Blog number 1115. ಭಾಗ - 2 ಆನಂದಪುರಂ ಸಾಹಿತ್ಯ ಹಬ್ಬ, ಜಿಲ್ಲಾ ಸಾಹಿತ್ಯ ಪರಿಷತ್ ಅದ್ಯಕ್ಷರಾದ ಮಂಜುನಾಥ್ ಹಬ್ಬು ಸಹೋದರರ ಪುಸ್ತಕ ಪ್ರದರ್ಶನ ಉದ್ಫಾಟಿಸಿದರು
#ಆನಂದಪುರಂ_ಸಾಹಿತ್ಯ_ಹಬ್ಬ
#ಪುಸ್ತಕ_ಪ್ರದರ್ಶನ_ಉದ್ಘಾಟಿಸಿದ_ಶಿವಮೊಗ್ಗ_ಜಿಲ್ಲಾ_ಸಾಹಿತ್ಯ_ಪರಿಷತ್_ಅಧ್ಯಕ್ಷ_ಮಂಜುನಾಥ್.
#ವಿಶ್ವದಾಖಲೆಯ_ಹಬ್ಬು_ಸಹೋದರರ_ಪುಸ್ತಕ_ಪ್ರದರ್ಶನ
#ನಾಲ್ಕು_ಬಾರಿ_ಜಿಲ್ಲಾ_ಸಾಹಿತ್ಯ_ಪರಿಷತ್_ಅದ್ಯಕ್ಷ.
#ನಿರಂತರವಾಗಿ_ಕಾಯ೯ಕ್ರಮಗಳು.
#ಕರ್ನಾಟಕ_ರಾಜ್ಯ_ಸಾಹಿತ್ಯ_ಪರಿಷತ್_ಅಧ್ಯಕ್ಷರಾಗಲಿ_ಎಂದು_ಹಾರೈಸುತ್ತೇನೆ
1995-2000 ರಲ್ಲಿ ನಾನು ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಮಂಜುನಾಥರು ಅವರ ಪತ್ರಿಕೆಯ ವರದಿಗಾಗಿ ಜಿಲ್ಲಾ ಪಂಚಾಯತ್ ಸಭೆಗಳಿಗೆ ಬಂದಾಗ ನೋಡುತ್ತಿದ್ದೆ.
ಇವರ ಕಾಲೇಜು ಸಹಪಾಠಿ ಈಗಿನ ಹೊಸನಗರ ತಾಲೂಕಿನ ಸಾಹಿತ್ಯ ಪರಿಷತ್ ಅಧ್ಯಕ್ಷ ತ.ಮ.ನರಸಿಂಹ ಯಾವಾಗಲು ಮ೦ಜುನಾಥರ ಕ್ರಿಯಾಶೀಲತೆ ಬಗ್ಗೆ ಮಾತಾಡುತ್ತಿರುತ್ತಾರೆ.
ಸದಾ ಒಂದಲ್ಲ ಒಂದು ಸಾಹಿತ್ಯದ ಕಾರ್ಯಕ್ರಮ ಹಮ್ಮಿಕೊಳ್ಳುವ ಇವರ ಜೊತೆ ಶಿವಮೊಗ್ಗ ಜಿಲ್ಲೆಯಲ್ಲಿ ಇವರಷ್ಟೆ ಕ್ರಿಯಾಶೀಲರಾದ ದೊಡ್ಡ ಸಂಖ್ಯೆಯ ಕಾರ್ಯಪಡೆ ಇದೆ.
ಸುಮಾರು 22 ವರ್ಷದ ನಂತರ ನಿನ್ನೆ ನಡೆದ ಸಾಹಿತ್ಯ ಹಬ್ಬದಲ್ಲಿ ನನ್ನ ಇವರ ಬೇಟಿ ಆಯಿತು, ಕನ್ನಡ ಸಾಹಿತ್ಯದಲ್ಲಿ ಒಂದೇ ಕುಟುಂಬದ ತಂದೆ ಮತ್ತು ಅವರ ಆರು ಮಕ್ಕಳು ನೂರಾರು ಪುಸ್ತಕ ಬರೆದು ಪ್ರಕಟಿಸಿ ವಿಶ್ವ ದಾಖಲೆ ಮಾಡಿದ್ದಾರೆ ಅವರ ಪುಸ್ತಕ ಪ್ರದರ್ಶನ ಉದ್ಘಾಟಿಸಿ ಮಾತಾಡಿದ ಮಂಜುನಾಥ್ ರ ಭಾಷಣ ಸಾಹಿತ್ಯಾಸಕ್ತರೆಲ್ಲ ಕೇಳಬೇಕು ನಿಜಕ್ಕೂ ಇವರು ಮುಂದೆ ರಾಜ್ಯ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆ ಆಗಿ ಬರಲಿ ಎಂದು ಹಾರೈಸುತ್ತೇನೆ.
Comments
Post a Comment