Skip to main content

4168.ನೀನಾಸಂ_ಚಿದಂಬರ್_ರಾವ್_ಜಂಬೆ_ರಂಗದಿಂದ_ನಿರ್ಗಮಿಸಿದ್ದಾರೆ. ಪ್ರಚಾರ_ಪ್ರಶಸ್ತಿಗಳಿಂದ_ದೂರವಿದ್ದ_ರಾಷ್ಟ್ರ_ಮಟ್ಟದ_ರಂಗಕರ್ಮಿ.


ನೀನಾಸಂ_ಚಿದಂಬರ್_ರಾವ್_ಜಂಬೆ_ರಂಗದಿಂದ_ನಿರ್ಗಮಿಸಿದ್ದಾರೆ. ಪ್ರಚಾರ_ಪ್ರಶಸ್ತಿಗಳಿಂದ_ದೂರವಿದ್ದ_ರಾಷ್ಟ್ರ_ಮಟ್ಟದ_ರಂಗಕರ್ಮಿ.

  ಅವರಿಗೆ ಸದ್ಗತಿ ಸ್ವರ್ಗ ಪ್ರಾಸ್ತಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ.

  ಅವರ ನುಡಿ ನಮನಗಳನ್ನ ನನ್ನ ಅವರ 29 ವರ್ಷದ ಮೊದಲ ಬೇಟಿ ಹೆಗ್ಗೋಡಿನ ಅವರ ಮನೆಯಲ್ಲಾದ ನೆನಪು ಮತ್ತು 3 ವರ್ಷದ ಹಿಂದೆ ಅವರು ನನ್ನ ಕಛೇರಿಗೆ ಬಂದ ಕೊನೆಯ ಬೇಟಿಯ ಸ್ಮರಣೆಯ ಈ ಲೇಖನದ ಮೂಲಕ ಮಾಡಿದ್ದೇನೆ.

 ನಮ್ಮ ಸಾಗರ ತಾಲ್ಲೂಕಿನ ಸಜ್ಜನ ರಂಗಕರ್ಮಿ , ಕೇಂದ್ರ ಸರ್ಕಾರದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು, ರಂಗಾಯಣದ ಮಾಜಿ ನಿರ್ದೇಶಕರು ಆದ ಚಿದಂಬರ್ ರಾವ್ ಜಂಬೆ ದಿನಾಂಕ 4 - ಫೆಬ್ರುವರಿ-2023 ರಂದು ನನ್ನ ಕಛೇರಿಗೆ ಆಗಮಿಸಿದ್ದರು ಅವರ ಬೇಟಿ ನನಗೆ ತುಂಬಾ ಸಂತೋಷ ತಂದಿತ್ತು.

   ಜಂಬೆ ಅವರು ದೆಹಲಿಯ #NSD ಯಲ್ಲಿ ವ್ಯಾಸಂಗ ಮಾಡಿದವರು,ಹೆಗ್ಗೋಡಿನ ನೀನಾಸಂ ಪ್ರಾಂಶುಪಾಲರಾಗಿದ್ದವರು,#ರಂಗಾಯಣದ ನಿರ್ದೇಶಕರು, ಕೇಂದ್ರ ಸರ್ಕಾರದ ಸಂಗೀತ #ನಾಟಕ_ಅಕಾಡೆಮಿ_ಪ್ರಶಸ್ತಿಗೆ ಭಾಜನರಾಗಿದ್ದವರು.

 #ಸಿದ್ದಿ_ಬುಡಕಟ್ಟು ಜನಾಂಗದ ಸಿದ್ಧಿ ಕಲಾವಿದರ ಹೊರಜಗತ್ತಿಗೆ ಪರಿಚಯಿಸಿದವರೇ ಜಂಬೆಯವರು.

 ಚಿದಂಬರ್ ರಾವ್ ಜ೦ಬೆ ಶಿವಮೊಗ್ಗ ಜಿಲ್ಲೆಯ ನಮ್ಮ ಸಾಗರ ತಾಲ್ಲೂಕಿನವರು ಎಂಬುದು ನಮಗೆಲ್ಲ ಹೆಮ್ಮೆ.

