#ಪ್ರಸಕ್ತ ರಾಜಕಾರಣದ ಒಳಗುಟ್ಟು#
ಲೋಕ ಸಭಾ ಚುನಾವಣಾ ಅಂಕಣ
ಭಾಗ - 15.
ಉಡುಪಿ ಚಿಕ್ಕಮಗಳೂರು ಕ್ಷೇತ್ರ ಜೆಡಿಎಸ್ ಗೆ ಬಿಟ್ಟ ಕಾಂಗ್ರೇಸ್ ಪಕ್ಷವೇ ತನ್ನ ಮಾಜಿ ಮ೦ತ್ರಿಯನ್ನ ಜೆಡಿಎಸ್ ಗೆ ಅಭ್ಯಥಿ೯ ಆಗಿ ನೀಡಿದ್ದು ಕನಾ೯ಟಕದ ವಿಚಿತ್ರ ರಾಜಕಾರಣಕ್ಕೆ ಸಾಕ್ಷಿ.
ಚಿಕ್ಕಮಗಳೂರು ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಒಂದು ಕಾಲದಲ್ಲಿ ಇಂದಿರಾ ಗಾಂಧಿ ಗೆದ್ದ ಕ್ಷೇತ್ರ ಹಾಲಿ ಬಿಜೆಪಿಯ ಶೋಭಾ ಕರOದ್ಲಾಜೆ ಸಂಸದರು.
ಈ ಕ್ಷೇತ್ರ ಕಾಂಗ್ರೇಸ್ ಜೆಡಿಎಸ್ ಸಮ್ಮಿಶ್ರ ಸ್ಪದೆ೯ಯ ಸಂದಭ೯ದಲ್ಲಿ ಜೆಡಿಎಸ್ ಗೆ ಬಿಟ್ಟುಕೊಡಲಾಗಿತ್ತು.
ಬಿಜೆಪಿಯ ಆಂತರಿಕ ಸಂಘಟನೆ ಶೋಭಾ ಕರOದ್ಲಾಜೆ ವಿರುದ್ಧ ಇತ್ತು Go Back Shoba ಚಳವಳಿ ಕೂಡ ಪ್ರಾರಂಭ ಆಗಿತ್ತು ಈ ಸಂದಭ೯ದಲ್ಲಿ ಶೋಭಾ ಬದಲಿಸಿ ಜಯಪ್ರಕಾಶ್ ಹೆಗ್ಗಡೆಗೆ ಅವಕಾಶ ನೀಡಿದರೆ ಸುಲಭ ಜಯ ಎಂದು ಜಯಪ್ರಕಾಶರ ಪರವಾಗಿ ಲಾಬಿ ನಡೆದರೂ ಯಡೂರಪ್ಪ ಶೊಭಾರಿಗೆ ಟಿಕೇಟ್ ಕೊಡಿಸಿದರು.
ಈ ಸಂದಭ೯ದಲ್ಲಿ ಕಾಂಗ್ರೇಸ್ನಿಂದ ಯಾರೇ ಸ್ಪದಿ೯ಸಿದರು ಗೆಲ್ಲುತ್ತಾರೆOಬ ವಾತಾವರಣ ಇದ್ದಾಗಲೇ ಜೆಡಿಎಸ್ ಇಲ್ಲಿನ ಸೀಟ್ ಪಡೆಯಿತು.
ಆದರೆ ಜೆಡಿಎಸ್ ಗೆ ಸಮಥ್೯ ಅಭ್ಯಥಿ೯ ಇಲ್ಲದೆ ಉಡುಪಿ ಕ್ಷೇತ್ರದ ಮಾಜಿ ಶಾಸಕ , ಮಾಜಿ ಮಂತ್ರಿ ಕಾಂಗ್ರೇಸ್ ನ ಪ್ರಮೋದ್ ಮದ್ವರಾಜ್ರನ್ನ ಅಭ್ಯಥಿ೯ ಮಾಡಿ ಸ್ಪದೆ೯ ಗೆ ಇಳಿಸಿತ್ತು.
ಸಮೀಕ್ಷೆಗಳು ಇಲ್ಲಿ ಕಾಂಗ್ರೇಸ್ ಚಿನ್ನೆಯಲ್ಲಿ ಪ್ರಮೋದರು ನಿ೦ತಿದ್ದರೆ ಶೋಭಾ ಗೆಲುವು ಸಾಧ್ಯವಿರಲಿಲ್ಲ ಈಗ ಶೋಭಾ ಗೆಲ್ಲುತ್ತಾರೆ ಎಂಬ ವರದಿ ಇದೆ.
ಕಾಂಗ್ರೇಸ್ ಪಕ್ಷದವರಿಗೆ ಪ್ರಮೋದ್ ಕಾಂಗ್ರೇಸ್ ನಿಂದ ಸ್ಪದಿ೯ಸದೆ ಏಕಾಏಕಿ ಜೆಡಿಎಸ್ ಅಭ್ಯಥಿ೯ ಆದ ಬಗ್ಗೆ ಮುನಿಸಿದೆ.
ರಾಜ್ಯದ ಮುಖ್ಯಮಂತ್ರಿಯ ಅಧಿಕಾರ, ಹಣಬಲ ನೆಚ್ಚಿಕೊಂಡು ಪ್ರಮೋದರು ದಾರಿ ತಪ್ಪಿದರೆಂಬ ಆರೋಪ ಸ್ವಪಕ್ಷದವರು.
ಗೆದ್ದರೆ ಪ್ರಮೋದರಿಗೆ ಇದೆಲ್ಲ ನಗಣ್ಯ ಗೆಲ್ಲದಿದ್ದರೆ ಅವರಿಗೆ ಮುಂದಿನ ರಾಜಕಾರಣದಲ್ಲಿ ಕಾಂಗ್ರೇಸ್ ಎದುರಾಳಿಗಳು ಸೃಷ್ಟಿ ಆಗುವುದು ಶತಃಸಿದ್ದ.
ಪ್ರಮೋದ ಮದ್ವ ರಾಜ್ ತೀಮಾ೯ನ ಸರಿಯೇ? ಜೆಡಿಎಸ್ ಈ ಕ್ಷೇತ್ರ ಪಡೆದದ್ದು ಸರಿಯೇ? ಕಾಂಗ್ರೆಸ್ ಜೆಡಿಎಸ್ ಗೆ ಈ ಕ್ಷೇತ್ರ ಬಿಟ್ಟುಕೊಟ್ಟಿದ್ದು ಸರಿಯೇ? ಇದಕ್ಕೆ ಉತ್ತರ ಮೇ 23ಕ್ಕೆ.
Comments
Post a Comment