Skip to main content

Posts

Showing posts with the label Shimoga distrct congress organisation misleaded

ಶಿವಮೊಗ್ಗ ಜಿಲ್ಲೆಯ ಕಾಂಗ್ರೇಸ್ ಸಂಘಟನೆಗೆ ಗ್ರಹಣ ಹಿಡಿದಿದೆ.

#ಪ್ರಸಕ್ತ ರಾಜಕಾರಣದ ಒಳಗುಟ್ಟು# ಲೋಕಸಭಾ ಚುನಾವಣಾ ಅಂಕಣ ಭಾಗ-11 ( ಕೆ.ಅರುಣ್ ಪ್ರಸಾದ್ ) ಡಿ.ಕೆ. ಶಿವಕುಮಾರ್ ರಿಂದ ನಿಂತ ನೀರಾಗಿರುವ ಕಾಂಗ್ರೇಸ್ ಪಾಟಿ೯ ಶುದ್ದಿಕರಣ ಆದೀತೆ? ಪಕ್ಷದ ಸಂಘಟನೆ ಶಿಥಿಲ ಮಾಡುವ, ಪಕ್ಷದವರನ್ನೆ ಸೋಲಿಸುವ ಸದಾ ಪಕ್ಷ ವಿರೋದಿ ಕೆಲಸ ಮಾಡುತ್ತಾ ಸದಾ ಪಕ್ಷದ ಆಯಾ ಕಟ್ಟಿನ ಜಾಗದಲ್ಲಿ ಸ್ಥಾನ ಪಡೆಯುವ ಕಾಲೆಳೆಯುವ ಗುಂಪು ನಿಯOತ್ರಿಸಲು ಡಿ.ಕೆ.ಶಿವಕುಮಾರ್ ಸಫಲರಾಗುವರಾ? ಮೈತ್ರಿ ಅಭ್ಯಥಿ೯ಯ ಗೆಲುವಿಗಾಗಿ ಡಿ.ಕೆ.ಶಿವಕುಮಾರ್ ನಿನ್ನೆಯಿಂದ ಶಿವಮೊಗ್ಗ ಜಿಲ್ಲೆಗೆ ಪ್ರವೇಶಿಸಿದ್ದಾರೆ. ಬಂದ ದಿನವೇ ಭದ್ರಾವತಿಯ ಕೆಲ ದಶಕಗಳ ಕಟ್ಟಾ ರಾಜಕೀಯ ವಿರೋದಿ ಕಾಂಗ್ರೇಸ್ ನ ಹಾಲಿ ಶಾಸಕ ಸಂಗಮೇಶ್ ಮತ್ತು ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡರನ್ನ ರಾಜಿ ಮಾಡಿ ಬಾಯಿ ಬಾಯಿ ಅನ್ನಿಸಿದ್ದಾರೆ.   ಇದು ಜಿಲ್ಲೆಯ ಮೈತ್ರಿ ಪಕ್ಷದ ಪ್ರಚಾರಕ್ಕೆ ಒಳ್ಳೆಯ ಪ್ರಾರಂಭದ ಉತ್ಸಾಹದ ಅಂಶವಾಗಿದೆ.   ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ನಲ್ಲಿ ಶಿವಮೊಗ್ಗ ಕೇಂದ್ರದಲ್ಲಿನ ಒಂದಿಷ್ಟು ಮುಖಂಡರಿದ್ದಾರೆ ಅವರು ಕಾಂಗ್ರೇಸ್ ಸಂಘಟನೆ ಮಾಡಲಾಗದವರು, ಈಶ್ವರಪ್ಪ ಯಡೂರಪ್ಪರ ಹತ್ತಿರ ತಮ್ಮ ಲೆಟರ್ ಫ್ಯಾಡ್ ರಾಜಕಾರಣದಿಂದ ವಗಾ೯ವಣೆ ಇತ್ಯಾದಿ ಲಾಭದ ನಿರೀಕ್ಷೆಯಲ್ಲಿ ಇದ್ದವರಿದ್ದಾರೆ.   ತಾಲ್ಲೂಕ್ ಮಟ್ಟದಲ್ಲಿ ಯಾರಾದರೂ ಗೆದ್ದರೆ ಅವರಿಗೆ ಶಿವಮೊಗ್ಗ ಕೇಂದ್ರದಲ್ಲಿ ಭಾರೀ ಶೋ ಮಾಡಿ ಗೌರವಸಿ ಪಾಕೆಟ್ ಮಾಡಿ ಎಲ್ಲಾ ನಾಮಕರಣಗಳನ್ನ ತಮ್...