#ಪ್ರಸಕ್ತ ರಾಜಕಾರಣದ ಒಳಗುಟ್ಟು#
ಲೋಕಸಭಾ ಚುನಾವಣಾ
ಅOಕಣ - 12.
(ಕೆ.ಅರುಣ್ ಪ್ರಸಾದ್)
ಶಿವಮೊಗ್ಗ ಬಿಜೆಪಿಯಲ್ಲೂ ಯಡೂರಪ್ಪ ವಿರೋದಿ ಬಣವೇ ಮೋದಿ ಹವಾ ಏರಲು ಬಿಡುತ್ತಿಲ್ಲವಾ?
ಶಿವಮೊಗ್ಗದಲ್ಲಿ ಯಡೂರಪ್ಪ ಅಂದರೆ ಬಿಜೆಪಿ, ಬಿಜೆಪಿ ಅಂದರೆ ಯಡೂರಪ್ಪ ಎಂಬುದು ನಿಸ್ಸಂಶಯ ಇದಕ್ಕೆ ಯಡೂರಪ್ಪರ ಕೊಡುಗೆಯೇನೂ ಕಡಿಮೆ ಇಲ್ಲ.
ಯಡೂರಪ್ಪನವರು ಶಿಕಾರಿಪುರ ವಿಧಾನಸಭಾ ಕ್ಷೇತ್ರ ಮತ್ತು ಲೋಕಸಭಾ ಕ್ಷೇತ್ರ ಮಾತ್ರ ತಮ್ಮ ಮತ್ತು ತಮ್ಮ ಕುಟುಂಬದ ಹೊರತು ಬೇರೆಯವರಿಗೆ ಅವಕಾಶ ನೀಡಿಲ್ಲ, ನೀಡುವುದೂ ಇಲ್ಲ ಎಂಬ ಬಗ್ಗೆ ಅವರ ಸ್ವಪಕ್ಷಿಯರಲ್ಲೇ ಒಳಗಿOದೊಳಗೆ ವಿರೋದವಿದೆ ಆದರೆ ಎದುರಿಗೆ ತೋರಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ ಕಾರಣ ಯಡೂರಪ್ಪರಿಂದ ಈ ಜಿಲ್ಲೆಯಲ್ಲಿ ರಾಜಕೀಯವಾಗಿ ಅಧಿಕಾರ, ಹಣ ಪಡೆದವರು ಬೇರೆ ಪಕ್ಷಕ್ಕಿಂತ ಕೆಲವು ಪಟ್ಟು ಹೆಚ್ಚು ಬಿಜೆಪಿಯವರೇ.
ಹಾಗಂತ ಯಡೂರಪ್ಪನವರನ್ನ ಅವರ ವಿರೋದಿಗಳು ರಾಜೋರೋಷವಾಗಿ ವಿರೋದಿಸಿದ್ದು ಇದೇ ಅದು ಯಾವಾಗOದರೆ ಯಡೂರಪ್ಪರು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದ್ದಾಗ.
ನಂತರ ಅವರ ಪುನರಾಗಮನ ಅವರನ್ನ ಹಿಂಬಾಲಿಸದೇ ಉಳಿಗಾಲವಿಲ್ಲ ಎಂದೇ ಕಳೆದ ಲೋಕಸಭಾ ಚುನಾವ ಣೆಯಲ್ಲಿ ಜಿಲ್ಲೆಯ ಬಿಜೆಪಿಯಲ್ಲಿ ಒಗ್ಗಟ್ಟಿನ ಹೋರಾಟ ಮಾಡಿದರು, ಗೆದ್ದು ಕೇಂದ್ರದ ಮಂತ್ರಿ ಆಗುತ್ತಾರೆಂಬ ನಿರೀಕ್ಷೆ ಹುಸಿ ಆಯಿತು, ಯಡೂರಪ್ಪರ ಎಲ್ಲಾ ಮಾತು ಕೇಂದ್ರದ ನಾಯಕತ್ವ ಕೇಳುವುದಿಲ್ಲ ಎಂದಾದ ಮೇಲೆ ಜಿಲ್ಲಾ ಬಿಜೆಪಿಯಲ್ಲಿನ ಪರದೆ ಹಿಂದೆ ಯಡೂರಪ್ಪರ ವಿರೋದಿ ಗುಂಪು ಸಕ್ರಿಯವಾಗಲು ಪ್ರಾರಂಬಿಸಿತು.
6 ತಿಂಗಳ ಹಿಂದೆ ಮಧ್ಯOತರ ಲೋಕ ಸಭಾ ಚುನಾವಣೆ ನಡೆಯದಂತೆ ನೋಡಿಕೊಂಡಿದ್ದ ಯಡೂರಪ್ಪರ ಪ್ರಯತ್ನ ವಿಫಲಗೊಳಿಸಿದ್ದು ಇದೇ ಗುಂಪು, ಒಲ್ಲದ ಚುನಾವಣೆಗೆ ಮಗನನ್ನ ನಿಲ್ಲಿಸಿ ತುಂಬಾ ಶ್ರಮ ಮತ್ತು ಹಣದಿಂದ ರಾಘವೇಂದ್ರರನ್ನ ಗೆಲ್ಲಿಸಿಕೊಂಡ ಯಡೂರಪ್ಪರಿಗೆ ಈಗ ಈ ಚುನಾವಣೆಯಲ್ಲಿ ಸಕಾ೯ರ, ಕಾಂಗ್ರೇಸ್, ಜೆಡಿಎಸ್ ಜೊತೆ ಸ್ಪಪಕ್ಷದ ಶತೃಗಳನ್ನ ಕೂಡ ಎದುರಿಸ ಬೇಕಾಗಿದೆ.
