Blog number 1100. ಆನಂದಪುರಂ ಇತಿಹಾಸ ಸಂಖ್ಯೆ 88. ಸಾಗರದ ನಯನ ಹ್ಯಾಂಡಿಕ್ರಾಫ್ಟ್ ಷಣ್ಮುಖಪ್ಪ ಬದುಕಿದ್ದರೆ ವಿಶ್ವ ವಿಖ್ಯಾತ ಕಲಾವಿದರಾಗುವ೦ತ ಕಲಾನೈಪುಣ್ಯತೆ, ದೂರದೃಷ್ಟಿಯ ಕಲ್ಪನೆಗಳು ಅವರಲ್ಲಿದ್ದವು ಆನಂದಪುರಂನಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನ ಮೇಳ ಮತ್ತು ರಾಜ್ಯ ಮಟ್ಟದ ಹಾಸ್ಯ ನಾಟಕ ಸ್ಪರ್ದೆಯಲ್ಲಿ ಇವರು ರಚಿಸಿದ ಪಾರಿತೋಷಕ ಮತ್ತು ನೆನಪಿನ ಕಾಣಿಕೆಗೆ ಬೆಲೆ ಕಟ್ಟಲು ಸಾಧ್ಯವಾಗದ ಕಲಾಕೃತಿಗಳಾಗಿ ಉಳಿದಿದೆ.
#ಸಾಗರದ_ಕಲಾವಿದ_ಷಣ್ಮುಖಪ್ಪ_ಬದುಕಿದ್ದರೆ_ವಿಶ್ವವಿಖ್ಯಾತರಾಗುತ್ತಿದ್ದರು.
#ಸಾಗರದ_ನಯನ_ಹ್ಯಾಂಡಿಕ್ರಾಫ್ಟ್_ಷಣ್ಮುಖಪ್ಪ
#ಶ್ರೀಗಂದದ_ಕೆತ್ತನೆಯಲ್ಲಿ_ಪ್ರಖ್ಯಾತರು.
#ಆನಂದಪುರಂನಲ್ಲಿ_ನಡೆದ_ಜಿಲ್ಲಾಮಟ್ಟದ_ಯುವಜನ_ಮೇಳ_ರಾಜ್ಯಮಟ್ಟದ_ಹಾಸ್ಯನಾಟಕ_ಸ್ಪರ್ದೆಗೆ
#ಇವರದ್ದೇ_ನೆನಪಿನಕಾಣಿಕೆ_ಪ್ರಶಸ್ತಿ_ಪತ್ರ.
#ಇವರು_ರಚಿಸಿದ_ಕಲಾಕೃತಿ_ರವಿಬೆಳೆಗೆರೆ_ಸ್ಪರ್ಣಾಪ್ರಭಾಕರ್_ಮುಂತಾದವರಿಂದ_ಶಹಬ್ಬಾಸ್_ಪಡೆದಿದ್ದರು.
#ಸಾಗರದ_ವಿಶ್ವಗಣಪತಿ_ಸಂಗ್ರಹಕಾರ_ಗೋವರ್ದನ_ಅಂಕೋಲೆಕರರ_ಶಿಷ್ಯ.
ಒಬ್ಬ ಕಲಾವಿದನಿಗೆ ಕಲೆಯ ಕಲಾ ನೈಪುಣ್ಯದ ಜೊತೆ ವಿಶಾಲ ದೃಷ್ಟಿ ಇದ್ದರೆ ಕಲಾಕೃತಿಗಳೂ ಕೂಡ ವಿಶೇಷವೇ ಆಗುತ್ತದೆ ಅನ್ನುವುದಕ್ಕೆ ಸಾಗರದ ಷಣ್ಮುಖಪ್ಪ ಸಾಕ್ಷಿ.
ಇವರು 1990 ರಿಂದ 1996 ರ ವರೆಗೆ ರಚಿಸಿದ ಕಲಾಕೃತಿಗಳು ತುಂಬಾ ವಿಶೇಷವಾಗಿದೆ ಮತ್ತು ಈಗಲೂ ಇಂತಹ ನೆನಪಿನ ಕಾಣಿಕೆಗಳು ವಿಬಿನ್ನವಾಗಿದೆ.
ಇವರು ಸಾಗರದ ಪ್ರಸಿದ್ಧ ವಿಶ್ವ ಗಣಪತಿ ಪ್ರದರ್ಶನ ಖ್ಯಾತಿಯ ಕಲಾವಿದ ಗೋವರ್ಧನ ಅಂಕೋಲೆಕರ್ ಶಿಷ್ಯ ಈ ಷಣ್ಮುಖಪ್ಪ .
ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ನನಗೆ 30 ವಷ೯ದ ಪ್ರಾಯ ಉತ್ಸಾಹ ಜಾಸ್ತಿ ಆಗ ಜಿಲ್ಲಾ ಮಟ್ಟದ ಯುವಜನ ಮೇಳ ಆನಂದಪುರಂನಲ್ಲೇ ನಡೆಸಬೇಕೆಂಬ ಆನಂದಪುರಂನ ಕನ್ನಡ ಸಂಘದ ಅಧ್ಯಕ್ಷ ಹಾ.ಮೋ. ಬಾಷಾರ ಒತ್ತಾಯದಿಂದ ಆನಂದಪುರಂನಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳ ಯಶಸ್ವಿಯಾಗಿ ನಡೆಯಿತು.
