Skip to main content

4198.ಸಂಯುಕ್ತ_ಮನವಿ_ಪತ್ರ_ಅರ್ಪಣೆ_ಆಗಲಿ


ಸಂಯುಕ್ತ_ಮನವಿ_ಪತ್ರ_ಅರ್ಪಣೆ_ಆಗಲಿ.

#ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ನಾಳೆ 19- ಸೆಫ್ಟೆಂಬರ್ - 2026 ಶನಿವಾರ ಆಗಮಿಸುವ ಮುಖ್ಯಮಂತ್ರಿಗಳಿಗೆ  ಜಿಲ್ಲೆಯ ಜನತೆ ಪರವಾಗಿ ಸಂಸದರು - ಶಾಸಕರೂ - ಪರಿಸರ ಸಂಘಟನೆಗಳು ಮತ್ತು ರೈತ ಸಂಘಟನೆಗಳು #ಸಂಯುಕ್ತ_ಮನವಿ ಪತ್ರ ಸಲ್ಲಿಸಬೇಕು.

 ಕಸ್ತೂರಿ ರಂಗನ್ ವರದಿ ಬಗ್ಗೆ ವಿಶೇಷ ಅಧಿವೇಶನ ಕರೆದಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಲೆನಾಡಿನ ಪಶ್ಚಿಮ ಘಟ್ಟದ ಜಿಲ್ಲೆಗಳ ಬೇಟಿ ಮಾಡುತ್ತಿದ್ದಾರೆ, ಇದಕ್ಕಾಗಿ ಅವರ ತೀರ್ಥಹಳ್ಳಿ ಬೇಟಿ ಬಗ್ಗೆ ಜನ ಸಾಮಾನ್ಯರಲ್ಲಿ ವಿಶೇಷ ಕುತೂಹಲ ಇದೆ.

#ಕಸ್ತೂರಿ_ರಂಗನ್_ವರದಿ_ಬಗ್ಗೆ_ವಿಶೇಷ_ಅಧಿವೇಶನ_ಪೂರ್ವದ_ಮುಖ್ಯಮಂತ್ರಿಗಳ_ಮಲೆನಾಡಿನ_ಜನಾಭಿಪ್ರಾಯದ_ಬೇಟಿ_ಸಂದರ್ಭದ ಈ ಸಭೆಗಳು ಸಾಮಾನ್ಯವಾಗಿ ಕೆಲವೇ ನಿಮಿಷಗಳದ್ದಾಗಿರುತ್ತದೆ.

 ಇದರ ಮಧ್ಯದಲ್ಲಿ ಅವರ ರಾಜಕೀಯ ಪಕ್ಷಗಳ ಶಕ್ತಿ ಪ್ರದರ್ಶನಗಳು ಇತ್ಯಾದಿಗಳಿಂದ ಮುಖ್ಯ ವಿಚಾರವೇ ಔಪಚಾರಿಕವಾಗಿ ಬದಲಾಗಿಬಿಡುತ್ತದೆ.

  ಇದರಿಂದ ಅವರಿಗೆ ಜಿಲ್ಲೆಯ ಸಮಸ್ಯೆ ಅರಿಯಲು ಸಾಧ್ಯವಿರುವುದಿಲ್ಲ ಇದು ಕೇವಲ ಸಾಂಕೇತಿಕ ಬೇಟಿ ಆಗಿರುತ್ತದೆ.

 ಇದನ್ನು ಸ್ಥಳೀಯ ಅವರ ಪಕ್ಷದ ಉಸ್ತುವಾರಿ ಮಂತ್ರಿ ಮತ್ತು ಜನಪ್ರತಿನಿದಿಗಳು ಹೇಗೆ ಪರಿಣಾಮಕಾರಿ ಆಗಿ ಹೇಗೆ ಆಯೋಜಿಸುತ್ತಾರೆ ಎಂದು ಕಾದು ನೋಡಬೇಕು.

