# ಇಂತಹ ತೀಮಾ೯ನಕ್ಕೆ ಬರುತ್ತಾನೆ ಬಾಲ್ಯದ ಗೆಳೆಯ ಅಂತ ಗೊತ್ತಿರಲಿಲ್ಲ#
ಮಾಚ್೯ 12 ರ ಮಂಗಳವಾರ ಬೆಳಿಗ್ಗೆ ರಿಪ್ಪನ್ ಪೇಟೆಯಿಂದ ಸ್ವಲ್ಪ ದೂರದ ಶಿವಮೊಗ್ಗ ಮಾಗ೯ದಲ್ಲಿ ದೂನ ಎಂಬಲ್ಲಿ ಬಾಲ್ಯದ ಗೆಳೆಯ ಸಿಲ್ವೆಸ್ಟ್ ರ್ ಜೋಸೆಪ್ ಡಿಕಾಸ್ಟಾ (ನಿಕ್ ನೇಮ್ ಪುಪ್ಪಾ) ನ ಬೈಕ್ ಮತ್ತು ಶುOಠಿ ತುಂಬಿ ಬರುತ್ತಿದ್ದ ಕ್ಯಾ೦ಟರಿಗೆ ಬೀಕರ ಅಪಘಾತವಾಗಿ ಮೃತನಾದ ಸುದ್ದಿ ಬಂದಾಗ ನಾನು ವೈಯಕ್ತಿಕ ಕೆಲಸದ ಮೇಲೆ ಗೋವಾ ಪ್ರಯಾಣದಲ್ಲಿದ್ದೆ.
ನನಗೆ ಇದು ಅಪಘಾತ ಅನ್ನಿಸಲಿಲ್ಲ ತಾನಾಗೆ ಇಂತಹ ಆತ್ಮಹತ್ಯ ಪ್ರಯತ್ನವಾಯಿತೆ ಅಂತ ಅನುಮಾನ ಪಟ್ಟಿ.
ನನಗಿಂತ ಎರಡು ತರಗತಿ ಮುಂದಿದ್ದ ಪುಪ್ಪಾ ನಾವೆಲ್ಲ ಬಾಲ್ಯ ಗೆಳೆಯರು, ಕ್ರಿಕೆಟ್, ಈಜು, ಯೋಗಾಸನ ಮತ್ತು ಕರಾಟೆ ನಮ್ಮ ನಿತ್ಯ ಪ್ರಾಕ್ಟೀಸ್ ಇದರ ಮಧ್ಯ ಪಟ್ಯೇತರ ಪುಸ್ತಕಗಳ ಓದು.
ಬೆಳೆಗ್ಗೆ 5ಕ್ಕೆ ಮನೆಯಿಂದ ಬಸವನ ಹೊಂಡದ ಭಂಗಿ ಭೂತಪ್ಪನ ಕೊಳದವರೆಗೆ ಓಡುವುದು, ಅಲ್ಲಿ ಈಜಾಡಿ ಪುನಃ ಓಡುತ್ತಾ ಬಂದು ನಮ್ಮ ಊರಿನ ಪ್ರವಾಸಿ ಮಂದಿರದ ಹೊರ ಕಟಾಂಜನದಲ್ಲಿ ಯೋಗಾಸನ.
ಇದರ ಮಧ್ಯ ಹಿಮಾಲಯದ ಸ್ವಾಮಿ ಶಿವಾನಂದರು ಬರೆದ ಪುಸ್ತಕ "ಬ್ರಹ್ಮಚಾಯ೯ವೇ ಜೀವನ ವೀಯ೯ ನಾಶವೆ ಮೃತ್ಯು" ಎ೦ಬ ಪುಸ್ತಕ ನಮ್ಮಿಬ್ಬರನ್ನ ತಲ್ಲಣಗೊಳಿಸಿತ್ತು, ಇಬ್ಬರೂ ಕನ್ಯಾಕುಮಾರಿಗೆ ಹೋಗಿ ಅಲ್ಲಿ ಸಂನ್ಯಾಸ ಸ್ಟೀಕರಿಸುವುದೆಂದು ತೀಮಾ೯ನಿಸಿ ಬಿಟ್ಟಿದ್ದೆವು ಆಗ ನನ್ನ ವಯಸ್ಸು 12 ಇರ ಬಹುದು.
ನಂತರ ಗೆಳೆಯ ಪದವಿ ನಂತರ ಸೈನ್ಯಕ್ಕೆ ಸೇರಿದ್ದ ತರಬೇತಿ ಪಡೆದು ಒಂದೆರಡು ವಷ೯ಕ್ಕೆ ಬಿಟ್ಟು ಬಂದ, ಡ್ರೈವಿಂಗ್ ಕಲಿತು VRL ಲಾರಿ ಚಾಲಕನಾದ ನ೦ತರ ಅದನ್ನ ಬಿಟ್ಟು ಸಮೀಪದ ಮುಂಬಾಳಿನ ಫಾದರ್ ಜೋಸೆಪ್ ರ ಗೋಕುಲ್ ಪಾರಂನಲ್ಲಿ ವ್ಯವಸ್ಥಾಪಕನಾಗಿದ್ದ ಅಲ್ಲಿನ ಕೋರ್ ಕಮಿಟಿಯಲ್ಲಿ ಖ್ಯಾತ ಕೃಷಿಕರಾದ ಪ್ರಪುಲ್ ಚಂದ್ರ, ಡಾ.ವಿಗ್ನೇಶ್ ರ ಜೊತೆ ನಾನು ಇದ್ದೆ.
