#ಎತ್ತಿನ ಗಾಡಿಯಲ್ಲಿ ಸಾಗರ ಮತ್ತು ಹೊಸ ನಗರ ತಾಲ್ಲೂಕಿನಲ್ಲಿ ನಡೆಸಿದ ಮಾಹಿತಿ ಹಕ್ಕು ಮತ್ತು ಲೋಕಾಯುಕ್ತ ಮಾಹಿತಿಯ ಜನ ಜಾಗೃತಿ ಯಾತ್ರೆ#
#2011 ರ ನನ್ನ ಎತ್ತಿನ ಗಾಡಿ ಯಾತ್ರೆಯಲ್ಲಿ ಶರಾವತಿ ನದಿ ದಾಟಿಸುವ ತುಮರಿಯ ಲಾಂಚ್ ನವರು ಎತ್ತಿನ ಗಾಡಿ ಸಾಗಿಸಲು ನಿರಾಕರಿಸಿದ್ದರು!?#
2011ರಲ್ಲಿ ನಾನು ಮತ್ತು ನನ್ನ ಗೆಳೆಯರು ಸೇರಿ ಮಾಹಿತಿ ಹಕ್ಕು ಮತ್ತು ಲೋಕಾಯುಕ್ತದ ಜನ ಜಾಗೃತಿಗಾಗಿ ಸಾಗರ ಮತ್ತು ಹೊಸನಗರ ತಾಲ್ಲೂಕಿನಾದ್ಯ೦ತ ಸುಮಾರು ಏಳು ದಿನ ಎತ್ತಿನ ಗಾಡಿಯಲ್ಲಿ ಜಾತ ನಡೆಸಿದ್ದೆವು. ಬೆಳೆಗ್ಗೆಯಿಂದ ರಾತ್ರಿ ತನಕ ಅನೇಕ ಸಭೆಗಳು ನಡೆಸಿದೆವು.
ಸ್ಥಳಿಯ ಪ್ರಗತಿ ಪರ ಚಿಂತನೆಯವರು, ಸಂಘಟನೆಗಳು ನಮಗೆ ಬೆಂಬಲಿಸಿ ಸಹಕರಿಸಿದರು, ಮಾಹಿತಿ ಹಕ್ಕಿನಲ್ಲಿ ಅಜಿ೯ಸಲ್ಲಿಸಿ ಮಾಹಿತಿ ಪಡೆಯುವುದು, ದಾಖಲೆ ಸಮೇತ ಅವ್ಯವಹಾರಗಳನ್ನ ಲೋಕಾಯುಕ್ತಕ್ಕೆ ಹೇಗೆ ದೂರು ನೀಡುವುದು ಇತ್ಯಾದಿ ಮಾಹಿತಿ ನೀಡುತ್ತಾ ಹೋಗಿದ್ದು ಒಂದು ವಿಶಿಷ್ಟ ಅನುಭವ.
ರಾಜಕೀಯ ಗುರುಗಳಾದ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪನವರು ಎತ್ತಿನ ಗಾಡಿಯಲ್ಲಿ ಗಾದಿ ಹಾಸಿ ಕುಳಿತುಕೊಳ್ಳಬಾರದು ಕೇವಲ ಕಂಬಳಿ ಹಾಸಿ ಕುಳಿತು ಈ ಯಾತ್ರೆ ಮುಗಿಸಲು ತಾಕೀತು ಮಾಡಿದ್ದರು ಅದರಂತೆ ಮಾಡಿದೆ, ಹೊಸನಗರದಲ್ಲಿ ನನ್ನ ಗಾಡಿ ಏರಿದ ಮಾಜಿ ಜಿ.ಪಂ.ಸದಸ್ಯ ಗೆಳೆಯ ಬಿ.ಪಿ. ರಾಮಚಂದ್ರ ಕುಳಿತು ಕೊಳ್ಳಲಾಗದೆ ಇಳಿದರು, ನೀವು ಹ್ಯಾಗೆ 8 ದಿನದಿಂದ ಗಾಡಿಲಿ ಕುಳಿತೇ ಇದ್ದಿರಾ ಅಂತ ಆಶ್ಚಯ೯ ಪಟ್ಟರು ಹಾಗಂತ ನನಗೆ ಸಲೀಸಾಗಿತ್ತು ಪ್ರಯಾಣ.
