#ಪ್ರಸಕ್ತ ರಾಜಕಾರಣದ ಒಳಗುಟ್ಟು#
ಲೋಕಸಭಾ ಚುನಾವಣ ಅOಕಣ ಭಾಗ -3
(ಕೆ.ಅರುಣ್ ಪ್ರಸಾದ್)
ಪಕ್ಷಾಂತರದ ವಿಪಯಾ೯ಸ ಮತ್ತು ಅಪಹಾಸ್ಯ.
ಲೋಕ ಸಭಾ ಚುನಾವಣಾ ಅಖಾಡ ನಿನ್ನೆ ಸಮ್ಮಿಶ್ರ ಅಭ್ಯಥಿ೯ ನಾಮಪತ್ರದೊಂದಿಗೆ ಅಧಿಕೃತವಾಯಿತು.
ಈ ಚುನಾವಣೆಯಲ್ಲಿ ಪಕ್ಷಾ೦ತರ ಪವ೯ ಬೇರೆ ಚುನಾವಣೆಗಿಂತ ಕಡಿಮೆ ಅನ್ನಿಸುತ್ತದೆ.
ಅಸಲಿಗೆ ಸ್ಪದೆ೯ಯಲ್ಲಿ ಇರುವವರೆಲ್ಲರೂ ಪಕ್ಷಾಂತರ ಮಾಡಿದವರೆ.
ಬಿಜೆಪಿಯ ಅಭ್ಯಥಿ೯ ರಾಘವೇಂದ್ರ ಬಿಜೆಪಿಯಿ೦ದ ಕೆಜೆಪಿಗೆ ಹೋಗಿ ಅಲ್ಲಿಂದ ಬಂದವರು, ಮದು ಬಂಗಾರಪ್ಪ ಕಾಂಗ್ರೇಸ್, ಕೆಸಿಪಿ, ಬಿಜೆಪಿ, ಸಮಾಜವಾದಿಯಿಂದ ಈಗ ಜೆಡಿಎಸ್.
ತೀಥ೯ಳ್ಳಿಯಲ್ಲಿ ಮಾಜಿ ಮಂತ್ರಿ ಕಿಮ್ಮನೆಯವರು ಜೆಡಿಎಸ್ ನಿಂದ ಕಾಂಗ್ರೇಸ್ಗೆ ಬಂದವರು, ಮಂಜುನಾಥ ಗೌಡರು ಬಂಗಾರಪ್ಪ, ಜೆ ಹೆಚ್ ಪಟೇಲರ ಪಕ್ಷದಿಂದ ಯಡೂರಪ್ಪರ ಕೆಜೆಪಿಯಿಂದ ಈಗ ಜೆಡಿಎಸ್ ಗೆ ಬಂದಿದ್ದಾರೆ.
ಅಯನೂರು ಮಂಜುನಾಥರವರು ಬಿಜೆಪಿಯಿಂದ ಜನತಾ ಪಕ್ಷ, ಕಾಂಗ್ರೇಸ್ ಸೇರಿ ಈಗ ಬಿಜೆಪಿಯಲ್ಲಿದ್ದಾರೆ.
ಭದ್ರಾವತಿ ಬಲ್ಕೀಶ್ ಬಾನುರವರು ಜನತಾದಳದಿಂದ ಕಾಂಗ್ರೇಸ್ಗೆ ಬಂದಿದ್ದಾರೆ.
ಮಾಜಿ ಮಂತ್ರಿ ಸಿ.ಎಂ.ಇಬ್ರಾಹಿಂರವರು ಜೆಡಿಎಸ್ ನಿಂದ ಕಾಂಗ್ರೇಸ್ ಗೆ ಬಂದಿದ್ದಾರೆ.
ಶಿಕಾರಿಪುರದಲ್ಲಿ ಬಳೆಗಾರ್ ಸಮಾಜವಾದಿ ಪಕ್ಷದಿಂದ ಜೆಡಿಎಸ್ ಗೆ , ಗೋಣಿ ಮಾಲ್ತೇಷ್ ಬಂಗಾರಪ್ಪರ ಜೊತೆ ಪಕ್ಷಾ೦ತರ ಮಾಡಿದವರು.
ಸೊರಬದಲ್ಲಿ ಕುಮಾರ್ ಬಂಗಾರಪ್ಪ ಕೆಸಿಪಿ, ಸಮಾಜವಾದಿ, ಕಾಂಗ್ರೇಸ್ ನಿಂದ ಬಿಜೆಪಿಗೆ ಬಂದವರು, ಇದೇ ರೀತಿ ಶಿವಾನಂದಪ್ಪ, ಶ್ರೀಧರ್, ತಬ್ಬಲಿ ಬಂಗಾರಪ್ಪ.
