Skip to main content

Posts

Showing posts from April, 2024

Blog number 2092. ರಾಜ್ಯದ ಡೊಂಗೀ ಬಾಬಗಳಿಗೆ ಸಿಂಹ ಸ್ವಪ್ನವಾಗಿರುವ ಕನ್ನಡದ ಕೋವೂರ್ ಎಂದೇ ಖ್ಯಾತರಾಗಿರುವ ಪವಾಡ ಬಯಲು ಅಭಿಯಾನದ ಹುಲಿಕಲ್ ನಟರಾಜ್ ನನ್ನ ಅತಿಥಿ

#ಇವತ್ತಿನ_ನನ್ನ_ಅತಿಥಿ_ಪವಾಡ_ಬಯಲು_ಅಭಿಯಾನದ #ಹುಲಿಕಲ್_ನಟರಾಜ್ #ಇಡೀ_ರಾಜ್ಯದಲ್ಲಿ_ವಿಜ್ಞಾನ_ಪರಿಷತ್_ಮಾನಸಿಕ_ಚಿಕಿತ್ಸಾ_ಕೇಂದ್ರ_ಸ್ಥಾಪಿಸಿರುವ #ದೇವರ_ಹೆಸರಲ್ಲಿ_ಮುಗ್ದಜನರ_ಶೋಷಣೆ_ಮಾಡುವ #ಡೊಂಗೀ_ಬಾಬಾಗಳ_ವಿರುದ್ದ #ಸಮಾಜದಲ್ಲಿ_ಆಚರಣೆಯಲ್ಲಿರುವ_ಮೂಡನಂಬಿಕೆಗಳ_ವಿರುದ್ದ #ದೊಡ್ಡ_ಮಟ್ಟದಲ್ಲಿ_ಅಭಿಯಾನ_ನಿರಂತರವಾಗಿ_ನಡೆಸುತ್ತಿದ್ದಾರೆ. #ಅವರ_ಜೊತೆಯ_ಸರಣಿ_ಸಂದರ್ಶನಗಳು_ನಾಳೆಯಿಂದ    ಇವತ್ತಿನ ನನ್ನ ಅತಿಥಿ ವಿಚಾರವಾದಿ ಹುಲಿಕಲ್ ನಟರಾಜ್ ಇವರ ಪವಾಡ ಬಯಲು ದೂರದರ್ಶನದಲ್ಲಿ ನಿರಂತರವಾಗಿ ನೋಡುತ್ತಿದ್ದೆ ಇವತ್ತು ಗೆಳೆಯರು ಮತ್ತು ಇವರ ವಿಜ್ಞಾನ ಪರಿಷತ್ ನ ಪದಾಧಿಕಾರಿಗಳಾದ ವಿ.ಟಿ.ಸ್ವಾಮಿ, ಬಿ. ಡಿ.ರವಿ ಜೊತೆ ನನ್ನ ಕಛೇರಿಗೆ ಬಂದಿದ್ದರು.   ಅವರಿಗೆ ನನ್ನ ಕೆಲ ಪ್ರಶ್ನೆಗಳನ್ನು ಕೇಳಿದೆ ಅದೇನೆಂದರೆ....     #ಹುಲಿಕಲ್_ನಟರಾಜ್ ಹೆಸರಿನ ಮುಂದಿರುವ ಹುಲಿಕಲ್ ಯಾವುದು? ಹುಲಿಕಲ್ ನಟರಾಜ್ ಆಸ್ತಿಕರೋ ನಾಸ್ತಿಕರೋ? ಹಿಂದೂ ಧರ್ಮದ ವಿರುದ್ದ ಮಾತ್ರ ಇವರು ಪವಾಡ ಬಯಲು ಕಾರ್ಯಾಚಾರಣೆಯ? ಇವರ ಬಾಲ್ಯ- ವಿದ್ಯಾಬ್ಯಾಸ - ಉದ್ಯೋಗ ಮಾಹಿತಿ ಮತ್ತು ಇವರಿಗೆ ಮೂಡನಂಬಿಕೆಗಳ ವಿರೋದದ ಇವರ ಜೀವನ ಪಯಾ೯ಂತ ಅಭಿಯಾನಕ್ಕೆ ಪ್ರೇರಣೆ ಏನು? ಎಂಬ ನನ್ನ ಪ್ರಶ್ನೆಗಳಿಗೆ ಅವರ ಉತ್ತರ ಹುಲಿಕಲ್ ನಟರಾಜ್ ಸಂದರ್ಶನಗಳ ಸರಣಿಯಲ್ಲಿದೆ.     ಡಾಕ್ಟರ್ ಕೋವೂರ್ - ಹೆಚ್.ಎನ್ ನರಸಿಂಹಯ್ಯರಂತೆ ಮೂಡನಂಬಿಕೆ, ಪವಾಡ ಬೈಲು, ಆಪ್ತ ಸಮಾಲೋಚನೆ,