  ಮುಖ್ಯ ಮಂತ್ರಿಗಳ ಈ ಬೇಟಿ ಮುಖ್ಯ ಉದ್ದೇಶ ಕಸ್ತೂರಿ ರಂಗನ್ ವರದಿಯ ಪರಿಸರ ಸೂಕ್ಷ್ಮ ವಲಯದಿಂದ ಜಿಲ್ಲೆಯ ಜನವಸತಿ ಪ್ರದೇಶಗಳನ್ನು ಸೇರಿಸಿ ನೀಡಿದ ಪ್ರಸ್ತಾವನೆ ಕಳೆದ ಆರು ಬಾರಿ ತಿರಸ್ಕಾರವಾಗಿ ಈಗ ಏಳನೆ ಬಾರಿಯ  ಅಧಿಸೂಚನೆಯನ್ನು ರಾಜ್ಯ ಸರ್ಕಾರ ಯಥಾವತ್ತಾಗಿ ಹಿಂದಿನ ಆರು ಬಾರಿಯಂತೆ ತಿರಸ್ಕರಿಸಬೇಕಾ? ... ಹಾಗಾದರೆ #ಹಸಿರು_ನ್ಯಾಯಪೀಠ / ಸರ್ವೋಚ್ಚ ನ್ಯಾಯಾಲಯ ಅಂತಿಮವಾಗಿ ಪರಿಸರ ಮತ್ತು ಪಶ್ಚಿಮ ಘಟ್ಟದ ಸಂರಕ್ಷಣೆಗೆ ವರದಿ ಯಥಾವತ್ತಾಗಿ ಜಾರಿ ಮಾಡಿದರೆ ಏನಾಗಲಿದೆ? ...

  ಕಸ್ತೂರಿ ರಂಗನ್ ವರದಿಯಲ್ಲಿ ಗ್ರೌಂಡ್ ಟ್ರೂಥ್ ಸಮೀಕ್ಷೆ ನಡೆಸಿ ಜನವಸತಿ ಪ್ರದೇಶಗಳನ್ನ ಪರಿಸರ ಸೂಕ್ಷ್ಮ ವಲಯದಿಂದ ಹೊರತು ಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಬೇಕಾ? ...

  ಇದು ರಾಜ್ಯ ಸರ್ಕಾರದ ವಿಶೇಷ ಅಧಿವೇಶನದಲ್ಲಿ ತೀರ್ಮಾನ ಆಗಲಿದೆ.

   ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲರೂ ಸೇರಿ ಒಕ್ಕೂರಲಿನಿಂದ  ಸಂಯುಕ್ತ ಮನವಿ ಅರ್ಪಿಸಿದರೆ ಸರ್ಕಾರಕ್ಕೆ ಒಂದು ದೃಡವಾದ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿದೆ.

 ಇದು ಶಿವಮೊಗ್ಗ ಜಿಲ್ಲೆಯ ಜನರ ಅತ್ಯಂತ ಪ್ರಬುದ್ಧ ಮತ್ತು ಸಮಯೋಚಿತ ನಿಲುವು ಕೂಡ ಆಗಲಿದೆ,ವಿಭಿನ್ನ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು ಮತ್ತು ರೈತ ಮುಖಂಡರು ಪ್ರತ್ಯೇಕ ಮನವಿ ಕೊಡುವುದರಿಂದ ಸರ್ಕಾರದ ಮಟ್ಟದಲ್ಲಿ ಆ ವಿಷಯದ ಗಂಭೀರತೆ ಕಡಿಮೆಯಾಗುತ್ತದೆ.

ಶಿವಮೊಗ್ಗ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ, ಕೃಷಿ ಸಂಕಷ್ಟ ಮತ್ತು ಪರಿಸರ ಸೂಕ್ಷ್ಮ ಪ್ರದೇಶಗಳ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳ ಮುಂದೆ ಮಂಡಿಸಬಹುದಾದ ಪ್ರಮುಖ ಬೇಡಿಕೆಗಳು ಇಲ್ಲಿದೆ.

   2023ರ ವಿದಾನಸಭೆ ಚುನಾವಣೆ ಪೂರ್ವದಲ್ಲಿ #ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಆಯನೂರಿಂದ ಶಿವಮೊಗ್ಗಕ್ಕೆ ಪಾದಯಾತ್ರೆ ನಡೆಸಿ ಶಿವಮೊಗ್ಗದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸಂತ್ರಸ್ತರ ಸಮಸ್ಯೆ, ಅರಣ್ಯ ಭೂಮಿ ಸಮಸ್ಯೆ ಅಧಿಕಾರಕ್ಕೆ ಬಂದರೆ ತಕ್ಷಣ ಬಗೆಹರಿಸುವುದಾಗಿ ನೀಡಿದ ಭರವಸೆ ಸರ್ಕಾರ ಬಂದು ನಾಲ್ಕು ವರ್ಷಗಳಾಗುತ್ತಾ ಬಂದರೂ ಹುಸಿ ಆಗಿದೆ ಈಡೇರಿಲ್ಲ ಎಂಬ ಕೂಗು ಬರುತ್ತಿದೆ.

    ಆದ್ದರಿಂದ ಶಿವಮೊಗ್ಗ ಹಾಗೂ ಮಲೆನಾಡಿನ ಹಿತದೃಷ್ಟಿಯಿಂದ ಎಲ್ಲ ಶಾಸಕರು, ಸಂಸದರು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಪಕ್ಷಾತೀತವಾಗಿ ಒಗ್ಗೂಡಿ ನೀಡಬಹುದಾದ ಸಂಯುಕ್ತ ಮನವಿ ಪತ್ರದ (#Joint_Memorandum) ಮಾದರಿ ಹೀಗಿರಲಿ.

#ಸಂಯುಕ್ತ_ಮನವಿ_ಪತ್ರ_ಹೀಗಿರಲಿ

​ದಿನಾಂಕ: 19 - ಸೆಪ್ಟೆಂಬರ್-2026.
ಸ್ಥಳ: ಶಿವಮೊಗ್ಗ.

​ಗೆ,
#ಮಾನ್ಯ_ಮುಖ್ಯಮಂತ್ರಿಗಳು,
#ಕರ್ನಾಟಕ_ಸರ್ಕಾರ,
ವಿಧಾನಸೌಧ, ಬೆಂಗಳೂರು.

 #​ವಿಷಯ: ಪಶ್ಚಿಮ ಘಟ್ಟ ವ್ಯಾಪ್ತಿ ಪ್ರದೇಶದ ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಸಮಸ್ಥ ಜನರ ಮನವಿ.

 ​ಮಾನ್ಯ ಮುಖ್ಯಮಂತ್ರಿಗಳಲ್ಲಿ ವಿನಂತಿ

#ನಮ್ಮ_ಶಿವಮೊಗ್ಗ_ಜಿಲ್ಲೆಯ_ಪ್ರಮುಖ_ಸಂಯುಕ್ತ_ಬೇಡಿಕೆಗಳು.

#ಕಸ್ತೂರಿ_ರಂಗನ್_ವರದಿ_ಪರಿಷ್ಕರಣೆ.
ಮಲೆನಾಡಿನ ಜನವಸತಿ ಪ್ರದೇಶಗಳು, ಕೃಷಿ ಭೂಮಿಯನ್ನು ಪರಿಸರ ಸೂಕ್ಷ್ಮ ವಲಯದಿಂದ ಕೈಬಿಟ್ಟು ನೈಜ ಗಡಿ ಗುರುತಿಸುವಂತೆ ಕೇಂದ್ರಕ್ಕೆ ಸ್ಪಷ್ಟ ಶಿಫಾರಸು.