ಸಾಗರದಲ್ಲಿ ಸಮಾಜವಾದಿಯಿಂದ ಜನತಾ ಪಕ್ಷ, ನಂತರ ಕಾಂಗ್ರೇಸ್ ಗೆ ಕಾಗೋಡು ಬಂದಿದ್ದಾರೆ, ಬಿ.ಆರ್.ಜಯ೦ತ ಜನತಾದಳದಿಂದ ಜೆಡಿಎಸ್, ಬಿಜೆಪಿ, ಕೆಜೆಪಿಯಿ೦ದ ಕಾಂಗೇಸ್ ಗೆ ಬಂದಿದ್ದಾರೆ, ತಾಲ್ಲೂಕ ಪಂಚಾಯತ್ ಅದ್ಯಕ್ಷ ಹಕ್ರೆ ಮಲ್ಲಿಕಾಜು೯ನ ಬಂಗಾರಪ್ಪರ ಕೆಸಿಪಿಯಿಂದ ಕಾಂಗ್ರೇಸ್ ಗೆ, ಮಾಜಿ ಎಂಎಲ್ಸಿ ಪ್ರಫುಲ್ಲಾ ಮಧುಕರ್ ಜನತಾ ದಳದಿಂದ ಕಾಂಗ್ರೇಸ್, ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಮತ್ತು ಅವರ ಮಗ ತಿಮ್ಮಪ್ಪ ಕಾಂಗ್ರೇಸ್, ಬಿಜೆಪಿ, ಜೆಡಿಎಸ್ ನಿಂದ ಕಾಂಗ್ರೇಸ್ ಗೆ ಬಂದಿದ್ದಾರೆ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಬಿಜೆಪಿ, ಜೆಡಿಎಸ್ ನಿಂದ ಕಾಂಗ್ರೇಸ್ಗೆ ಬಂದಿದ್ದಾರೆ.
ಹೊಸನಗರದ ಮಾಜಿ ಶಾಸಕ ಸ್ವಾಮಿ ರಾವ್ ಸೋಷಿಲಿಸ್ಟ್, ಕ್ರಾಂತಿ ರಂಗ, ಕಾಂಗ್ರೇಸ್ ನಿಂದ ಬಿಜೆಪಿಗೆ ಬಂದಿದ್ದಾರೆ.
ಈಶ್ವರಪ್ಪ, ಆರಗ ಜ್ಞಾನೇ0ದ್ರರನ್ನ ಹೊರತು ಪಡಿಸಿದರೆ ಶಿವಮೊಗ್ಗ ಜಿಲ್ಲೆಯ ಎಲ್ಲಾ ಪಕ್ಷದ ರಾಜಕಾರಣಿಗಳು ಪಕ್ಷಾ೦ತರ ಮಾಡಿದವರೆ, ಆಯಾ ಪಕ್ಷದ ವೇದಿಕೆಯಲ್ಲಿ ಅವತ್ತಿನ ಅವರ ನಾಯಕರನ್ನ ಹೊಗಳಿದ್ದು, ಆಗ ಅವರಿಗೆ ವಿರೋದ ಪಕ್ಷಆಗಿದ್ದವರನ್ನ ವಾಚಾರಗೋಚರವಾಗಿ ನಿಂದಿಸಿದ್ದು ಎಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಬರುತ್ತಿದೆ ಆದರೆ ಈ ನಾಯಕರು ಈಗ ಬದಲಾಗಿ ತೆಗಳಿದವರಿಗೆ ಹೊಗಳುತ್ತಾ, ಹೊಗಳಿದವರಿಗೆ ತೆಗುಳುತ್ತಾ ಅಪಹಾಸ್ಯಕ್ಕೆ ಈಡಾಗುತ್ತಿರುವುದು ವಿಪಯಾ೯ಸ.
ಮಂಡ್ಯದಲ್ಲಿ ಉಪ ಚುನಾವಣೆಯಲ್ಲಿ ಕಾಂಗ್ರೇಸ್ ನಿಂದ ಜೆಡಿ ಎಸ್ ಸೇರಿ ಸಂಸದ ರಾಗಿ ಆಯ್ಕೆ ಆಗಿ ಈಗ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರರ ಪರ ಪ್ರಚಾರ ಮಾಡುತ್ತಾ ಅಂಬರೀಶ್ ರನ್ನ ಅವರ ಪತ್ನಿಯನ್ನ ಟೀಕಿಸುತ್ತಿರುವ ಶಿವರಾಮೇ ಗೌಡರು ಉಪ ಚುನಾವಣೆಯಲ್ಲಿ ಅಂಬರೀಶ್ರ ಕಾಲು ಹಿಡಿದು ಬೇಡಿಕೊಂಡ ಪೋಟೋ ಮಂಡ್ಯದಲ್ಲಿ ವೈರಲ್ ಆಗಿದೆ ನೋಡಿ.
Comments
Post a Comment