Blog number 1121. ಭಾಗ - 6. ಆನಂದಪುರಂ ಸಾಹಿತ್ಯ ಹಬ್ಬ, ನನ್ನ ಕಥಾ ಸಂಕಲನ ಭಟ್ಟರ ಬೊಂಡಾ ಬಾಂಡ್ಲಿಯಲ್ಲಿ ಬಿಲಾಲಿ ಬಿಲ್ಲಿ ಅಭ್ಯoಜನ ಪುಸ್ತಕದ ಅವಲೋಕನ ಖ್ಯಾತ ಸಾಹಿತಿ, ಅಂಕಣಗಾರ , ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿ ಅವರಿಂದ.
#ಆನಂದಪುರಂ_ಸಾಹಿತ್ಯ_ಹಬ್ಬ
#ನನ್ನ_ಕಥಾ_ಸಂಕಲನ_ಭಟ್ಟರ_ಬೊಂಡಾ_ಬಾಂಡ್ಲಿಯಲ್ಲಿ
#ಬಿಲಾಲಿ_ಬಿಲ್ಲಿ_ಅಭ್ಯಂಜನ_ಮತ್ತು_28_ಕಥೆಗಳ_ಅವಲೋಕನ
#ಖ್ಯಾತ_ಸಾಹಿತಿ_ಶಿಕ್ಷಣ_ತಜ್ಞ_ಅರವಿಂದ_ಚೊಕ್ಕಾಡಿಯವರಿಂದ.
ಈ ಕಥಾ ಸಂಕಲನ ಮುದ್ರಣಕ್ಕೆ ಮುನ್ನ ಪೂರ್ತಿ ಓದಿ ಮುನ್ನುಡಿ ಬರೆದವರು ಅರವಿಂದ ಚೊಕ್ಕಾಡಿ ಅವರು ಅವರಿಂದಲೇ ಸಾಹಿತ್ಯ ಪರಿಷತ್ತು ಅವಲೋಕನ ಕಾಯ೯ಕ್ರಮ ಅಳವಡಿಸಿದ್ದರಿಂದ ನನ್ನ ಕಥಾ ಸಂಕಲನಕ್ಕೊಂದು ಗರಿ ಕೂಡ.
ಈ ಕಥಾ ಸಂಕಲನಕ್ಕೆ ಶಿರ್ಷಿಕೆ ಯಾವುದೆಂದು ನಿಗದಿ ಮಾಡಿರಲಿಲ್ಲ, ಆಗ ಮುನ್ನುಡಿ ಬರೆದ ಅರವಿಂದ ಚೊಕ್ಕಾಡಿ ಅವರಿಗೆ ಬಿಲಾಲಿ ಬಿಲ್ಲಿ ಕಥೆ ಹೆಚ್ಚು ಇಷ್ಟವಾದದ್ದರಿಂದ ಈ ಕಥಾ ಸಂಕಲನಕ್ಕೆ ಭಟ್ಟರ ಬೊಂಡಾದ ಬಾಂಡ್ಲಿಯಲ್ಲಿ #ಬಿಲಾಲಿ_ಬಿಲ್ಲಿ_ಅಭ್ಯಂಜನ ಅಂತಲೇ ಶಿರ್ಷಿಕೆ ಇಟ್ಟಿದ್ದು.
ತಾಕತ್ ಬೊಂಡಾ ....ಸಾಹಿತ್ಯದ ಆಳಕ್ಕೆ ಇಳಿಯದೆ ಅನುಭವದ ಆಳಕ್ಕಿಳಿದು ಈ ಕಥೆಗಳು ರಚನೆ ಆಗಿದೆ ಅಂತ ಅವರು ಗ್ರಹಿಸಿದ್ದು ಮತ್ತು ಈ ಕಥೆಯ ಪಾತ್ರದಾರಿಗಳೆಲ್ಲ ಇಲ್ಲಿಯೇ ಓಡಾಡುತ್ತಿದ್ದಾರೆ.... ಹೀಗೆ ಕಥಾ ಸಂಕಲದ ಅವಲೋಕನದ ವಿಡಿಯೋ ಇಲ್ಲಿದೆ.
