#ಪ್ರಸಕ್ತ ರಾಜಕಾರಣದ ಒಳಗುಟ್ಟು#
ಲೋಕಸಭಾ ಚುನಾವಣಾ ಅಂಕಣ
ಭಾಗ-11
( ಕೆ.ಅರುಣ್ ಪ್ರಸಾದ್ )
ಡಿ.ಕೆ. ಶಿವಕುಮಾರ್ ರಿಂದ ನಿಂತ ನೀರಾಗಿರುವ ಕಾಂಗ್ರೇಸ್ ಪಾಟಿ೯ ಶುದ್ದಿಕರಣ ಆದೀತೆ? ಪಕ್ಷದ ಸಂಘಟನೆ ಶಿಥಿಲ ಮಾಡುವ, ಪಕ್ಷದವರನ್ನೆ ಸೋಲಿಸುವ ಸದಾ ಪಕ್ಷ ವಿರೋದಿ ಕೆಲಸ ಮಾಡುತ್ತಾ ಸದಾ ಪಕ್ಷದ ಆಯಾ ಕಟ್ಟಿನ ಜಾಗದಲ್ಲಿ ಸ್ಥಾನ ಪಡೆಯುವ ಕಾಲೆಳೆಯುವ ಗುಂಪು ನಿಯOತ್ರಿಸಲು ಡಿ.ಕೆ.ಶಿವಕುಮಾರ್ ಸಫಲರಾಗುವರಾ?
ಮೈತ್ರಿ ಅಭ್ಯಥಿ೯ಯ ಗೆಲುವಿಗಾಗಿ ಡಿ.ಕೆ.ಶಿವಕುಮಾರ್ ನಿನ್ನೆಯಿಂದ ಶಿವಮೊಗ್ಗ ಜಿಲ್ಲೆಗೆ ಪ್ರವೇಶಿಸಿದ್ದಾರೆ. ಬಂದ ದಿನವೇ ಭದ್ರಾವತಿಯ ಕೆಲ ದಶಕಗಳ ಕಟ್ಟಾ ರಾಜಕೀಯ ವಿರೋದಿ ಕಾಂಗ್ರೇಸ್ ನ ಹಾಲಿ ಶಾಸಕ ಸಂಗಮೇಶ್ ಮತ್ತು ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡರನ್ನ ರಾಜಿ ಮಾಡಿ ಬಾಯಿ ಬಾಯಿ ಅನ್ನಿಸಿದ್ದಾರೆ.
ಇದು ಜಿಲ್ಲೆಯ ಮೈತ್ರಿ ಪಕ್ಷದ ಪ್ರಚಾರಕ್ಕೆ ಒಳ್ಳೆಯ ಪ್ರಾರಂಭದ ಉತ್ಸಾಹದ ಅಂಶವಾಗಿದೆ.
ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ನಲ್ಲಿ ಶಿವಮೊಗ್ಗ ಕೇಂದ್ರದಲ್ಲಿನ ಒಂದಿಷ್ಟು ಮುಖಂಡರಿದ್ದಾರೆ ಅವರು ಕಾಂಗ್ರೇಸ್ ಸಂಘಟನೆ ಮಾಡಲಾಗದವರು, ಈಶ್ವರಪ್ಪ ಯಡೂರಪ್ಪರ ಹತ್ತಿರ ತಮ್ಮ ಲೆಟರ್ ಫ್ಯಾಡ್ ರಾಜಕಾರಣದಿಂದ ವಗಾ೯ವಣೆ ಇತ್ಯಾದಿ ಲಾಭದ ನಿರೀಕ್ಷೆಯಲ್ಲಿ ಇದ್ದವರಿದ್ದಾರೆ.
ತಾಲ್ಲೂಕ್ ಮಟ್ಟದಲ್ಲಿ ಯಾರಾದರೂ ಗೆದ್ದರೆ ಅವರಿಗೆ ಶಿವಮೊಗ್ಗ ಕೇಂದ್ರದಲ್ಲಿ ಭಾರೀ ಶೋ ಮಾಡಿ ಗೌರವಸಿ ಪಾಕೆಟ್ ಮಾಡಿ ಎಲ್ಲಾ ನಾಮಕರಣಗಳನ್ನ ತಮ್ಮ ಪರಿವಾರಕ್ಕೆ ಮೀಸಲು ಮಾಡುವ ಪರಿಪಾಟಗಳು ತಾಲ್ಲೂಕ್ ಕೇಂದ್ರದ ನಿಷ್ಟಾವಂತ ಕಾಂಗ್ರೇಸ್ ಕಾಯ೯ಕತ೯ರಿಗೆ ಬಿಸಿ ತುಪ್ಪ ಆಗಿದೆ.