ಪಕ್ಷದ ಸಂಘಟನೆ, ಚುನಾವಣಾ ತಯಾರಿಗಳೆಲ್ಲ ಪಕ್ಷದ ರೀತಿ ನೀತಿಯಂತೆ ಯಾ೦ತ್ರಿಕವಾಗಿ ಒಲ್ಲದ ಮದುವೆಯಲ್ಲಿ ಭಾಗವಹಿಸುವ ದಾಯಾದಿಗಳಂತೆ ನಿವ೯ಹಿಸಿರುವ ಹಿತ ಶತೃ ಮುಖಂಡರು ಮುಖ್ಯಮಂತ್ರಿ ಕುಮಾರ ಸ್ವಾಮಿಗೆ ಹೇಗೆ ಬಿಜೆಪಿ ಅಭ್ಯಥಿ೯ ಸೋಲಿಸ ಬಹುದೆಂಬ ರಹಸ್ಯ ನೀಡಿದ್ದಾರೆಂಬ ಗುಮಾನಿ ಇವರಿಗಿದೆ.
ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದರೂ, ಮೋದಿ ಹವಾ ಇದ್ದರೂ ಯಡೂರಪ್ಪ ತಮ್ಮದೇ ಸ್ವ೦ತ ಯೋಚನೆಯನ್ನ ಕಾಯ೯ಗತಗೊಳಿಸಲು ಮುಂದಾಗಿದ್ದಾರೆ.
ಶಿವಮೊಗ್ಗದಲ್ಲಿ ಯಡೂರಪ್ಪರ ಮಗನ ಸೋಲಿಸಿ ರಾಜ್ಯದ ಸಮ್ಮಿಶ್ರ ಸಕಾ೯ರ ಉಳಿಸಿಕೊಳ್ಳಲು ದೇವೇಗೌಡರಾದಿಯಾಗಿ ಎಲ್ಲರೂ ಶತಾಯ ಗತಾಯ ಹೋರಾಟದಲ್ಲಿದ್ದಾರೆ.
ಇದರ ಮಧ್ಯ ಯಡೂರಪ್ಪ ಏಕಾಂಗಿಯಾಗಿ ಹೋರಾಡುತ್ತಿದ್ದರೂ ತಮ್ಮಲ್ಲಿ ಎಲ್ಲಾ ಒಗ್ಗಟ್ಟು ಇದೆ, ಎಲ್ಲದೂ ಸರಿ ಇದೆ ಎಂಬ ಸಂದೇಶ ಪಕ್ಷದ ಕಾಯ೯ಕತ೯ರಿಗೆ ರವಾನಿಸಲು ಯಶಸ್ವಿಯಾಗಿದ್ದಾರೆ ಆದರೆ ರಾಜ್ಯ ಸಕಾ೯ರ ನಡೆಸುವವರಿಗೆ ಇರುವ ಮಾಹಿತಿ ಶಿವಮೊಗ್ಗ ಜಿಲ್ಲಾ ಬಿಜೆಪಿಯ ನಡುಮನೆಯಲ್ಲಿನ ವಿರೋಧ ಬಿಜೆಪಿ ಸೋಲಿಸಲು ಪ್ರಭಲ ಆಸ್ತ್ರ ಎಂದು ತೀಮಾ೯ನಿಸಿದೆ.
ಪ್ರಭಲ ಸ್ಪದೆ೯ ಪ್ರಚಾರದ ಅ೦ತಿಮ ದಿನದಲ್ಲಿ ಕಂಡು ಬರುತ್ತಿದೆ ಗೆದ್ದರೆ ಮುಂದೆ ನಿಂತು ಪಟಾಕಿ ಸರದ ತುದಿಗೆ ಬೆಂಕಿ ಹಚ್ಚಿ ಸಂಭ್ರಮಿಸುವ ಸ್ವಪಕ್ಷಿಯರು ಹಿಂದಿನಿಂದ ಮಗನನ್ನ ಸೋಲಿಸಲು ಈಗಾಗಲೇ ಬೆಂಕಿ ಹಚ್ಚಿರುವುದು ಯಡೂರಪ್ಪ ಕುಟುಂಬ ಪ್ರತಿಷ್ಟೆಯಾಗಿ ತೆಗೆದುಕೊಂಡು ಪೀಲ್ಡಿಗೆ ಇಳಿದಾಗಿದೆ.
ಮುಂದಿನ ದಿನದಲ್ಲಿ ಇದರ ಪರಿಣಾಮ ಗೋಚರಿಸಲಿದೆ, ರಾಘವೇಂದ್ರ ಗೆಲ್ಲದಿದ್ದರೆ ಯಡೂರಪ್ಪರ ಸಾಮ್ರಾಜ್ಯಕ್ಕೆ ಕಳಂಕವೇ, ಗೆದ್ದರೆ ಯಡೂರಪ್ಪ ಶಿವಮೊಗ್ಗ ಬಿಜೆಪಿಗೆ ಸಾವ೯ಬೌಮರೆ ಆಗುತ್ತಾರೆ.
ಪಲಿತಾಂಶದ ತನಕ ಕಾಯಬೇಕು.
Comments
Post a Comment