Blog number 2091. ಕೋಲಾರ ಜಿಲ್ಲೆಯ ರಾಜಕಾರಣದ ಬೆಂಕಿ ಚೆಂಡು ಶಾಸಕ ಕೊತ್ತೂರು ಮಂಜುನಾಥ್

#ಕೋಲಾರ_ಜಿಲ್ಲೆಯ_ಚಾಣಕ್ಷ_ಕೊತ್ತೂರು_ಮಂಜುನಾಥ್ #ಕೋಲಾರ_ಜಿಲ್ಲೆಯ_ರಾಜಕಾರಣವನ್ನೆ_ಬದಲಿಸಿದವರು #ಈ_ಬಾರಿ_ಯಾರು_ಕೋಲಾರದಿಂದ_ಲೋಕಸಭೆಗೆ?  ಕೋಲಾರ ರಾಜಕಾರಣದ ಬೆಂಕಿ ಚೆಂಡು ಕೊತ್ತೂರು ಮಂಜುನಾಥ ಸ್ವತಃ ಸ್ವರ್ಧಿಸಿ ಗೆಲುವುದು ಮಾತ್ರ ಅಲ್ಲ ಅವರು ಯಾರನ್ನಾದರು ಕರೆತಂದು ನಿಲ್ಲಿಸಿದರೂ ಅವರನ್ನೂ ಗೆಲ್ಲಿಸುತ್ತಾರೆ ಅದಕ್ಕೆ ಉದಾಹರಣೆ ಮುಳಬಾಗಿಲಿನಲ್ಲಿ ಹೆಚ್. ನಾಗೇಶ್ ಶಾಸಕರಾಗಿ ಮಂತ್ರಿ ಆಗಿದ್ದು.     ಇದೇ ರೀತಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಎಸ್.ಮುನಿಯಪ್ಪ ಎಂಬ ಬೆಂಗಳೂರಿನ ಕಾರ್ಪೊರೇಟರ್ ಕರೆತಂದು ಕೊಲಾರದಲ್ಲಿ ಬಿಜೆಪಿಯಿಂದ ನಿಲ್ಲಿಸಿ ಕಾಂಗ್ರೇಸ್ ಮಾಜಿ ಕೇಂದ್ರ ಮಂತ್ರಿ ಕೆ. ಹೆಚ್. ಮುನಿಯಪ್ಪರನ್ನ ಸೋಲಿಸಿದ್ದು,   ಆದರೆ ಹೆಚ್. ನಾಗೇಶ್ ಮತ್ತು ಎಸ್. ಮುನಿಯಪ್ಪ ಕೊತ್ತೂರು ಮಂಜುನಾಥರ ಬದ್ದ ವಿರೋದಿಗಳಾಗಿ ಬದಲಾಗಿದ್ದು ದೊಡ್ಡ ವಿಶ್ವಾಸ ದ್ರೋಹ  ಆದ್ದರಿಂದ ಹೆಚ್. ನಾಗೇಶ್ ಗೆ ಯಾವುದೇ ಅವಕಾಶ ಸಿಗಲಿಲ್ಲ,ಸಿಗದಂತೆ ಕೊತ್ತೂರು ಮಂಜುನಾಥ್ ನೋಡಿಕೊಂಡರೆಂದು ಸುದ್ದಿ ಆಯಿತು.   ಕಳೆದ ವರ್ಷದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯನವರನ್ನ ಕೋಲಾರದಲ್ಲಿ ನಿಲ್ಲಿಸಿ ಗೆಲ್ಲಿಸಿಕೊಂಡು ಬರುವುದಾಗಿ ಕೊತ್ತೂರು ಮಂಜುನಾಥ್ ಆಹ್ವಾನಿಸಿದ್ದರು ಆದರೆ ಸಿದ್ದರಾಮಯ್ಯ ಮನಸು ಮಾಡಲಿಲ್ಲ ಆದರೆ ಅದೇ ಕ್ಷೇತ್ರದಿಂದ ಕೊತ್ತೂರು ಮಂಜುನಾಥ ಸ್ವತಃ ಸ್ವರ್ದಿಸಿ ಗೆದ್ದು ಬಂದರು, ಇವರನ್ನ ಮಂತ್ರಿ ಮಾಡಬೇಕಿತ್ತು ಆದರೆ ಮಾಜಿ ಕೇಂದ್ರದ