#ಮುನ್ನುಡಿ.
ರೂಪಾಯಿಗಳ ಬಿಲ್ ಮಾಡಿಕೊಳ್ಳುತ್ತಾನೆ. ಇವನು 52 ಸಾವಿರದ ಬಿಲ್ ಮಾಡಲು ಗಣೇಶನಿಗೆ 50 ರೂಪಾಯಿ ಕೊಟ್ಟು ತನ್ನ ಕಡೆಗೆ ಮಾಡಿಕೊಳ್ಳುತ್ತಾನೆ. ಈ ಗಣೇಶ ಇನ್ನೂ ಬುದ್ಧಿವಂತ. ಮನೆಯಲ್ಲಿ ನಾಯಿಗಳನ್ನು ಸಾಕದ ಗಣೇಶ ಬೀದಿ ನಾಯಿಗಳಿಗೆ ತಿಂಡಿ ಹಾಕುತ್ತಾನೆ. ಮೇಲ್ನೋಟಕ್ಕೆ ಇಲ್ಲಿ ಇದು ಪ್ರಾಣಿ ದಯೆಗಿಂತ ಮಿಗಿಲಾಗಿ ಬೇರೇನಿದೆ ಎನಿಸುತ್ತದೆ. ಏನಾದರೂ ಇರಬಹುದಾದರೂ ಎಲ್ಲಿಯೂ ಕನೆಕ್ಟಿವಿಟಿ ಕಾಣುವುದಿಲ್ಲ. ಆದರೆ ಕನೆಕ್ಟಿವಿಟಿ ಇದೆ. ಜೋಳವನ್ನು ಬೆಳೆದ ರೈತರಿಗೆ ಹಂದಿ-ಮಂಗಗಳ ಕಾಟದಿಂದ ಬಚಾವಾಗಲು ಹೊಲದಲ್ಲಿ ಕಟ್ಟಲು ನಾಯಿಗಳು ಬೇಕು. ಅವರಿಗೆ ಬೇಕಾದ ನಾಯಿಗಳನ್ನು ಒದಗಿಸುವವನು ಗಣೇಶ. ಗಣೇಶ ನಾಯಿಗಳಿಗೆ ತಿಂಡಿ ಹಾಕುವುದರಿಂದ ನಾಯಿಗಳು ಗಣೇಶನೊಂದಿಗೆ ಬರುತ್ತವೆ. ಗಣೇಶನು ಆ ನಾಯಿಗಳನ್ನು ರೈತರಿಗೆ ಒದಗಿಸುತ್ತಾನೆ. ಆ ಕಡೆಯಿಂದಲೂ ಲಾಭ. ಈ ಕಡೆಯಿಂದಲೂ ಲಾಭ. ಭ್ರಷ್ಠಾಚಾರದ ಸರಣಿ ಯಾವ ರೀತಿ ಅರಿವೇ ಇಲ್ಲದ ಹಾಗೆ ಸುತ್ತಿಕೊಳ್ಳುತ್ತದೆ ಎಂಬುದನ್ನು ಕಥೆಯು ಹೇಳುತ್ತದೆ. ಪಂಚಾಯತ್ ಸಭೆಯಲ್ಲೂ ನಾಯಿ ಕೊಂದದ್ದರ ಬಿಲ್ ಜಾಸ್ತಿಯಾಯಿತು ಎಂದು ಆದಾಗ ಪ್ರಾಣಿ ದಯೆಯ ಇಶ್ಯೂ ಮುಂದೆ ಬಂದು ಇನ್ನು ಮುಂದೆ ನಾಯಿಗಳನ್ನು ಕೊಲ್ಲುವುದು ಸಲ್ಲ ಎಂಬ ನಿರ್ಣಯವಾಗುತ್ತದೆ. ಇದು ವೈಚಾರಿಕ ಭ್ರಷ್ಠಾಚಾರ. ' ಹೀಗೂ ಉಂಟೇ?' ಕಥೆಯ ಶೀನಿ, ರಾಮಿಗಳದ್ದೂ ಇದೇ ಬಗೆಯ ಕಥೆ. ಕೆಲಸಗಾರರಾಗಿ ಬಂದವರು ಹೊಡೆದಾಟ, ಬಡಿದಾಟ, ಕಳ್ಳಭಟ್ಟಿ ಸರಾಯಿಗಳಲ್ಲೆಲ್ಲ ತೊಡಗಿಕೊಂಡು ಬೆಳೆಯುತ್ತಾರೆ. ಸಿದ್ಧಪ್ಪ ಮೃತನಾದಾಗ ಶೀನಿ, ರಾಮಿಯರ ರೋದನೆ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡಿ ಅವರನ್ನು ಸಮಾಧಾನಪಡಿಸುತ್ತಾರೆ. ಕೊನೆಗೆ ನೋಡಿದರೆ ಶೀನಿ ರಾಮಿಯರು ಅಳುವುದು ಅವರಿಗೆ ಸಿದ್ಧಪ್ಪನಿಂದ ಬರಬೇಕಾದ ಕಳ್ಳಭಟ್ಟಿ ಸರಾಯಿಯ ಬಾಕಿಗಾಗಿ! ಕೊನೆಗೆ ಹೆಣ ಎತ್ತಲೂ ಬಿಡದೆ ಇದ್ದಾಗ ಅಬ್ಬು ಸಾಹೇಬ ಹಣದ ಬಾಕಿ ಕೊಟ್ಟು ಹೆಣ ಎತ್ತಿಸುತ್ತಾರೆ.
' ಭಟ್ಟರ ಬೋಂಡಾದ ಬಾಂಡ್ಲಿಯಲ್ಲಿ ಬಿಲಾಲಿ ಬಿಲ್ಲಿ ಅಭ್ಯಂಜನ' ಬಹಳ ಗಮ್ಮತ್ತಿನ ಕಥೆ. ಎಲ್ಲಿಂದಲೋ ಬಂದು ಸೇರಿಕೊಳ್ಳುವ ನಿರೂಪಕನ ಬೆಕ್ಕು. ದೊಡ್ಡ ದೊಡ್ಡ ನಾಯಿಗಳೊಂದಿಗೇ ಅದರ ಜಗಳ. ಅದರ ಪಾಂಜದ ಏಟಿಗೆ ನಾಯಿಗಳು ತತ್ತರಿಸುತ್ತವೆ. ಇಂತಿಪ್ಪ ಬಿಲಾಲಿ ಬಿಲ್ಲಿ ಒಮ್ಮೆ ಭಟ್ಟರ ಬೋಂಡಾದ ಎಣ್ಣೆಗೆ ಬಿದ್ದು ಮೈಯೆಲ್ಲ ಎಣ್ಣೆ ಮಾಡಿಕೊಂಡು ಬರುತ್ತದೆ. ಬೆಕ್ಕು ಬಿದ್ದ ಎಣ್ಣೆಯಲ್ಲಿ ಬೋಂಡಾ ಮಾಡಬೇಡಿ ಎಂದು ಹೇಳಿ ಕಳಿಸುವ ವೇಳೆಗೆ ಭಟ್ಟರು ಬೋಂಡಾ ಮಾಡಿ ಮಾರಾಟ ಮಾಡಿ ಆಗಿರುತ್ತದೆ! ಅಲ್ಲಿ ಮಂಜುಳಮ್ಮ ಎಂದು ಇನ್ನೊಂದು ಪಾತ್ರ ಬರುತ್ತದೆ. ಭಟ್ಟರ ಹೆಂಡತಿ ಚಂದ್ರಲತಾ ಮತ್ತು ಮಂಜುಳಮ್ಮ ಅಪ್ಪಟ್ಟ ಗ್ರಾಮ ಭಾರತದ ಪ್ರತಿಭೆಗಳು. ನನ್ನ ಹಿತ್ತಲಿನ ಗುಲಾಬಿ ಹೂವು ನೀನೇ ಕದ್ದಿದ್ದೀಯ ಎಂದು ಚಂದ್ರಲತಾ ಮಂಜುಳಮ್ಮನ ಮೇಲೆ ಆರೋಪಿಸಿದ್ದಕ್ಕೆ ಪ್ರತಿಯಾಗಿ ಮಂಜುಳಮ್ಮ ಭಟ್ಟರ ಬೋಂಡಾವನ್ನು ತಿನ್ನಬೇಡಿ ಎಂದು ಊರೆಲ್ಲ ಹೇಳುತ್ತಾ ಬರುವುದು ಸಾಕ್ಷಾತ್ ಗ್ರಾಮ ಭಾರತದ ದರ್ಶನವೇ ಆಗಿದೆ. ಆದರೂ ಒಂದು ಪೆಗ್ ಹಾಕಿದವರೆಲ್ಲರೂ ಭಟ್ಟರ 'ತಾಕತ್ ಬೋಂಡ' ವೇ ಬೇಕು. ಬೋಂಡಾದ ಹೆಸರೇ ' ತಾಕತ್ ಬೋಂಡ'!
ಈ ಕೃತಿಯ ಪ್ರತಿಯೊಂದು ಕಥೆಗಳೂ ಇಂತಹ ಸ್ವಾದಿಷ್ಟ ಅಕ್ಷರ ಮಾಲೆಗಳಾಗಿವೆ. ಕಥೆಗಾರ ಅರುಣ್ ಪ್ರಸಾದ್ ಬಳಿ ಅತ್ಯಂತ ಶ್ರೀಮಂತವಾದ ಅನುಭವಗಳಿವೆ ಎನ್ನುವುದಕ್ಕೆ ಇಲ್ಲಿನ ಪ್ರತಿಯೊಂದು ಕಥೆಗಳೂ ಸಾಕ್ಷಿಯಾಗಿವೆ. ಊರಿನ ರಾಜಕೀಯಗಳೂ ಬೆಸದುಕೊಂಡು ಕಥೆಗಳಿಗೆ ಎಲ್ಲೆಲ್ಲೋ ಏನೇನೊ ಟ್ವಿಸ್ಟ್ ಕೊಡುತ್ತಾ ಊರಿನ ಸಮಗ್ರತೆಯನ್ನು ಒಳಗೊಳ್ಳುತ್ತಾ ದೇಸೀ ಕಥೆಗಳಾಗಿ ಹೊರಹೊಮ್ಮಿ ಮೋಹಕವಾಗಿ ಸೆರೆ ಹಿಡಿಯುತ್ತವೆ.
ಅರುಣ್ ಪ್ರಸಾದ್ ನಮ್ಮ ನಡುವಿನ ಅತ್ಯುತ್ತಮ ಕಥೆಗಾರರು. ತಾಜಾ ತಾಜಾ ಕಥೆಗಳು ಸೂಕ್ಷ್ಮ ದರ್ಶಿತ್ವದ ಕಥೆಗಳೂ ಆಗಿವೆ. ಅರುಣ್ ಅವರ ಕಥೆಗಳ ಮೊದಲ ಓದುಗನಾಗಲು ಅವಕಾಶ ಮಾಡಿಕೊಟ್ಟದ್ದಕ್ಕಾಗಿ ಅವರಿಗೆ ನಾನು ಋಣಿಯಾಗಿದ್ದೇನೆ. ಅರುಣ್ ಅವರಿಗೆ ಕಥನ ಕಲೆಗೆ ಪ್ರೀತಿಯ ಶುಭ ಸುಪ್ರಭಾತವನ್ನು ಕೋರುತ್ತೇನೆ.
ಅರವಿಂದ ಚೊಕ್ಕಾಡಿ
ಮೂಡುಬಿದಿರೆ
24 ನೆಯ ಜುಲೈ 2021
Comments
Post a Comment