#ಕೊರಾನಾ ಲಾಕ್ ಡೌನ್ ಡೈರಿ- 2020 #ಲೆಟರ್ ನಂ -12. #ದಿನಾ೦ಕ 11-ಏಪ್ರಿಲ್ -2020. *ಕೊರಾನಾ ನಿಮೂ೯ಲನೆಯ ಎರಡನೆ ಹಂತದಲ್ಲಿ ಆಹಾರ- ಔಷದಿ-ನೀರು ಬಡವರಿಗೆ ಮಾತ್ರವಲ್ಲ ಅವಶ್ಯ ಇದ್ದವರಿಗೆಲ್ಲ ತಲುಪಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು* ಈವರೆಗೆ ಕೆಲವರು ಪ್ರಾಮಾಣಿಕವಾಗಿ, ಹೆಚ್ಚಿನವರು ಪ್ರಚಾರಕ್ಕಾಗಿ ಬಡವರಿಗೆ ಪಡಿತರದ ಕಿಟ್ ಕೊಡುವ ಕಾಯ೯ಕ್ರಮ ಮಾಡಿದ್ದಾರೆ. ಒಂದರೆಡು ಬಾಳೆಹಣ್ಣು ಹಂಚುವ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ನೋಡಿದೆ ಇದೊoದು ತರ ಪ್ರಚಾರದ ಶನಿ ಹಿಡಿದವರ ಕಥೆ. ಇನ್ನು ಕೆಲವರು ಅವರ ಸ್ವಂತ ಹಣದಲ್ಲಿ ಸಾಮಗ್ರಿ ಖರೀದಿಸಿ ಅವಶ್ಯಕತೆ ಇದ್ದವರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಿದ್ದಾರೆ. ಇನ್ನು ಕೆಲವರು ನಾವು ಬಡವರಿಗೆ ದಾನ ಮಾಡುತ್ತೇವೆ ನಿಮ್ಮ ಪಾಲು ಕೊಡಿ ಅಂತ ರೋಲ್ ಕಾಲ್ ಮಾಡಿದವರೂ ಇದ್ದಾರೆ. ಈ ರೀತಿ ಆಹಾರದ ಕಿಟ್, ಮಾಸ್ಕ್ ಮು೦ತಾದ ಹಂಚಿಕೆ ಕಾಯ೯ಕ್ರಮದಲ್ಲಿ ಸಾಮಾಜಿಕ ಅಂತರ ಕಾಪಾಡುವಲ್ಲಿ ವಿಪಲತೆಯನ್ನ ನೋಡುತ್ತಿದ್ದೇವೆ ಇದರಿಂದ ಹಸಿವು ನಿವಾರಿಸಲು ಹೋಗಿ ರೋಗ ಹರಡಿಸಲು ಕಾರಣವಾಗುವ ಆಪಾಯವೇ ಹೆಚ್ಚು. ಸರಿ ತಪ್ಪು ವಿಮಶೆ೯ ಮಾಡುವ ಕಾಲ ಇದಲ್ಲ ದೊಡ್ಡ ಮಠಗಳೇ ಅತಿವೃಷ್ಟಿಯಲ್ಲಿ ನೆರೆ ಪರಿಹಾರವಾಗಿ ಸಾವಿರಾರು ಮನೆ ಕಟ್ಟಿಕೊಡುವುದಾಗಿ ಭಕ್ತರಿಂದ ಕೋಟ್ಯಾoತರ ಹಣ ದಾನವಾಗಿ ಸಂಗ್ರಹಿಸಿ ಒಂದೇ ಒಂದು ಮನೆ ಕಟ್ಟದ ಉ...