 ​#ಕೃಷಿ_ಮತ್ತು_ತೋಟಗಾರಿಕೆ
​ಅಡಿಕೆ ಎಲೆ ಚುಕ್ಕಿ ಮತ್ತು ಹಳದಿ ರೋಗಕ್ಕೆ ಶಾಶ್ವತ ಪರಿಹಾರ ನೀಡಲು, ಮಲೆನಾಡು ಭಾಗದ ರೈತರ ಬೆನ್ನೆಲುಬಾಗಿರುವ ಅಡಿಕೆಗೆ ಬಾಧಿಸುತ್ತಿರುವ ರೋಗಗಳ ನಿಯಂತ್ರಣಕ್ಕೆ ವಿಶೇಷ ಸಂಶೋಧನಾ ತಂಡ ರಚನೆ, ಸೂಕ್ತ ಪರಿಹಾರ ಪ್ಯಾಕೇಜ್ ಹಾಗೂ ಪರ್ಯಾಯ ಬೆಳೆ ಪ್ರೋತ್ಸಾಹ.

 ​ಕಾಡುಪ್ರಾಣಿ ಹಾವಳಿಗೆ ಶಾಶ್ವತ ತಡೆಗಾಗಿ ಕಾಡಾನೆ, ಮಂಗ ಮತ್ತು ಕಾಡುಹಂದಿಗಳ ಉಪಟಳದಿಂದ ಬೆಳೆ ಹಾಗೂ ಜೀವ ಹಾನಿ ತಡೆಯಲು ರೈಲ್ವೆ ಬ್ಯಾರಿಕೇಡ್, ಸೋಲಾರ್ ಬೇಲಿ ವಿಸ್ತರಣೆ ಮತ್ತು ತ್ವರಿತ ಬೆಳೆ ನಷ್ಟ ಪರಿಹಾರ ವಿತರಣೆ.

  ​#ವಾಣಿಜ್ಯ_ಬೆಳೆಗಳ ಬೆಳೆಗಾರರಿಗೆ ಬೆಂಬಲ ಬೆಲೆ ಮತ್ತು ಸಂಸ್ಕರಣಾ ಘಟಕಗಳ ಬಗ್ಗೆ.
 ಶುಂಠಿ, ಮೆಕ್ಕೆಜೋಳ ಹಾಗೂ ಭತ್ತ ಬೆಳೆಯುವ ರೈತರಿಗೆ ಸ್ಥಳೀಯವಾಗಿಯೇ ಮೌಲ್ಯವರ್ಧನೆ ಮತ್ತು ಸಂಸ್ಕರಣಾ ಘಟಕಗಳ ಸ್ಥಾಪನೆ.

#ಮಲೆನಾಡಿನ_ಅರಣ್ಯ_ಹಕ್ಕು ಮತ್ತು ಭೂ ಸಮಸ್ಯೆಗಳು.
ದಶಕಗಳಿಂದ ಬಾಕಿ ಉಳಿದಿರುವ ಶರಾವತಿ ಮತ್ತು ಲಿಂಗನಮಕ್ಕಿ ಜಲಾಶಯ ಸಂತ್ರಸ್ತರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಶಾಶ್ವತ ಜಮೀನು ಹಕ್ಕುಪತ್ರ ವಿತರಣೆ.

#ಬಗರ್_ಹುಕುಂ ಸಾಗುವಳಿ ಸಕ್ರಮಕ್ಕಾಗಿ ಸಣ್ಣ ಮತ್ತು ಅತಿ ಸಣ್ಣ ರೈತರ 50/53/57 ಅರ್ಜಿಗಳ ಶೀಘ್ರ ವಿಲೇವಾರಿ.

#ಮೂಲಸೌಕರ್ಯ ಮತ್ತು ಸಂಪರ್ಕಕ್ಕಾಗಿ ​ವಿಮಾನ ನಿಲ್ದಾಣಕ್ಕೆ ಪೂರ್ಣ ಪ್ರಮಾಣದ ಕನೆಕ್ಟಿವಿಟಿ.
  ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಿಂದ ಹೆಚ್ಚಿನ ಪ್ರಮುಖ ನಗರಗಳಿಗೆ ನಿಯಮಿತ ವಿಮಾನಯಾನ ಮತ್ತು ನೈಟ್ ಲ್ಯಾಂಡಿಂಗ್ ವ್ಯವಸ್ಥೆಯ ಶೀಘ್ರ ಜಾರಿ.