ಜಿಲ್ಲಾ ಮಟ್ಟದ ಯುವಜನ ಮೇಳದ ಪ್ರಶಸ್ತಿ ಪತ್ರದಿಂದ ಹಿಡಿದು ಬಹುಮಾನದ ಫಲಕಗಳು, ನೆನಪಿನ ಕಾಣಿಕೆಗಳು ಹೀಗೆ ಒಂದಕ್ಕಿಂತ ಒಂದು ವಿಬಿನ್ನವಾದ ಆಕಷ೯ಕವಾದ ಕಲಾಕೃತಿ ಷಣ್ಮುಖಪ್ಪ ರಚಿಸಿದ್ದರು.
ನಂತರ ನಡೆದ ರಾಜ್ಯ ಮಟ್ಟದ ಮೂರು ದಿನದ ಹಾಸ್ಯ ನಾಟಕ ಸ್ಪರ್ದೆ ಮತ್ತು ಕನ್ನಡ ಚಲನಚಿತ್ರದ ಪ್ರಖ್ಯಾತ ಹಾಸ್ಯ ನಟ ಭಾಲಕೃಷ್ಣ ರಂಗಮಂದಿರ ಉದ್ಘಾಟನೆ ಹಾಗೂ ಈ ಕಾರ್ಯಕ್ರಮಕ್ಕೆ ಎಲ್ಲಾ ಚಲನಚಿತ್ರರಂಗದ ಹಾಸ್ಯ ನಟರನ್ನು ಕರೆತಂದಿದ್ದೆವು ಆ ರಾಜ್ಯ ಮಟ್ಟದ ಹಾಸ್ಯ ನಾಟಕ ಸ್ಪರ್ದೆಯ ಪಾರಿತೋಷಕ, ಅತಿಥಿಗಳಿಗೆ ನೆನಪಿನ ಕಾಣಿಕೆ ಷಣ್ಮುಖಪ್ಪ ನವರದ್ದೆ.
ಇವರು ನನಗೆ ನೆನಪಿನ ಕಾಣಿಕೆ ಆಗಿ ನೀಡಿರುವ ಶ್ರೀಗಂದದಲ್ಲಿ ಕೊರೆದ ಅಕ್ಷರಗಳ ಶುಭ- ಲಾಭ, ಗಣಪತಿ ವಿಗ್ರಹದ ಜೊತೆ ಸಂಸ್ಕೃತದಲ್ಲಿ ಗಣಪತಿ ಮಂತ್ರ ವಕ್ರತುಂಡಾ ಮಹಾ ಕಾಯ ಫಲಕ ನನ್ನ ಆಫೀಸಿನಲ್ಲಿದೆ.
ಹಾಯ್ ಬೆಂಗಳೂರು ರವಿ ಬೆಳೆಗೆರೆ ಸೇರಿ ಅನೇಕ ರಾಜ್ಯದ ಗಣ್ಯರಿಗೆ ನಮ್ಮೂರ ಕನ್ನಡ ಸಂಘ ಸನ್ಮಾನಿಸಿ ನೀಡಿದ ಅಕ್ಷರಗಳನ್ನು ಮರದಲ್ಲಿ ಕೊರೆದು ಅಂಟಿಸಿದ ನೆನಪಿನ ಕಾಣಿಕೆಯ ಫಲಕಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಇಂತಹ ಒಂದು ಫಲಕ ನನಗೆ ಸದರಿ ಕನ್ನಡ ಸಂಘ ನೀಡಿದ್ದು ನನ್ನ ಮನೆಯ ಹಜಾರದಲ್ಲಿ ಹಾಗೇ ಇಟ್ಟಿದ್ದೇನೆ.
ಇಂತಹ ಅದ್ಬುತ ಕಲಾವಿದ ಷಣ್ಮುಖಪ್ಪರ ಪತ್ನಿ ಮನೆ ಆನಂದಪುರಂ ಸಮೀಪದ ಮುಂಬಾಳು ಮಕ್ಕಳು ಚಿಕ್ಕವರಿದ್ದಾಗಲೇ ಹೃದಯಾಘಾತದಿಂದ 90 ರ ದಶಕದಲ್ಲಿ ಇಹಲೋಕ ತ್ಯಜಿಸಿದ್ದು ತುಂಬಾ ಬೇಸರ ಅನ್ನಿಸಿತ್ತು.
ಇವರು ಬದುಕಿದ್ದರೆ ದೇಶದ ಪ್ರಖ್ಯಾತ ಕಲಾವಿದರಾಗುವಂತ ದೂರದೃಷ್ಟಿ ಷಣ್ಮುಖಪ್ಪರಿಗಿತ್ತು ಇವರ ಅಂತ್ಯ ಸಂಸ್ಕಾರದಲ್ಲಿ ನಾವೆಲ್ಲ ದುಃಖದಿಂದ ಭಾಗವಹಿಸಿದ್ದು ನೆನಪು.
ಸಾಗರದ ನಯನ ಹ್ಯಾಂಡಿಕ್ರಾಫ್ಟ್ ನ ಷಣ್ಮುಖಪ್ಪ ರಚಿಸಿದ ಮರದ ಅಕ್ಷರಗಳ ಸನ್ಮಾನ ಪತ್ರದ ಫಲಕ ಮತ್ತು ಗಣಪತಿ ಸ್ತ್ರೋತದ ನೆನಪಿನ ಕಾಣಿಕೆ ನಿತ್ಯ ಷಣ್ಮುಖಪ್ಪರ ನೆನಪು ತರುತ್ತದೆ.
Comments
Post a Comment