Blog number 2090. ವಿರಳಾತಿ ವಿರಳ ಬಾಂಬೆ ರಕ್ತದ ಗುಂಪಿನವರು ಶಿವಮೊಗ್ಗ ಜಿಲ್ಲೆಯಲ್ಲಿ ಇಬ್ಬರೂ ಇಲ್ಲ ಈ ಎಲ್ಲಾ ಬ್ಲಡ್ ಬ್ಯಾಂಕ್ ಮಾಹಿತಿ ಶಿವಮೊಗ್ಗದ ರೆಡ್ ಕ್ರಾಸ್ ಸಂಜೀವಿನಿ ಬ್ಲಡ್ ಬ್ಯಾಂಕ್ ಸೀನಿಯರ್ ಎಕ್ಸಿಕ್ಯೂಟಿವ್ ಧರಣೇಂದ್ರ ದಿನಕರ್ ಈ ಸಂದರ್ಶನದಲ್ಲಿ ವಿವರಿಸಿದ್ದಾರೆ.

#ಶಿವಮೊಗ್ಗ_ಜಿಲ್ಲೆಯ_ರಕ್ತದಾನದ_ಶತಕ_ವೀರ_116_ಬಾರಿ_ರಕ್ತದಾನ_ಮಾಡಿದ #ಜಿಲ್ಲೆಯ_ಆಪತ್ಬಾಂದವ_ದರಣೇಂದ್ರ_ದಿನಕರ್_ಸಂದಶ೯ನ. #ಸರ್ಕಾರ_ಒಂದು_ಯುನಿಟ್_ರಕ್ತಕ್ಕೆ_ಖಾಸಾಗಿ_ಆಸ್ಪತ್ರೆಗೆ_ಒಂದು_ಸಾವಿರದ_ನಾಲ್ಕು_ನೂರು #ಬಿಪಿಎಲ್_ಕಾರ್ಡುದಾರರಿಗೆ_ಆರುನೂರಾ_ನಿಗದಿ_ಮಾಡಿದೆ #ಇದು_ರಕ್ತಪರೀಕ್ಷೆ_ಪ್ಯಾಕಿಂಗ್_ವೆಚ್ಟ_ಮಾತ್ರ #ರಕ್ತದಲ್ಲಿ_ಅಪರೂಪದ_ಬಾಂಬೆ_ಗ್ರೂಪ್_ಇದೆ #ಶಿವಮೊಗ್ಗ_ಜಿಲ್ಲೆಯಲ್ಲಿ_ಈ_ಗುಂಪಿನವರು_ಒಬ್ಬರೂ_ಇಲ್ಲ #ಪಕ್ಕದ_ಸಿದ್ದಾಪುರ_ತಾಲ್ಲೂಕಿನ_ಆಡುಕಟ್ಟದಾ_ಕೊರ್ಲಕೈನಲ್ಲಿ_ಒಬ್ಬರಿದ್ದಾರೆ. #ಅವರು_ಸಾಗರದ_ಎಲ್_ಬಿ_ಕಾಲೇಜ್_ವಿದ್ಯಾರ್ಥಿ_ಉದಯಕುಮಾರ್. https://youtu.be/1ag9UWU3kkw?feature=shared    ರಕ್ತದಾನ ಶ್ರೇಷ್ಟ ದಾನ- ಇನ್ನೊಂದು ಜೀವದಾನದ ಕೆಲಸ ಮತ್ತು ರಕ್ತದಾನದ ಬಗ್ಗೆ ಪ್ರಾರಂಭದಲ್ಲಿದ್ದ ಮೂಡ ನಂಬಿಕೆಗಳು ಬದಲಾಗಿದೆ, ಹೊಸ ತಂತ್ರಜ್ಞಾನಗಳು ಬಂದಿದೆ, ವೈದ್ಯಕೀಯ ಲೋಕದಲ್ಲಿ ದಾನಿಯ ರಕ್ತ ಪರೀಕ್ಷೆ ಸರಿಯಾಗಿ ನಡೆಸಿ ಯಾವುದೇ ಸೋಂಕು ಇಲ್ಲದ್ದನ್ನ ದೃಡೀಕರಿಸಿ ರೋಗಿಯ ದೇಹಕ್ಕೆ ನೀಡುತ್ತಾರೆ.    ಒಂದು ಕಾಲದಲ್ಲಿ ಜಿಲ್ಲೆಗೊಂದು ಬ್ಲಡ್ ಬ್ಯಾಂಕ್ ಕೂಡ ಇರಲಿಲ್ಲ ಈಗ ತಾಲ್ಲೂಕು ಕೇಂದ್ರಗಳಲ್ಲೂ ಬ್ಲಡ್ ಬ್ಯಾಂಕ್ ಕಾರ್ಯನಿರ್ವಹಿಸುತ್ತಿರುವುದು ಸಮಾದಾನಕರ ವಿಷಯ ಆಗಿದೆ.    ಒಂದು ಯುನಿಟ್ ರಕ್ತ ಅಂದರೆ 250 ML ಇದನ್ನು ಪಡೆಯಲು ಬ್ಲಡ್ ಬ್ಯಾಂಕ್ ನಲ್ಲಿ ಹಣ ಪಾವತಿ ಮಾಡಬೇಕು, ರಾ