ಎತ್ತಿನ ಗಾಡಿಯಲ್ಲಿ ಕುಳಿತು ಪ್ರಯಾಣ ಮಾಡುವ ಅನುಭವವೇ ಬೇರೆ, ಕಾರಲ್ಲಿ ಕುಳಿತು ಭರ್ ಅಂತ ಕ್ಷಣ ಮಾತ್ರದಲ್ಲಿ ಹೋಗುವವರು ಎತ್ತಿನ ಗಾಡಿಯಲ್ಲಿ ಕುಳಿತು ನಿಧಾನವಾಗಿ ಗಂಟೆಗೆ 4 ರಿಂದ 5 ಕಿ.ಮಿ. ಸಾಗುವಾಗ ಪ್ರಕೃತಿಯ ಚಿತ್ರಣ ಕಾರಿನಂತೆ ಸರ್ ಅಂತ ಸರಿಯದೆ ಅದನ್ನ ನೋಡುತ್ತಾ ಅನುಭವಿಸುತ್ತ ನೆನಪಿನಲ್ಲಿ ಚಿತ್ರಣದ ಅಚ್ಚು ಉಳಿಯುವಂತ ಎತ್ತಿನ ಗಾಡಿ ಅನುಭವಿಸಿದರೆ ಮಾತ್ರ ಗೊತ್ತಾಗುತ್ತದೆ.
ಆನಂದಪುರಂನ ಮುರುಘಾ ರಾಜೇಂದ್ರ ಮಠದಲ್ಲಿ ಆಗಿನ ಸಾಗರ ನಗರಸಭಾ ಅಧ್ಯಕ್ಷ ಶ್ರಮಜೀವಿ ಕೃಷ್ಣ ಮೂತಿ೯ ಉದ್ಘಾಟಿಸಿ ಮಾಡಿದ ಭಾಷಣ ಇನ್ನು ನೆನಪಿದೆ, ಎತ್ತಿನ ಗಾಡಿ ಹೊಗೆ ಉಗುಳುವುದಿಲ್ಲ, ಟ್ರಾಕ್ಟರ್ ಸಗಣಿ ಹಾಕುವುದಿಲ್ಲ ಅಂತ ಪ್ರಾಸಬದ್ದ ಮಾತಾಡಿ ಶುಭ ಹಾರೈಸಿದ್ದರು.
ಸುಮಾರು 360 ಕಿ.ಮಿ. ಸಂಚರಿಸಿದ ಜಾತ ಅ೦ತಿಮ ಸಮಾರೋಪ ರಿಪ್ಪನ್ ಪೇಟೆಯ ವೃತ್ತದಲ್ಲಿ ನಡೆಯಿತು.
ಈ ಸಂದಭ೯ದಲ್ಲಿ ತುಮರಿಯಲ್ಲಿ ಶರಾವತಿ ನದಿ ದಾಟಲು ಲಾಂಚ್ ನವರು ಎತ್ತಿನ ಗಾಡಿಗೆ ನಿರಾಕರಿಸಿದರು, ಶರಾವತಿ ವಿಧ್ಯುತ್ ಯೋಜನೆಗಾಗಿ ಈ ಭಾಗ ಮುಳುಗಡೆ ಆಗಿದ್ದಕ್ಕಾಗಿ ಸಕಾ೯ರ ಈ ಲಾಂಚ್ ನೀಡಿದೆ, ಮೊದಲೆಲ್ಲ ರೈತರ ವಾಹನ ಎತ್ತಿನ ಗಾಡಿನೇ ಆಗಿತ್ತು ಹಾಗಾಗಿ ಎತ್ತಿನ ಗಾಡಿ ಇಲ್ಲಿ ದಾಟಾಡುತ್ತಿತ್ತು, ಈಗ ಕಾರು ವ್ಯಾನ್ ನ ಕಾಲ ಬಂದು ಇಲ್ಲಿನ ಲಾ೦ಚ್ ನ ನೂತನ ಸಿಬ್ಬ೦ದಿಗಳು ಹೀಗೆ ಹೇಳುತ್ತಾರೆ ಅಂತ ಸ್ಥಳಿಯರು ಬೆಂಬಲಿಸಿದರು.