#ರೈಲ್ವೆ_ಯೋಜನೆಗಳ ತ್ವರಿತ ಅನುಷ್ಠಾನ. ಶಿವಮೊಗ್ಗ–ಶಿಕಾರಿಪುರ–ರಾಣೆಬೆನ್ನೂರು ಹಾಗೂ ಶಿವಮೊಗ್ಗ–ಹರಿಹರ ರೈಲು ಮಾರ್ಗ ಕಾಮಗಾರಿಗೆ ರಾಜ್ಯದ ಪಾಲಿನ ಅನುದಾನ ಶೀಘ್ರ ಬಿಡುಗಡೆ.

#ಘಾಟಿ_ರಸ್ತೆಗಳ ಬಲವರ್ಧನೆ. ಆಗುಂಬೆ, ಹುಲಿಕಲ್ ಹಾಗೂ ಮಾಸ್ತಿಕಟ್ಟೆ ಘಾಟಿ ರಸ್ತೆಗಳ ನಿರಂತರ ನಿರ್ವಹಣೆ, ಸುರಂಗ ಅಥವಾ ಪರ್ಯಾಯ ಮಾರ್ಗಗಳ ವೈಜ್ಞಾನಿಕ ಪರಿಶೀಲನೆ.

#ಕೈಗಾರಿಕೆ, ಉದ್ಯೋಗ, ಪ್ರವಾಸೋದ್ಯಮ,​ಐಟಿ ಪಾರ್ಕ್ ಮತ್ತು ಕೈಗಾರಿಕಾ ಹೂಡಿಕೆ.
 ಶಿವಮೊಗ್ಗದ ಐಟಿ ಪಾರ್ಕ್ ಸಕ್ರಿಯಗೊಳಿಸಿ ಸ್ಥಳೀಯ ಯುವಕರಿಗೆ ಉದ್ಯೋಗ ಕಲ್ಪಿಸಲು ವಿಶೇಷ ಐಟಿ/ಬಿಟಿ ಪ್ರೋತ್ಸಾಹ ಧನ.

#ಜೋಗ_ಜಲಪಾತ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ.
   ದೇಶದ ಅತ್ಯಂತ ಎತ್ತರದ ಜಲಪಾತವಾದ ವರಾಹಿ ನದಿಯ ಕುಂಚಿಕಲ್ ಮತ್ತು ಶರಾವತಿ ನದಿಯ ಜೋಗ್ ಫಾಲ್ಸ್
ಸೇರಿದಂತೆ ಜಿಲ್ಲೆಯ ಐತಿಹಾಸಿಕ ತಾಣಗಳಾದ ಬಿದನೂರು ನಗರ ಕೋಟೆ, ಕೆಳದಿ, ಇಕ್ಕೇರಿ, ಸಾಗರ ತಾಲೂಕಿನ ಗೆಣಸಿನಕುಣಿ ಗ್ರಾಮದಲ್ಲಿರುವ ರಾಣಿ ಚೆನ್ನ ಬೈರಾದೇವಿ ಸಮಾಧಿ ಸ್ಥಳ, ಶಿಕಾರಿಪುರದ ಕದಂಬರ ತಾಳಗುಂದ ಮುಂತಾದ ಐತಿಹಾಸಿಕ ಸ್ಥಳಗಳ ಅಭಿವೃದ್ಧಿ ಮತ್ತು ಪರಿಸರ ಪ್ರವಾಸೋದ್ಯಮಕ್ಕೆ ಮೂಲಸೌಕರ್ಯ ವಿಸ್ತರಣೆ.

  ಜಿಲ್ಲೆಯ ಅನೇಕ #ಐತಿಹಾಸಿಕ ಸ್ಥಳಗಳು ಪುರಾತತ್ವ ಇಲಾಖೆ ವ್ಯಾಪ್ತಿಗೆ ಸೇರದೆ ಅರಣ್ಯ ಭೂಮಿ ಆಗಿಯೇ ಉಳಿದಿದೆ ಇದರಿಂದ ಈ ಸ್ಥಳಗಳು ಅಭಿವೃದ್ಧಿ ಸಂಶೋದನೆಯಿಂದ ಹೊರಗುಳಿದಿದೆ ಈ ಸ್ಥಳಗಳನ್ನ ಪುರಾತತ್ವ ಇಲಾಖೆಗೆ ವಹಿಸಿಕೊಡಬೇಕು.

