#ಶಿವಮೊಗ್ಗದಲ್ಲಿ ಒಂದು ಕಾಲದಲ್ಲಿ ಸಮಾಜ ವಿರೋದಿ ಶಕ್ತಿಗಳ ಬಗ್ಗು ಬಡಿದ ಪೋಲಿಸ್ ಇಲಾಖೆಗೆ ಹೆಸರು ತಂದ ಟಪ್ ಕಾಪ್ ಶಿವಕುಮಾರ್ #
#ಶಿವಮೊಗ್ಗದ ಟಪ್ ಕಾಪ್ ನಿವೃತ್ತ DySP ಶಿವಕುಮಾರ್ ಇವತ್ತು ನನ್ನ ಅತಿಥಿಗಳು#
ಸುಮಾರು 2 ದಶಕಗಳ ಕಾಲ ಶಿವಮೊಗ್ಗದಲ್ಲಿ ಕಳ್ಳಕಾಕರಿಗೆ, ಸಮಾಜಘಾತಕರಿಗೆ ಸಿಂಹ ಸ್ವಪ್ನರಾಗಿ ಅನೇಕ ಕ್ರಿಮಿನಲ್ ಹಗರಣ, ಕೊಲೆಗಳನ್ನ ಬೇದಿಸಿದ ಚಾಣಕ್ಯರಿವರು.
ಕೆಳ ಹಂತದವರಿಂದ ಮೇಲ್ಮಟ್ಟದ SPವರೆಗೆ ಇವರು ಇಲಾಖೆಯಲ್ಲಿ ಜನಾನುರಾಗಿಗಳಾಗಿದ್ದರು, ಪತ್ರಕತ೯ರು, ಜನಪರ ಹೋರಾಟಗಾರ ಜೊತೆ ಕೂಡ ಒಳ್ಳೆಯ ಸಂಬಂದ ಹೊಂದಿದ್ದರಿಂದ ಯಾರಿಗೂ ಸಿಗದ ಮಾಹಿತಿ ಇವರಿಗೆ ಸಿಗುತ್ತಿತ್ತು.
ಪೋಲಿಸ್ ಇಲಾಖೆಯಲ್ಲಿ ಇವರನ್ನ ನಂಬುವಂತ ವ್ಯಕ್ತಿತ್ವದಲ್ಲಿ ಹೆಸರುಗಳಿಸಿದ್ದರು.
ಈಗ ನಿವೃತ್ತರಾಗಿದ್ದಾರೆ ಆದರೆ ಪಿಸಿಕಲಿ ಮತ್ತು ಮೆ೦ಟಲಿ ಅಷ್ಟೆ ಪಿಟ್ ಆಗಿದ್ದಾರೆ.
ಇವರ ರೀತಿಯಲ್ಲೆ ಅನೇಕ ಇಲಾಖೆಯಲ್ಲಿ ಜಿಲ್ಲೆಯಲ್ಲಿ ಸಕಾ೯ರಿ ಸೇವೆ ಮಾಡಿ ನಿವೃತ್ತರಾದ ಅಧಿಕಾರಿ ಮಿತ್ರರನ್ನ ಜೊತೆ ಮಾಡಿಕೊಂಡು ತಮ್ಮ ಕಾರಿನಲ್ಲಿ ಜಿಲ್ಲಾದ್ಯ೦ತ ಪ್ರವಾಸ ಮಾಡುತ್ತಿದ್ದಾರೆ ಕಾರಣ ಮೊದಿ ಇನ್ನೊಂದು ಬಾರಿ ಪ್ರಧಾನ ಮಂತ್ರಿ ಆಗಬೇಕು ಅನ್ನುವ ಹಂಬಲ ಮತ್ತು ಆಸೆಯಿಂದ.
ಬಟ್ಟೆಮಲ್ಲಪ್ಪದ ಕ್ರಷರ್ ರಾಜಶೇಖರ ಗೌಡರೊಂದಿಗೆ ನನ್ನ ಕಚೇರಿಗೆ ಬಂದವರನ್ನ ನನ್ನ ಸಣ್ಣ ಆತಿಥ್ಯದ ಜೊತೆ ಸುಮಾರು ಒಂದು ಗಂಟೆ ಕಳೆದರು ಅವರೆಲ್ಲರ ಮಾತಿನಲ್ಲಿ ಭಾರತದ ಸೈನ್ಯಕ್ಕೆ ನೈತಿಕ ಶಕ್ತಿ ನೀಡಿದ, ಪಾಕಿಸ್ತಾನಕ್ಕೆ ಸರಿಯಾದ ಬುದ್ದಿ ಕಲಿಸಿದ ಮೋದಿ ಬಗ್ಗೆ ಹೆಚ್ಚು ಅಭಿಮಾನ ಇತ್ತು ಮತ್ತು ಎಲ್ಲರೂ ಕಡ್ಡಾಯ ಮತದಾನ ಮಾಡಲೇ ಬೇಕೆಂಬ ಕಾಳಜಿ ಇತ್ತು.
ಜಿಲ್ಲೆಯ ರಾಜಕೀಯ ಮುಖಂಡರಾದ ಬಂಗಾರಪ್ಪ, ಡಿ.ಬಿ.ಚಂದ್ರೆ ಗೌಡ, ಜೆ.ಹೆಚ್.ಪಟೇಲ್, ಕಾಗೋಡು, ಈಶ್ವರಪ್ಪ, ಯಡೂರಪ್ಪ ಹೀಗೆ ಎಲ್ಲರ ಅವದಿಯಲ್ಲೂ ಕೆಲಸ ಮಾಡಿದ ಈ ನಿವೃತ್ತ ಅಧಿಕಾರಿಗಳಿಗೆ ಯಾರ ಮೇಲೂ ವೈಯಕ್ತಿಕ ವಿರೋದವಿಲ್ಲ ಆದರೆ ಮೋದಿ ಇವರ ಪೆವರಿಟ್ ಹೀರೋ ಮಾತ್ರ.
ನಾನು ಒಂದು ವಯಸ್ಸಿನ ಯುವಕರಲ್ಲಿ ಈ ರೀತಿ ಜೋಷ್ ನೋಡುತ್ತಿದ್ದೆ ಆದರೆ ಈ ನಿವೃತ್ತ ಅಧಿಕಾರಿಗಳಲ್ಲೂ ಈ ಜೋಷ್ ನೋಡಿದರೆ ಇನ್ನೂOದು ಅವಧಿಗೂ ಮೋದಿಯೇ ಪ್ರಧಾನ ಮಂತ್ರಿ ಅನ್ನಿಸಿತು.
ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಇವರನ್ನ ಪತ್ರಕತ೯ ಮಿತ್ರ ಶೃ೦ಗೇಶ್ ಪರಿಚಯಿಸಿದ್ದರು ಈಗಲೂ ಅದೇ ವಿಶ್ವಾಸ ನನಗೆ ಸಂತೋಷ ತರಿಸಿತು, ಇನ್ನೊಮ್ಮೆ ಬರುವುದಾಗಿ ಸಾಗರದ ಕಡೆ ಪ್ರಯಾಣ ಬೆಳೆಸಿದರು.
Comments
Post a Comment