    ಅವತ್ತು ಸಂಜೆ ಚಿದಂಬರ್ ರಾವ್ ಜಂಬೆ ಅವರು ಶಿವಮೊಗ್ಗದಿಂದ ಅವರ ಬಾವ ನಿವೃತ್ತ ಭಾರತೀಯ ಸೈನ್ಯದ ಲಕ್ಷ್ಮೀನಾರಾಯಣರ ಜೊತೆ ಬಂದಿದ್ದರು.

  ಇವತ್ತಿಗೆ ಸುಮಾರು 29 ವರ್ಷದ ಹಿಂದೆ ನನ್ನ ಅವರ ಮೊದಲ ಬೇಟಿ ಅಂದಾಜು 1997ರಲ್ಲಿ ಹೆಗ್ಗೋಡಿನಲ್ಲಿ #ಚರಕ_ಸಂಸ್ಥೆಯ_ಪ್ರಸನ್ನ ಅವರು ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಬಿಸಿದ್ದಾಗ ಆಗಿತ್ತು.

    ಆ ಸತ್ಯಾಗ್ರಹಕ್ಕೆ ಚರಕದ ಪ್ರಸನ್ನ ಮತ್ತು #ನೀನಾಸಂ_ಕೆ_ವಿ_ಸುಬ್ಬಣ್ಣ ಅವರ ನಡುವೆಯ ವ್ಯವಹಾರಿಕ ಬಿನ್ನಾಭಿಪ್ರಾಯ ಈ ಉಪವಾಸ ಸತ್ಯಾಗ್ರಹಕ್ಕೆ ಕಾರಣ ಆಗಿತ್ತು.

  ಯಾವುದೋ ಚೆಕ್ ಕೇಸ್ ಅಂತಲೂ, ಇನ್ನೂ ಕೆಲವರು ಪ್ರಸನ್ನರ ಪರ ಇರುವವರು ಕೆ.ವಿ.ಸುಬ್ಬಣ್ಣನವರ ಅಸಹಕಾರ ಅಂತಲೂ ಸುದ್ದಿಗಳಾಗಿತ್ತು ಆದಿನಗಳಲ್ಲಿ.

  ಆಗ ಮಾಜಿ ಮುಖ್ಯಮಂತ್ರಿ #ಬಂಗಾರಪ್ಪನವರು ಪಕ್ಷೇತರರಾಗಿ ಲೋಕಸಭಾ ಸದಸ್ಯರಾಗಿದ್ದರು, ನಾವೆಲ್ಲ ಅವರ ಚುನಾವಣೆಗೆ ಶ್ರಮಿಸಿದ್ದೆವು ಆಗ ಮತ್ತಿಕೊಪ್ಪದ ಸಹಕಾರಿ ಬಂದು ಹರನಾಥ ರಾಯರು ಬಂಗಾರಪ್ಪರ ಚುನಾವಣೆಗೆ ಸಾಗರ ತಾಲೂಕಿನ ಚುನಾವಣಾ ನೇತೃತ್ವವಹಿಸಿದ್ದರು.

   ಆ ಕಾರಣದಿಂದ ಒಂದು ಸಂಜೆ #ಹರನಾಥ್_ರಾವ್, ಆಗ ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದ  ನನ್ನನ್ನ ಕರೆದುಕೊಂಡು ಉಪವಾಸ ಸತ್ಯಾಗ್ರಹಿ ಚರಕ ಪ್ರಸನ್ನರ ಬೇಟಿಗೆ ಹೋಗಿದ್ದರು.

