Blog number 1113. ಭಾಗ-1. ಆನಂದಪುರಂ ಸಾಹಿತ್ಯ ಹಬ್ಬ ಸ್ಥಳ : ಕೃಷ್ಣ ಸರಸ ಕನ್ವೆನ್ಷನ್ ಹಾಲ್ ದಿನಾಂಕ 11-ಡಿಸೆಂಬರ್ 2022
#ಆನಂದಪುರಂ_ಸಾಹಿತ್ಯಹಬ್ಬ
#ನನ್ನ_ಕಾದಂಬರಿ_ಮತ್ತು_ಕಥಾಸಂಕಲದ_ಅವಲೋಕನ
#ವಿಶ್ವದಾಖಲೆಯ_ಹಬ್ಬು_ಕುಟುಂಬದೊಡನೆ_ಸಾಹಿತ್ಯ_ಸಂವಾದ.
#ಆನಂದಪುರಂ_ಹೋಬಳಿ_ಮತ್ತು_ಸಾಗರ_ತಾಲ್ಲೂಕ್_ಸಾಹಿತ್ಯ_ಪರಿಷತ್_ಆಯೋಜಿಸಿತ್ತು.
ಶಿವಮೊಗ್ಗ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಂಜುನಾಥರು ಕನ್ನಡ ಸಾಹಿತ್ಯ ಲೋಕದಲ್ಲಿ ವಿಶ್ವ ದಾಖಲೆ ಅಂದರೆ ಹಬ್ಬು ಕುಟುಂಬದ ತಂದೆ ಮತ್ತು ಅವರ ಆರು ಮಕ್ಕಳು ಸಾಹಿತ್ಯ ರಚಿಸಿದವರು ಅವರ ಪುಸ್ತಕ ಪ್ರದರ್ಶನ ಉದ್ಘಾಟಿಸಿದರು.
ಸಾಹಿತ್ಯ ಹಬ್ಬದ ಕಾರ್ಯಕ್ರಮ ಖ್ಯಾತ ಲೇಖಕ ಅಂಕಣಕಾರ ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿ ದೀಪ ಬೆಳಗುವ ಮೂಲಕ ಉಧ್ಘಾಟಿಸಿದರು.
ವೇದಿಕೆಯಲ್ಲಿ TV 18 ಬ್ರಾಡ್ ಕಾಸ್ಟ್ ಲಿ. ದಕ್ಷಿಣ ಬಾರತದ ಎಡಿಟೋರಿಯಲ್ ಗ್ರೂಪ್ ಅಡ್ವೈಸರ್ CNN NEWS 18, Net work 18. ಡಿ.ಪಿ. ಸತೀಶ್, ಸಾಗರ ತಾಲೂಕಿನ ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿ.ಟಿ. ಸ್ವಾಮಿ, ಕನ್ನಡ ಸಾಹಿತ್ಯ ಕ್ಷೇತ್ರದ ವಿಶಿಷ್ಟ ಸಾದನೆಗ್ಯೆದ ಹಬ್ಬು ಕುಟುಂಬದ ಅಂಕೋಲದ ಮೊಹನ್ ಹಬ್ಬು, ಹೊನ್ನಾವರದ ರಾಮಚಂದ್ರ ಹಬ್ಬು, ಹುಬ್ಬಳ್ಳಿಯ ಅರುಣ್ ಕುಮಾರ್ ಹಬ್ಬು, ಮ೦ಗಳೂರಿನ ಉದಯ ಕುಮಾರ್ ಹಬ್ಬು, ಬನವಾಸಿಯ ಜಯಪ್ರಕಾಶ್ ಹಬ್ಬು ಉಪಸ್ಥಿತರಿದ್ದರು.
ಪ್ರಾರ್ಥನೆ ಸ್ಥಳಿಯ ಗ್ರಾಮ ಪಂಚಾಯಿತಿ ಸದಸ್ಯೆ ಜ್ಯೋತಿ, ಸ್ವಾಗತ ಸಾದನ ವಿದ್ಯಾ ಕೇಂದ್ರದ ಮುಖ್ಯೋಪಾಧ್ಯಾಯರಾದ ರಘು ಹೆಬ್ಬೋಡಿ, ನಿರೂಪಣೆ ಆನಂದಪುರಂನ ಮಾರಿಕಾಂಬ ಜಾತ್ರಾ ಸಮಿತಿ ಪ್ರದಾನ ಕಾರ್ಯದರ್ಶಿ ಉಮೇಶ್ ನಿವ೯ಹಿಸಿದ್ದರು.
ಆಯ್ದ ಸೀಮಿತ ಸಾಹಿತ್ಯ ಆಸಕ್ತ ಸಬಿಕರ ಜೊತೆ ಮಾಜಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ತೀ.ನಾ. ಶ್ರೀನಿವಾಸ್, ಪ್ರಗತಿ ಪರ ಕೃಷಿ ಉದ್ಯಮಿ ನಾಗೇಂದ್ರ ಸಾಗರ್, ಜಲಯೋಗಿ ಈಜು ತರಬೇತುದಾರ ಹರೀಶ್ ನವಾತೆ, ಪ್ರಶಸ್ತಿ ವಿಜೇತ ಅಂತರ್ ರಾಷ್ಟ್ರೀಯ ಡೊಳ್ಳು ಕಲಾವಿದ ಜೆ.ಸಿ.ಮಂಜಪ್ಪ, ಸಾಗರ ತಾಲೂಕಿನ ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮೇಶ್ ಗಣಪತಿಯಪ್ಪ, ಸಾಗರದ ಎಲ್ ಬಿ ಕಾಲೇಜ್ ಉಪನ್ಯಾಸಕರು ವಿಜಯ ಕರ್ನಾಟಕ ವರದಿಗಾರರು ಆದ ಯೋಗಿಶ್ ಜಿ ಎಸ್ ಭಟ್ಟರು, ಹೊಸನಗರ ತಾಲೂಕಿನ ಸಾಹಿತ್ಯ ಪರಿಷತ್ ಅಧ್ಯಕ್ಷ ತ.ಮ.ನರಸಿಂಹ, ಮಾಜಿ ಅಧ್ಯಕ್ಷರಾದ ಕಾಮತ್ ಕನ್ನಡ ಸಂಘದ ಪದಾಧಿಕಾರಿಗಳು, ಪತ್ರಕರ್ತರೂ ಭಾಗವಹಿಸಿದ್ದರು.
ಕಾಯ೯ಕ್ರಮದ ಚಿತ್ರಗಳು ಇಲ್ಲಿದೆ.
ನಾಳೆ ಭಾಗ - 2 ಹಬ್ಬು ಪುಸ್ತಕ ಪ್ರದರ್ಶನ ಉದ್ಘಾಟಿಸಿದ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಮಂಜುನಾಥರ ವಿಡಿಯೊ .
Comments
Post a Comment