ಇದರ ಮಧ್ಯ ಗ್ರಾಮೀಣ ಪ್ರದೇಶದ ಯಾರೋಬ್ಬರು ಆಹ೯ತೆ ಇದ್ದರೂ ಪಕ್ಷ ಸಂಘಟನೆಯ ಮುಂಚೂಣಿಗೆ ಬಾರದಂತೆ ಬಂದರೂ ಹೆಚ್ಚು ಕಾಲ ಉಳಿಯದಂತೆ ಕಾಲೆಳೆಯುವ ಕೆಲಸದಿಂದ ಶಿವಮೊಗ್ಗ ಜಿಲ್ಲೆಯ ಕಾಂಗ್ರೇಸ್ ಪಾಟಿ೯ ಇದ್ದು ಇಲ್ಲದ ಪಕ್ಷ ಆಗಿದೆ.
ಇಂತವರನ್ನ ರಿಪೇರಿ ಮಾಡುವುದು ಅಷ್ಟು ಸಲೀಸಲ್ಲ ಬುಡಮಟ್ಟದಲ್ಲಿ ಬಲಿಷ್ಟ ಬೇರು ಹಮ್ಮಿದ ಮರದಂತೆ ಆಗಾಗ್ಗೆ ಪಕ್ಷಕ್ಕೆ ಹಾನಿಯನ್ನ ವ್ಯವಸ್ಥಿತವಾಗಿ ಮಾಡುತ್ತಾರೆ.
ಇಂತಹ ಗುಂಪುಗಾರಿಕೆಯನ್ನ ಸರಿಯಾಗಿ ಬಂಗಾರಪ್ಪ ಬಳಸಿಕೊಂಡು ಬೇಕಾದಾಗ ಕಾಂಗ್ರೇಸ್ ಒಳಗೆ ಬರುವುದು, ಬೇಡಾದಾಗ ಹಾಳು ಮಾಡಿ ಹೊರ ಹೋಗುವುದು ಮಾಡಿದ್ದರು.
ಡಿ.ಬಿ. ಚಂದ್ರೇ ಗೌಡರು ಈ ಕಾರಣದಿಂದ ಜಿಲ್ಲೆಯೇ ಬಿಟ್ಟರು.
ಸ್ವಾಮಿ ರಾವ್, ನಾರಾಯಣಪ್ಪ, ಎಲ್.ಟಿ. ಹೆಗ್ಗಡೆ ಕಾಂಗ್ರೇಸ್ ಬಿಡಲು ಇವೆಲ್ಲ ಕಾರಣ ಕೂಡ.
ಶಿವಮೊಗ್ಗದಲ್ಲಿ ಪ್ರಸನ್ನ ಕುಮಾರ್ ಮೊದಲ ಬಾರಿ ಶಾಸಕ ರಾದಾಗ ಸ್ವಪಕ್ಷದವರೇ ವಿರುದ್ಧ ಕೆಲಸ ಮಾಡಿದ್ದರು, ಎರಡನೆ ಬಾರಿ ಸೋಲಿಸಲು ಅವರೆಲ್ಲರ ಸಹಕಾರವಿತ್ತು.
ಪದವಿದರ ಕ್ಷೇತ್ರದಿಂದ ಕಳೆದ ಚುನಾವಣೆಯಲ್ಲಿ ದಿನೇಶ್ ಸ್ವಲ್ಪ ಓಟಿನಿಂದ ಸೋಲಲು ಸ್ವಪಕ್ಷದ ನಾಯಕರೇ ಕಾರಣ, ಈ ಬಾರಿಯೂ ಅವರ ಏಕಾಂಗಿ ಹೋರಾಟ ಗೆಲ್ಲಲಾಗಲಿಲ್ಲ.
ಸಾಗರದ ಬೆಂಕಿ ಚೆಂಡಿನಂತ ಪ್ರಖರ ವಾಗ್ಮಿ ತಿ.ನಾ.ಶ್ರೀನಿವಾಸ್ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದರು ಅವರ ಕಾಲಾವದಿಯಲ್ಲಿ ಮೈತ್ರಿ ಅಭ್ಯಥಿ೯ 50 ಸಾವಿರ ಮತಗಳಿ೦ದ ಸೋತಿದ್ದರು, ಬಿಜೆಪಿಯ ಯಡೂರಪ್ಪ, ಈಶ್ವರಪ್ಪ ಮತ್ತು ಅಯನೂರು ಮಂಜುನಾಥರಿಗೆ ಏಟಿಗೆ ಏದಿರೇಟು ನೀಡುತ್ತಿದ್ದರು ಆದರೆ ಇದನ್ನ ಸಹಿಸದ ಬಿಜೆಪಿಯವರ ಟಿಪ್ ಪಡೆದು ಕಾಯ೯ ಪ್ರವೃತ್ತರಾದ ಒಂದು ಪಡೆ ಅವರನ್ನ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಲೋಕ ಸಭಾ ಚುನಾವಣಾ ಸಂದಭ೯ದಲ್ಲೇ ಅವಮಾನಕರವಾಗಿ ಇಳಿಸಿತು, ಇವರನ್ನ ಇಳಿಸಲು ಕಾಗೋಡು, ಕಿಮ್ಮನೆ, ಪ್ರಸನ್ನ ಕುಮಾರರ ಪತ್ರ ಕೂಡ ಪಡೆದರು.
