#ಪ್ರಸಕ್ತ ರಾಜಕಾರಣದ ಒಳಗುಟ್ಟು#
ಲೋಕ ಸಭಾ ಚುನಾವಣಾ ಅಂಕಣ
ಭಾಗ-6
( ಕೆ.ಅರುಣ್ ಪ್ರಸಾದ್)
ಶಿವಮೊಗ್ಗ ಪಾಲಿ೯ಮೆಂಟ್ ಕ್ಷೇತ್ರದಲ್ಲಿ ಸ್ಥಳಿಯ ಸಮಸ್ಯೆಗಳು ಗೌಣವಾಗಿದೆ!?
ಶಿವಮೊಗ್ಗ ಜಿಲ್ಲೆಯ ಅರಣ್ಯ ಅತಿಕ್ರಮ, ಜೈಲು, ರಸ್ತೆ, ಸೇತುವೆ, ರೈಲು, ವಿಮಾನ ನಿಲ್ದಾ ಣ, ಭದ್ರಾವತಿ ಪೇಪರ್ ಮಿಲ್, ಸ್ಮಾಟ್೯ ಸಿಟಿ, ಬಗರ್ ಹುಕುಂ ಹಕ್ಕು ಪತ್ರ, ರೈತನಿಗೆ ವಷ೯ಕ್ಕೆ 75 ಸಾವಿರ ಇತ್ಯಾದಿ ವಿಷಯಗಳು ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ವಿಷಯವೇ ಆಗಿಲ್ಲ.
ಬಿಜೆಪಿ ಕರಪತ್ರದಲ್ಲಿ ಅಭಿವೃದ್ಧಿಯೇ ಪ್ರಮುಖ ವಿಚಾರವಾಗಿ ಪೊಕಸ್ ಮಾಡಿದೆ, ಕಾಂಗ್ರೇಸ್ ಮತ್ತು ಜೆಡಿಎಸ್ ಜಂಟಿ ಅಭ್ಯಥಿ೯ ಕೂಡ ಬಗರ್ ಹುಕುಂ, ಇಂಡಿಕರಣ ತಿದ್ದುಪಡಿ ಮತ್ತು ಹಿಂದಿನ ಲೋಕ ಸಭಾ ಅಭ್ಯಥಿ೯ ಲೋಪದೋಷ ಪ್ರಮುಖ ವಿಚಾರವಾಗಿ ಎತ್ತಿಕೊಂಡಿದ್ದಾರೆ.
ಯಾವುದೇ ಜನಪ್ರತಿನಿಧಿ ಈ ಬಗ್ಗೆ ಒವಾಬ್ದಾರಿವಹಿಸುವುದು ಸರಿ ಮತ್ತು ಇದು ಮತದಾರನ ಭವಿಷ್ಯ ಕೂಡ.
ಆದರೆ ಜಿಲ್ಲೆಯಾದ್ಯ೦ತ ಮತದಾರಲ್ಲಿ ಹೆಚ್ಚಿನದಾಗಿ ಯುವ ಮತದಾರರಲ್ಲಿ ಈ ಯಾವುದೇ ಸ್ಥಳಿಯ ವಿಚಾರಗಳು ಆದ್ಯತೆಯ ವಿಷವೇ ಆಗಿಲ್ಲ ಆವರೆಲ್ಲರ ತೀಮಾ೯ನ ಮತ್ತೊಮ್ಮೆ ಮೋದಿ ಕಾರಣ ಭಾರತೀಯ ಸೈನ್ಯದ ಮೇಲೆ ನಡೆದ ಹತ್ಯಾಖಂಡ ಮತ್ತು ನಂತರದ ಘಟನಾವಳಿಗಳು ಅದರಲ್ಲೂ ಅಭಿನಂದನ್ ಪಾಕಿಸ್ತಾನದಲ್ಲಿ ಸೆರೆ ಆಗಿದ್ದು ಮತ್ತು ಬಿಡುಗಡೆಯ ಸುಖಾಂತ್ಯದ ಘಟನೆಗಳ ರೋಚಕ ಪ್ರತಿ ನಿಮಿಷದ ಟಿವಿ, ಸೋಷಿಯಲ್ ಮೀಡಿಯಾದ ಸಚಿತ್ರ ವರದಿಗಳು ಎಂಬುದು ನಿವಿ೯ವಿವಾದ.
ಇದು ಕೇವಲ ಯುವ ಜನಾಂಗ ಮಾತ್ರ ಅಂತ ಬಾವಿಸಿದ್ದು ಈಗ ಚುನಾವಣೆಯ ಅಂತಿಮ ದಿನಗಳು ಸಮೀಪಿಸುತ್ತಿರುವಾಗ ಗೋಚರಿಸುತ್ತಿರುವುದು ಎಲ್ಲಾ ವಯೋಮಾನದಲ್ಲಿ ಒಂದು ರೀತಿಯ ಸಾಮೂಹಿಕ ಸನ್ನಿಯOತೆ ಪಸರಿಸಿದೆ.
ಇದು ಮೋದಿ ಅದೃಷ್ಟ ಅಂತಲೂ, ಚುನಾವಣೆಗಾಗಿ ಎಲ್ಲಾ ಪ್ಲಾನ್ ಅಂತಲೂ ನಾನಾ ರೀತಿಯ ವಿಶ್ಲೇಷಣೆ ನಡೆಯುತ್ತಿದೆ.
ವೈಯಕ್ತಿಕ ಮತ್ತು ಸ್ಥಳಿಯ ನೂರಾರು ಸಮಸ್ಯೆ ಸಮಸ್ಯೆಯೇ ಆಗದೆ ದೇಶಾಭಿಮಾನದ ಹೆಸರಲ್ಲಿ ಬಿಜೆಪಿ ಗೆಲುವಿಗೆ ಕಾರಣವಾಗಿದೆ.
ಇಲ್ಲಿ ಬಿಜೆಪಿ ಅಭ್ಯಥಿ೯ ಅಥವ ಆ ಪಕ್ಷದ ಪದಾಧಿಕಾರಿಗಳು, ಕಾಯ೯ಕತ೯ರೂ ಲೆಖ್ಖಕ್ಕೆ ಇಲ್ಲ.
ಒಂದು ಕಾಲದಲ್ಲಿ ಇಂದಿರಾ ಪವ೯ದಲ್ಲಿ ಒಂದು ಪ್ರಚಲಿತ ಗಾದೆ ಮಾತಿತ್ತು, ಇಂದಿರಾ ಗಾಂಧಿ ಹೆಸರಲ್ಲಿ ಬೇಲಿಗೂಟ ನಿಲ್ಲಿಸಿದರೂ ಗೆಲ್ಲುತ್ತೆ ಅಂತ ಅದು ಈಗ ಸ್ವಲ್ಪ ಬದಲಾಗಿ ಮೋದಿ ಹೆಸರಲ್ಲಿ ಅಂತ ಆಗಿದೆ.
Comments
Post a Comment