ ಅವರ ಮೊದಲ ಮತ್ತು ಕೊನೆಯ ಬೇಟೆ.
ಸರಳ ಬದುಕು ಅವರದ್ದು, ರಾಷ್ಟ್ರಕವಿ ಕುವೆಂಪು ಅವರ ಮಗನಾಗಿದ್ದರೂ ಆ ಹಮ್ಮು-ಬಿಮ್ಮುಗಳಾವುದೂ ಇಲ್ಲದೆ ಮೂಡಿಗೆರೆಯ ಕಾಫಿ ತೋಟದಲ್ಲಿ ಮಣ್ಣಿನ ಮಗನಾಗಿ ಬದುಕಿದ ನಿಜವಾದ 'ಅವಧೂತ'.
ತೇಜಸ್ವಿ ತೀರಿಕೊಂಡು ವರ್ಷಗಳೇ ಕಳೆದರೂ ಅವರ ವಿಚಾರಗಳು, ಪರಿಸರ ಕಾಳಜಿ ಮತ್ತು ಬರಹಗಳು ಇಂದಿಗೂ ಹಚ್ಚಹಸಿರು.
ಮರ-ಗಿಡ, ಹಕ್ಕಿ-ಪಿಕ್ಕಿ, ಕ್ರಿಮಿ-ಕೀಟಗಳಲ್ಲೂ ದೈವತ್ವ ಕಂಡ ಆ ಮಹಾನ್ ಜೀವಕ್ಕೆ ಹುಟ್ಟುಹಬ್ಬದ ಆದರದ ನಮನಗಳು.
ನಿಮ್ಮ ನೆಚ್ಚಿನ ತೇಜಸ್ವಿ ಕೃತಿ ಯಾವುದು? ಕಮೆಂಟ್‌ನಲ್ಲಿ ಹಂಚಿಕೊಳ್ಳಿ!..
#PoornachandraTejaswi #Tejaswi88 #KannadaLiterature #Karvalo #JugariCross #KPPoornachandraTejaswi #ಕನ್ನಡ
Comments
Post a Comment