ಮಂಜುನಾಥ ಭಂಡಾರಿಯಂತ ಅತ್ಯುತ್ತಮ ಸ೦ಘಟಕರು ಕಳೆದ ಲೋಕಸಭಾ ಚುನಾವ ಣೆಗೆ ಸ್ಪದಿ೯ಸಿದಾಗ ಪಕ್ಷದ ಅನೇಕ ದುರೀಣರೇ ಅವರ ವಿರುದ್ಧ ಮತಗಳಿಸಲು ತೆರೆಮರೆಯಲ್ಲಿ ಪ್ರಯತ್ನಿಸಿದರು.
ಕಳೆದ ಸಕಾ೯ರದಲ್ಲಿ ಕಾಗೋಡು ಮ೦ತ್ರಿ ಮಾಡದೆ ಅವರಿಗೆ ಒಲ್ಲದ ಸ್ಪೀಕರ್ ಮಾಡಿದ್ದರು.
ಕಿಮ್ಮನೆಯ ಮಂತ್ರಿ ಸ್ಥಾನ ಕಸಿದು ಅವಮಾನಿಸಿದರು.
ಈ ಸಾರಿ ಜಿಲ್ಲೆಯ ಏಕೈಕ ಕಾಂಗ್ರೇಸ್ ಶಾಸಕ ಭದ್ರಾವತಿ ಸಂಗಮೇಶ್ ರನ್ನ ಯಾವುದೇ ಕಾರಣಕ್ಕೂ ಮಂತ್ರಿ ಮಾಡದಂತೆ ನೋಡಿಕೊಳ್ಳಲಾಯಿತು.
ಪಕ್ಷದ ಕಾಯ೯ಕತ೯ರ ಅಭಿಪ್ರಾಯ ಪಡೆಯದೆ ಜೆಡಿಎಸ್ ಗೆ ಲೋಕಸಭಾ ಸ್ಥಾನ ಬಿಟ್ಟಿದ್ದಾರೆ.
ಮುಂದಿನ ದಿನದಲ್ಲಿ ಮೈತ್ರಿ ಮುಂದುವರಿದರೆ ಸೊರಬ, ಭದ್ರಾವತಿ, ಶಿವಮೊಗ್ಗ ಗ್ರಾಮಾoತರ, ತೀಥ೯ಹಳ್ಳಿ ವಿಧಾನ ಸಭಾ ಕ್ಷೇತ್ರ ಕಾಂಗ್ರೇಸ್ ಕೈಬಿಡುತ್ತದೆ.ಸಾಗರ, ಶಿವಮೊಗ್ಗ ಮತ್ತು ಶಿಕಾರಿಪುರ ಕಾಂಗ್ರೇಸ್ ಗೆ ಬಿಟ್ಟುಕೊಟ್ಟರೆ ಅಲ್ಲಿ ಕಾಂಗ್ರೇಸ್ ಬಿಜೆಪಿ ಸಂಘಟನೆ ಎದರು ಗೆಲ್ಲುವುದು ಕಷ್ಟವೇ, ಮುಂದಿನ ದಿನದಲ್ಲಿ ಶಿವಮೊಗ್ಗ ಕಾಂಗ್ರೇಸ್ ಮುಕ್ತ ಆದರೆ ಲಾಭ ಯಾರಿಗೆ ಬಿಜೆಪಿಗಲ್ಲವೆ?
ಇದು ನಿಷ್ಟಾವಂತ ಕಾಂಗ್ರೇಸಿಗರ ಕ್ಷೀಣ ಧ್ವನಿ ಅತ೯ನಾದ ಡಿ.ಕೆ.ಶಿವಕುಮಾರರಿಗೆ ಕೇಳಿಸುವಂತಾದರೆ ಶಿವಮೊಗ್ಗ ಜಿಲ್ಲೆಯ ಕಾಂಗ್ರೇಸ್ ಜೀವ ಪಡೆದೀತು !?
Comments
Post a Comment