   ಅವತ್ತು ಪ್ರಸನ್ನ ಅವರ ಅಭಿಪ್ರಾಯಗಳನ್ನ ಕೇಳಿದ ನಂತರ ನಾವೆಲ್ಲ ನೀನಾಸಂ ಪ್ರಾಂಶುಪಾಲರಾದ ಚೆದ೦ಬರ್ ರಾವ್ ಜಂಬೆ ಅವರ ಮನೆಗೆ ಹೋಗಿದ್ದೆವು.

   ನಮ್ಮೆಲ್ಲರ ಉದ್ದೇಶ ಚರಕ ಪ್ರಸನ್ನರ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿ ಸುಖಾಂತ್ಯಗೊಳಿಸುವ ಸದುದ್ದೇಶವಾಗಿತ್ತು.

   ಈ ನೆನಪಿನ ಘಟನೆಯ 25 ವರ್ಷದ ನಂತರ ನನ್ನ ಮತ್ತು  ಜಂಬೆಯವರ ಈ ಬೇಟಿ ಆಯಿತು.

    ನಂತರ 2001 ರಲ್ಲಿ ಸಾಗರ ತಾಲೂಕಿನ ಹೆಗ್ಗೋಡಿನ ಚರಕ ಪ್ರಸನ್ನರು ರಂಗಾಯಣದ ನಿರ್ದೇಶಕರಾಗಿ ಆಯ್ಕೆ ಆದರು, 2003 ರಲ್ಲಿ ಸರ್ಕಾರದ ವಾರ್ಷಿಕ ಅನುದಾನದ ಕಡಿತ ಪ್ರತಿಭಟಿಸಿ ಅವರು ರಾಜಿನಾಮೆ ನೀಡಿದಾಗ ರಾಜ್ಯ ಸರ್ಕಾರ ಈ ಸ್ಥಾನಕ್ಕೆ ಆಯ್ಕೆ ಮಾಡಿದ್ದು ಜಂಬೆಯವರನ್ನು.

  ಇವರಿಬ್ಬರೂ ಹೆಗ್ಗೋಡಿನವರು ನೀನಾಸಂ ಮೂಲದ ಒಂದೇ ಊರಿನವರು ಎಂಬುದು ವಿಶೇಷ.

  ರಂಗಾಯಣದ ನಾಲ್ಕನೇ ನಿರ್ದೇಶಕರಾದ ನಂತರ ಚಿದಂಬರ್ ರಾವ್ ಜಂಬೆ ರಾಷ್ಟ್ರ ಮಟ್ಟದಲ್ಲಿ ಕ್ರಿಯಾಶೀಲರಾದರು.

  2015ರಲ್ಲಿ ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ರಾಷ್ಟ್ರಪತಿ #ಪ್ರಣವ್_ಮುಖರ್ಜಿ ಅವರಿಂದ ಸ್ಟೀಕರಿಸಿದರು.

 ನಾನು ಅವರ ಪ್ರತಿ ಪೇಸ್ ಬುಕ್ ಪೋಸ್ಟ್ ನೋಡುತ್ತೇನೆ ಇತ್ತೀಚೆಗೆ ಅವರ ಪೋಸ್ಟ್ ಒಂದು ವಿಶೇಷವಾಗಿತ್ತು ಅದು ಉತ್ತರ ಕರ್ನಾಟಕದ ಸಿದ್ಧಿ ಜನಾಂಗದ ಕಲಾವಿದರಾದ #ಗಿರಿಜಾ_ಸಿದ್ದಿ, #ಗೀತಾ_ಸಿದ್ಧಿ, #ಗಿರೀಶ್_ಸಿದ್ದಿ, #ರೇಣುಕಾಸಿದ್ದಿ, #ಪ್ರಶಾಂತಸಿದ್ದಿ, #ಭಾಗ್ಯಸಿದ್ಧಿ ಮುಂತಾದವರು ಹೊರ ಜಗತ್ತಿಗೆ ಬರಲು ಕಾರಣವಾಗಿದ್ದು.