 ​#ಆರೋಗ್ಯ ಮತ್ತು ಸಾರ್ವಜನಿಕ ಸೇವೆಗಳು.
​ಮೆಗ್ಗಾನ್ ಆಸ್ಪತ್ರೆ ಮೇಲ್ದರ್ಜೆಗೇರಿಸುವುದು,ಸಿಮ್ಸ್ (SIMS) ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ವಿಭಾಗಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವಂತೆ ವೈದ್ಯರು ಮತ್ತು ಸಿಬ್ಬಂದಿ ನೇಮಕಾತಿ.

#ಕ್ಯಾಸನೂರು ಕಾಡಿನ ಕಾಯಿಲೆ ಸಂಶೋಧನೆ.
  ಮಲೆನಾಡು ಭಾಗದಲ್ಲಿ ಕೆಎಫ್‌ಡಿ ಲಸಿಕೆ ಲಭ್ಯತೆ ಮತ್ತು ಸಂಶೋಧನಾ ಕೇಂದ್ರಕ್ಕೆ ವಿಶೇಷ ಅನುದಾನ.

ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಆರ್ಥಿಕತೆಯ ಜೀವನಾಡಿ #ಅಡಿಕೆ ಕೃಷಿ.
 
  ​ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಾಜ್ಯದ ಅಡಿಕೆ ಬೆಳೆಯುವ ಜಿಲ್ಲೆಗಳ ಸರ್ವಪಕ್ಷ ಶಾಸಕರು ಮತ್ತು ಸಂಸದರ ನಿಯೋಗವನ್ನು ನವದೆಹಲಿಗೆ ಕೊಂಡೊಯ್ದು, ಪ್ರಧಾನಮಂತ್ರಿಗಳು ಮತ್ತು ಕೇಂದ್ರ ಆರೋಗ್ಯ-ಕೃಷಿ ಸಚಿವರನ್ನು ಭೇಟಿ ಮಾಡುವುದು.

  WHO ಮುಂದೆ ಭಾರತದ ಪರವಾಗಿ ಅಧಿಕೃತ ಮರುಪರಿಶೀಲನಾ ಪ್ರಸ್ತಾವನೆ ಸಲ್ಲಿಸಲು ಕೇಂದ್ರದ ಮೇಲೆ ಒತ್ತಡ ತರುವುದು.

​ರಾಜ್ಯ ಸರ್ಕಾರದಿಂದ ಸ್ವತಂತ್ರ ವೈಜ್ಞಾನಿಕ ಅಧ್ಯಯನವನ್ನು ಶುದ್ಧ ಅಡಿಕೆ ಮತ್ತು ಔಷಧೀಯ ಬಳಕೆಯ ನೈಜ ಪರಿಣಾಮಗಳ ಕುರಿತು AIIMS, ICMR ಮತ್ತು ಆಯುಷ್ ತಜ್ಞರನ್ನೊಳಗೊಂಡ ಉನ್ನತ ಮಟ್ಟದ ವೈಜ್ಞಾನಿಕ ಸಮಿತಿ ರಚಿಸಿ, ರಾಜ್ಯ ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಟ್ಟು ವರದಿ ಸಿದ್ಧಪಡಿಸುವುದು.

​ಸರ್ವೋಚ್ಚ ನ್ಯಾಯಾಲಯ ಹಾಗೂ ಇತರ ನ್ಯಾಯಮಂಡಳಿಗಳಲ್ಲಿ ಅಡಿಕೆ ನಿಯಂತ್ರಣ/ನಿಷೇಧ ಕುರಿತ ವ್ಯಾಜ್ಯಗಳು ಎದುರಾದಾಗ ರಾಜ್ಯ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಅವರ ಮೂಲಕ ಬಲಿಷ್ಠ ವೈಜ್ಞಾನಿಕ ಹಾಗೂ ರೈತರ ಪರ ವಾದ ಮಂಡಿಸುವುದು.