Blog number 2089. ಆ ದಿನಗಳಲ್ಲಿ ಗೇರುಬೀಸಿನ ಕೃಷ್ಣಣ್ಣನ ಪತ್ನಿ ಹೊನ್ನಮ್ಮನಿಗೆ ರಕ್ತ ದಾನ ಮಾಡಲು ಆ ಊರಿನ ಯಾರಿಗೂ ಸಾಧ್ಯವೇ ಆಗಲಿಲ್ಲ ಕಾರಣ ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಆ ಊರಿನಲ್ಲಿ ಯಾರೂ 40 ಕೇಜಿಗಿಂತ ಜಾಸ್ತಿ ತೂಗುತ್ತಿರಲಿಲ್ಲ.

#ಆ_ಊರಿನಲ್ಲಿ_ಯಾರು_ರಕ್ತದಾನಕ್ಕೆ_ಅರ್ಹತೆ_ಪಡೆದಿರಲಿಲ್ಲ  . #ನಮ್ಮ_ಊರಿನ_ಸಮೀಪದ_ಗೇರುಬೀಸಿನಲ್ಲಿ_40_ಕಿಲೋಗಿಂತ_ಜಾಸ್ತಿ_ಯಾರು_ತೂಗುತ್ತಿರಲಿಲ್ಲ. #ಆದ್ದರಿಂದ_ನಾನೇ_ರಕ್ತದಾನ_ಮಾಡಬೇಕಾಯಿತು #ಗೇರುಬೀಸು_ಕೃಷ್ಟಣ್ಣರ_ಪತ್ನಿ_ಹೊನ್ನಮ್ಮರಿಗೆ #ಅನೇಕ_ವರ್ಷ_ಹೊನ್ನಮ್ಮ_ಅರುಣ್ಣನ_ರಕ್ತ_ನನ್ನ_ಮೈಯಲ್ಲಿ_ಹರೀತಾ_ಇದೆ_ಎಂಬ_ಮುಗ್ಧತೆಯ_ಮಾತು_ಹೇಳುತ್ತಿದ್ದರು #ನನ್ನ_ಜೀವಮಾನದ_ಮೊದಲ_ರಕ್ತದಾನ_ಬೆಂಗಳೂರಿನ_ವಿಕ್ಟೋರಿಯ_ಆಸ್ಪತ್ರೆಯಲ್ಲಿ.   ಶಿವಮೊಗ್ಗದ ರಕ್ತದಾನದಲ್ಲಿ ಶತಕ ದಾಖಲಿಸಿ ಈಗ 116 ಬಾರಿ ರಕ್ತದಾನ ಮಾಡಿ ಜಿಲ್ಲೆಯ ಅಗ್ರಶ್ರೇಯಾಂಕದಲ್ಲಿರುವ ಧರಣೇಂದ್ರ ದಿನಕರ್ ಸಂದರ್ಶನ ಮಾಡಿದಾಗ ಈ ಘಟನೆ ನನಗೆ ನೆನಪಾಯಿತು.    