  1984ರಲ್ಲಿ ಇವರು ಯಲ್ಲಾಪುರ ತಾಲ್ಲುಕಿನ #ಮಂಚಿಕೇರಿಯಲ್ಲಿ ಸಿದ್ದಿ ಜನಾ೦ಗದವರಿಗಾಗಿ #Things_Fall_Apart ಕಾದಂಬರಿ ಆದಾರಿತ ನಾಟಕ ಇವರು ಮಾಡಿಸಿದ್ದರು.

 #ಶಿರನಾಲೆ ಕಾಡಿನ ಮಧ್ಯ ಕೊಳ್ಳಿ ಬೆಳಕಿನಲ್ಲಿ ನಡೆಸಿದ ಆ ನಾಟಕ ಪ್ರದರ್ಶನ ಆ ಕಾಲಕ್ಕೆ ಒಂದು ಹೊಸ ಅನುಭವ ಆಗಿತ್ತಂತೆ.

 ಈ ನಾಟಕದ ಮುಖ್ಯ ಪಾತ್ರ ಒಕೊಂಕಾ ಮತ್ತು ದೇವಿ ಪಾತ್ರದಾರಿಗಳಾಗಿದ್ದ ಸಿದ್ಧಿ ಜನಾಂಗದ #ಬಾಬುಸಿದ್ದಿ (ಪರಶುರಾಮ ಗಿರಗೋವಿ) ಅವರ ತಂಗಿ #ಕುಸುಮಾಸಿದ್ಧಿ ಮತ್ತು ಅವರ ಮಗಳು #ರೇಣುಕಾಸಿದ್ದಿ ಅತ್ಯುತ್ತಮ ನಟನೆ ಮಾಡಿದ್ದರಂತೆ.

  ಅವತ್ತು ಮಂಚಿಕೇರಿಯ ರಾಜೇಶ್ವರಿ ಪ್ರೌಡ ಶಾಲೆಯಲ್ಲಿ ನಡೆದ ಔಪಚಾರಿಕ ಸಬೆಯಲ್ಲಿ ಮೊದಲ ಬಾರಿ ಮಾತಾಡಿದ ಕುಸುಮಾ ಸಿದ್ಧಿ ಜಂಬೆ ಅವರ "ಈ ನಾಟಕ ನಮ್ಮನ್ನು ಹೊರ ಜಗತ್ತಿಗೆ ತೆರೆದುಕೊಳ್ಳುವಂತೆ ಮಾಡಿದೆ" ಎಂದಿದ್ದರಂತೆ.

   ಅದರ ಮುಂದಿನ 35 ವರ್ಷದಲ್ಲಿ ಸಿದ್ದಿ ಜನಾ೦ಗದ ಕಲಾವಿದರು ಈಗ ನಾಟಕ ಸಿನಿಮಾ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ ಇದಕ್ಕೆ ಚಿದಂಬರ್ ರಾವ್ ಜಂಬೆ ಕಾರಣಕರ್ತರು ಕೂಡ.

   ಪ್ರಚಾರ - ಪ್ರಶಸ್ತಿಗಳಿಂದ ದೂರವಿರುವ ರಾಷ್ಟ್ರ ಮಟ್ಟದ ರಂಗಕರ್ಮಿ ಜಂಬೆಯವರು ನಮ್ಮ ತಾಲ್ಲೂಕಿನವರು ಎಂಬುದು ನನಗೆ ಹೆಮ್ಮೆ ಅವತ್ತು ಅವರ ಆಗಮನ ಕೂಡ ಅಷ್ಟೇ ಖುಷಿಯ ಸಂಗತಿ ಆಗಿತ್ತು. 

     ಇದೆಲ್ಲ ಈಗ ನೆನಪು ಮಾತ್ರ ಚಿದಂಬರ್ ರಾವ್ ಜಂಬೆ ಇಹಲೋಕ ಯಾತ್ರೆ ಮುಗಿಸಿದ್ದಾರೆ.

 #girijasiddi
#ninasam #heggodu #nsd 
#rangayana #sagar #shivamogga #chidambarraojambe #prasanna #charaka

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...