ನಂತರ ಮಿತ್ರನ ಮದುವೆಯಲ್ಲಿ ಭಾಗವಹಿಸಿದ್ದೇ ಕೊನೆ ಸಂಪಕ೯ ಕಾರಣ ಇವರ ತಂದೆ ಮತ್ತು ನನ್ನ ಒಡನಾಟ ಹೆಚ್ಚಾಯಿತು, ಇವನು ರಿಪ್ಪನ್ ಪೇಟೆ ಸಮೀಪದ ನವಟೂರಿನಲ್ಲಿ ಅಡಿಕೆ ಕೃಷಿ ಮಾಡಿಕೊಂಡು ಅಲ್ಲೆ ಮನೆ ಮಾಡಿ ನೆಲೆಸಿದ್ದು ಆ ಮಾಗ೯ದಲ್ಲಿ ಹೋಗುವಾಗ ನೋಡುತ್ತಿದ್ದೆ.
ಯಾವುದೇ ಪುಸ್ತಕ ಕೈಗೆ ಸಿಕ್ಕರೆ ಒಂದೇ ಗುಕ್ಕಿನಲ್ಲಿ ಪೂಣ೯ ಓದಿ ಮುಗಿಸುವುದು ಅವನ ಸ್ವಭಾವ, ಯಾವುದೇ ದುರಾಭ್ಯಾಸ ಇರಲಿಲ್ಲ.
ಕಳೆದ ವಷ೯ ಜನವರಿ 18ರಂದು ರಿಪ್ಪನ್ ಪೇಟೆಯ ಪತ್ರಕತ೯ ಖುರೇಶಿ ವಾಟ್ಸಪ್ ಕಳಿಸಿದ್ದರು ಅದರಲ್ಲಿ ಪೋಕ್ಸೊ ಕಾಯ್ದೆಯಲ್ಲಿ ಸಿಲ್ವೆಸ್ಟ್ ರ್ ಬಂದನ ಅಂತ.
ನಂತರ ತಿಳಿದು ಬಂದಿದ್ದು ಬಡ ಅಪ್ರಾಪ್ತ ಬಾಲಕಿ ವಿದ್ಯಾಭ್ಯಾಸಕ್ಕಾಗಿ ಇವರ ಮನೆಯಲ್ಲಿದ್ದವಳು ಮತ್ತು ಅವರ ಪೋಷಕರು ನೀಡಿದ ದೂರಿನ ಮೇಲೆ ಈ ಪ್ರಕರಣ ದಾಖಲಾಯಿತು ಅಂತ.
ಮೊನ್ನೆ ಈ ಕೇಸಿನ ಅಂತಿಮ ತೀಪು೯ ಶಿವಮೊಗ್ಗ ನ್ಯಾಯಾಲಯದಲ್ಲಿತ್ತOತೆ, ವಕೀಲರು ವಿರುದ್ಧ ತೀಪು೯ ಬರುವುದಾಗಿ ಮತ್ತು ಕಸ್ಟಡಿಗೆ ಹೋಗಲೇ ಬೇಕು ನಂತರ ಅಪೀಲು ಮಾಡಿ ಜಾಮೀನು ಪಡೆಯುವ ಸಾಧ್ಯತೆ ಹೇಳಿದ್ದಾರೆ.
ಇದನ್ನ ಕೇಳಿ ಶಿವಮೊಗ್ಗ ನ್ಯಾಯಾಲಯಕ್ಕೆ ಬೈಕ್ನಲ್ಲಿ ಹೊರಟ ಮಿತ್ರ ವೇಗವಾಗಿ ಎದುರಿನಿಂದ ಬರುತ್ತಿದ್ದ ವಾಹನಕ್ಕೇ ತನ್ನ ಬೈಕ್ ನ್ನ ನುಗ್ಗಿಸಿದ್ದಾನೆ?!.
ಬೇರೆಲ್ಲೊ ನಡೆಯುವ ಘಟನೆಗಳು ಸಮೀಪದಲ್ಲೇ ನಡೆದು ಹೋಯಿತು ದೈಯ೯ವ೦ತ ಗೆಳೆಯ ಈ ರೀತಿ ಸಾವಿನಲ್ಲಿ ಜೀವನ ಸ್ವಯಂ ಕೊನೆಗಾಣಿಸಿಕೊಂಡು ಬಿಟ್ಟ.
Comments
Post a Comment