Blog number 1100. ಆನಂದಪುರಂ ಇತಿಹಾಸ ಸಂಖ್ಯೆ 88. ಸಾಗರದ ನಯನ ಹ್ಯಾಂಡಿಕ್ರಾಫ್ಟ್ ಷಣ್ಮುಖಪ್ಪ ಬದುಕಿದ್ದರೆ ವಿಶ್ವ ವಿಖ್ಯಾತ ಕಲಾವಿದರಾಗುವ೦ತ ಕಲಾನೈಪುಣ್ಯತೆ, ದೂರದೃಷ್ಟಿಯ ಕಲ್ಪನೆಗಳು ಅವರಲ್ಲಿದ್ದವು ಆನಂದಪುರಂನಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನ ಮೇಳ ಮತ್ತು ರಾಜ್ಯ ಮಟ್ಟದ ಹಾಸ್ಯ ನಾಟಕ ಸ್ಪರ್ದೆಯಲ್ಲಿ ಇವರು ರಚಿಸಿದ ಪಾರಿತೋಷಕ ಮತ್ತು ನೆನಪಿನ ಕಾಣಿಕೆಗೆ ಬೆಲೆ ಕಟ್ಟಲು ಸಾಧ್ಯವಾಗದ ಕಲಾಕೃತಿಗಳಾಗಿ ಉಳಿದಿದೆ.
#ಆನಂದಪುರಂ_ಇತಿಹಾಸ_ಸಂಖ್ಯೆ_88 #ಸಾಗರದ_ಕಲಾವಿದ_ಷಣ್ಮುಖಪ್ಪ_ಬದುಕಿದ್ದರೆ_ವಿಶ್ವವಿಖ್ಯಾತರಾಗುತ್ತಿದ್ದರು. #ಸಾಗರದ_ನಯನ_ಹ್ಯಾಂಡಿಕ್ರಾಫ್ಟ್_ಷಣ್ಮುಖಪ್ಪ #ಶ್ರೀಗಂದದ_ಕೆತ್ತನೆಯಲ್ಲಿ_ಪ್ರಖ್ಯಾತರು. #ಆನಂದಪುರಂನಲ್ಲಿ_ನಡೆದ_ಜಿಲ್ಲಾಮಟ್ಟದ_ಯುವಜನ_ಮೇಳ_ರಾಜ್ಯಮಟ್ಟದ_ಹಾಸ್ಯನಾಟಕ_ಸ್ಪರ್ದೆಗೆ #ಇವರದ್ದೇ_ನೆನಪಿನಕಾಣಿಕೆ_ಪ್ರಶಸ್ತಿ_ಪತ್ರ. #ಇವರು_ರಚಿಸಿದ_ಕಲಾಕೃತಿ_ರವಿಬೆಳೆಗೆರೆ_ಸ್ಪರ್ಣಾಪ್ರಭಾಕರ್_ಮುಂತಾದವರಿಂದ_ಶಹಬ್ಬಾಸ್_ಪಡೆದಿದ್ದರು. #ಸಾಗರದ_ವಿಶ್ವಗಣಪತಿ_ಸಂಗ್ರಹಕಾರ_ಗೋವರ್ದನ_ಅಂಕೋಲೆಕರರ_ಶಿಷ್ಯ. ಒಬ್ಬ ಕಲಾವಿದನಿಗೆ ಕಲೆಯ ಕಲಾ ನೈಪುಣ್ಯದ ಜೊತೆ ವಿಶಾಲ ದೃಷ್ಟಿ ಇದ್ದರೆ ಕಲಾಕೃತಿಗಳೂ ಕೂಡ ವಿಶೇಷವೇ ಆಗುತ್ತದೆ ಅನ್ನುವುದಕ್ಕೆ ಸಾಗರದ ಷಣ್ಮುಖಪ್ಪ ಸಾಕ್ಷಿ. ಇವರು 1990 ರಿಂದ 1996 ರ ವರೆಗೆ ರಚಿಸಿದ ಕಲಾಕೃತಿಗಳು ತುಂಬಾ ವಿಶೇಷವಾಗಿದೆ ಮತ್ತು ಈಗಲೂ ಇಂತಹ ನೆನಪಿನ ಕಾಣಿಕೆಗಳು ವಿಬಿನ್ನವಾಗಿದೆ. ಇವರು ಸಾಗರದ ಪ್ರಸಿದ್ಧ ವಿಶ್ವ ಗಣಪತಿ ಪ್ರದರ್ಶನ ಖ್ಯಾತಿಯ ಕಲಾವಿದ ಗೋವರ್ಧನ ಅಂಕೋಲೆಕರ್ ಶಿಷ್ಯ ಈ ಷಣ್ಮುಖಪ್ಪ . ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ನನಗೆ 30 ವಷ೯ದ ಪ್ರಾಯ ಉತ್ಸಾಹ ಜಾಸ್ತಿ ಆಗ ಜಿಲ್ಲಾ ಮಟ್ಟದ ಯುವಜನ ಮೇಳ ಆನಂದಪುರಂನಲ್ಲೇ ನಡೆಸಬೇಕೆಂಬ ಆನಂದಪುರಂನ ಕನ್ನಡ ಸಂಘದ ಅಧ್ಯಕ್ಷ ಹಾ.ಮೋ. ಬಾಷಾರ ಒತ್ತಾಯದಿಂದ ಆನಂದಪುರಂನಲ್ಲಿ ಜಿಲ್...