ಆದರೆ ಲಾ೦ಚನ ಸಿಬ್ಬ೦ದಿ 20 ವಷ೯ದಿಂದ ಎತ್ತಿನ ಗಾಡಿ ಹಾಕಿಯೇ ಇಲ್ಲ ತಮ್ಮ ಬಂದರು ಮತ್ತು ಪೆರಿ ಇಲಾಖೆ ಮೇಲಾಧಿಕಾರಿ ಅನುಮತಿ ನೀಡದೇ ಸಾಧ್ಯವೇ ಇಲ್ಲ ಅಂದರು.
ನಮ್ಮ ರಕ್ಷಣೆಯ ಹೊಣೆ ಹೊತ್ತ ಪೋಲಿಸ್ ಸಿಬ್ಬ೦ದಿಗಳು ತಮ್ಮ ಇಲಾಖಾ ಮುಖ್ಯಸ್ಥರಿಗೆ ತಿಳಿಸಿ ಅಲ್ಲಿಂದ ಜಿಲ್ಲಾ ಆಡಳಿತ ನಮ್ಮ ಎತ್ತಿನ ಗಾಡಿ ಜಾತ ನದಿ ದಾಟಿಸಲು ಅನುಮತಿ ಕೊಡಿಸಿದ್ದರಿ೦ದ ನಮ್ಮ ಎತ್ತು ಮತ್ತು ಗಾಡಿಗಳು ಲಾಂಚ್ ನಲ್ಲಿ ದಾಟಿದವು.
ನದಿ ಆಚೆಯ ತುಮರಿ ಪ್ರದೇಶ ಗುಡ್ಡ ಗಾಡು ಪ್ರದೇಶವಾದ್ದರಿಂದ ಆ ಬಾಗದಲ್ಲಿ ಎತ್ತಿನ ಗಾಡಿಯೇ ಇಲ್ಲ! ಹಾಗಾಗಿ ನಮ್ಮ ಎತ್ತಿನ ಗಾಡಿ ನೋಡಲು ರಸ್ತೆ ಬದಿಯಲ್ಲಿ ಜನ ಸೇರುತ್ತಿದ್ದರು, ಶಾಲಾ ಮಕ್ಕಳಂತೂ ಬಾರಿ ಕುತೂಹಲದಿಂದ ನೆರೆಯುತ್ತಿದ್ದರು.
ಇವತ್ತು ಪೇಸ್ ಬುಕ್ ಈ ಪೋಸ್ಟ್ ನೆನಪಿಸಿ ಹಾಕಿದ್ದರಿಂದ ಇದೆಲ್ಲ ನೆನಪಾಯಿತು ಆ ದಿನದಲ್ಲಿ ಸೋಷಿಯಲ್ ಮೀಡಿಯ ಇಷ್ಟು ವಿಸ್ತಾರವಾಗಿರಲಿಲ್ಲ, ಅವತ್ತು ಪ್ರಜಾವಾಣಿ ಸ್ಥಳಿಯ ವರದಿಗಾರರಾಗಿದ್ದ ಜಿ.ಟಿ. ಸತ್ಯನಾರಾಯಣರಿಗೆ ಈ ಬಗ್ಗೆ ಸುದ್ದಿ ಮಾಡಲು ವಿನOತಿಸಿದ್ದೆ ಆದರೆ ಆ ದಿನ ಅವರು ಊರಲ್ಲಿ ಇರದಿದ್ದರಿಂದ ಪ್ರಜಾವಾಣಿಯಲ್ಲಿ ಸುದ್ದಿ ಆಗಲಿಲ್ಲ.
Comments
Post a Comment