​ಪರ್ಯಾಯ ಮೌಲ್ಯವರ್ಧನೆ ಮತ್ತು ಕೈಗಾರಿಕಾ ನೀತಿಯಲ್ಲಿ ಅಡಿಕೆಯನ್ನು ಕೇವಲ ಜಗಿಯುವ ಉತ್ಪನ್ನವಾಗಿ ಉಳಿಸದೆ, ಅದರ ತ್ಯಾಜ್ಯ, ಹಾಳೆ ಮತ್ತು ಕಾಯಿಯಿಂದ ಔಷಧ, ಸೌಂದರ್ಯವರ್ಧಕ ಹಾಗೂ ಜೈವಿಕ ಉತ್ಪನ್ನಗಳನ್ನು ತಯಾರಿಸುವ ಸ್ಥಳೀಯ ಕೈಗಾರಿಕೆಗಳಿಗೆ ಶಿವಮೊಗ್ಗದಲ್ಲಿ ವಿಶೇಷ ಕ್ಲಸ್ಟರ್ ಮಂಜೂರು ಮಾಡುವುದು.

​ಈ ವಿಷಯದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮರೆತು, ಜಿಲ್ಲೆಯ ಜನತೆಯ ಭವಿಷ್ಯದ ರಕ್ಷಣೆಗಾಗಿ ನಾವು ಒಂದಾಗಿದ್ದೇವೆ. 

  ತಾವು ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣವೇ ಸಚಿವ ಸಂಪುಟ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಬೇಕಾಗಿ ಕೋರುತ್ತೇವೆ.

​ಸಂಯುಕ್ತ ಸಹಿದಾರರು (ಶಿವಮೊಗ್ಗ ಜಿಲ್ಲೆಯ ಜನಪ್ರತಿನಿಧಿಗಳು).

​ಸಂಸದರು, ಶಿವಮೊಗ್ಗ ಲೋಕಸಭಾ ಕ್ಷೇತ್ರ: ............................................
​ಶಾಸಕರು, ಶಿವಮೊಗ್ಗ ನಗರ ಕ್ಷೇತ್ರ: ............................................
​ಶಾಸಕರು, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ: ............................................
​ಶಾಸಕರು, ಭದ್ರಾವತಿ ಕ್ಷೇತ್ರ: ............................................
​ಶಾಸಕರು, ತೀರ್ಥಹಳ್ಳಿ ಕ್ಷೇತ್ರ: ............................................
​ಶಾಸಕರು, ಸಾಗರ ಕ್ಷೇತ್ರ: ............................................
​ಶಾಸಕರು, ಶಿಕಾರಿಪುರ ಕ್ಷೇತ್ರ: ............................................
​ಶಾಸಕರು, ಸೊರಬ ಕ್ಷೇತ್ರ: ............................................

ಅಧ್ಯಕ್ಷರುಗಳು ನಿಗಮ ಮಂಡಳಿ
1.....
2.....
3....

​ವಿಧಾನ ಪರಿಷತ್ ಸದಸ್ಯರು (ಸ್ಥಳೀಯ ಹಾಗೂ ನಾಮನಿರ್ದೇಶಿತ): ............................................

​ಪ್ರಮುಖ ರೈತ ಹಾಗೂ ಸಹಕಾರಿ ಸಂಘಗಳ ಮುಖಂಡರು. ಇತ್ಯಾದಿ): ............................................

  ಈ ರೀತಿ ಸಂಯುಕ್ತ ಮನವಿ ಸಲ್ಲಿಸುವ ಸಾಧ್ಯತೆ ಎಷ್ಟರ ಮಟ್ಟಿಗೆ ಆಗಲಿದೆ? ...

#chiefminister #karnataka #parlimentmember #shivamogga #mla #mlc #boardchairman #farmersasociation #kasturiranganreport 
#dkshivakumar #thirhahalli #madubangarappa

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...