ಆಗ ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದೆ, 1996ರಲ್ಲಿ ನಮ್ಮ ಯಡೇಹಳ್ಳಿ ಗ್ರಾಮ ಪಂಚಾಯಿತಿಯ ಗೇರುಬೀಸು ಊರಿನ ನನ್ನ ಆಪ್ತಮಿತ್ರ ಗೇರುಬೀಸು ಕೃಷ್ಣಣ್ಣ ತಮ್ಮ ಪತ್ನಿ ಶ್ರೀಮತಿ ಹೊನ್ನಮ್ಮನವರಿಗೆ ತಕ್ಷಣ ರಕ್ತ ಬೇಕಾಗಿದೆ ಅಂದಾಗ ಅವರಿಗೆ ರಕ್ತ ಪಡೆಯುವ ಮಾಹಿತಿ ನೀಡಿದ್ದೆ.    ಆಗ ಶಿವಮೊಗ್ಗದಲ್ಲಿ ವೆಲ್ ಡನ್ ಲ್ಯಾಬೊರೇಟರಿಗೆ  ಹೋಗಿ ರೋಗಿಗೆ ಬೇಕಾದ ರಕ್ತದ ಗುಂಪಿನವರೇ ರಕ್ತ ನೀಡಿ ಅದನ್ನು ಆಸ್ಪತ್ರೆಗೆ ಕೊಂಡೊಯ್ದು ಕೊಡಬೇಕಾದ ಕಾಲ.    ಅವತ್ತು ಆ ಗೇರುಬೀಸೆಂಬ ಹಳ್ಳಿಯ ಎಲ್ಲ ಮನೆಯ ಯಜಮಾನರು ಶಿವಮೊಗ್ಗದ ಮೆಗಾನ್ ಆಸ್ಪತ್ರೆಗೆ ದಾಖಲಾಗಿದ್ದ ಹೊನ್ನಮ್ಮನನ್ನ ನೋಡಲು ಹೋಗಿದ್ದರು.   ಅವರೆಲ್ಲ ಸ

Blog number 2088. ನನ್ನ ಮೊದಲ ವಿಡಿಯೋ ಎಡಿಟಿಂಗ್ ಪಿಕರಾಳ ಹಕ್ಕಿ ಗೂಡಿನಿಂದ ಹಾರಿದ್ದು,

#ನನಗೆ_ಏನೇ_ಪ್ರಯತ್ನ_ಮಾಡಿದರೂ_ಪಿಕಳಾರ_ನನ್ನ_ಬಾಯಿಯಲ್ಲಿ_ಪಿಕರಾಳ_ಎಂದೇ_ಉಚ್ಚಾರಣೆ #ಇದು_ನನ್ನ_ಮೊದಲ_ಎಡಿಟ್_ಮಾಡಿದ_ವಿಡಿಯೋ #ಜೀವನ_ಪರ್ಯಂತ_ಕಲಿಯುತ್ತಲೇ_ಹೋಗಬೇಕು_ಅದಕ್ಕೆ_ಕೊನೆ_ಇಲ್ಲ #ಮನುಷ್ಯ_ವಿಶಾಲ_ಸಮುದ್ರ_ಸಾಗರದ_ಒಂದು_ಬಿಂದುವಿನ_ಒಂದು_ಅಣುವೂ_ಅಲ್ಲ #ಬ್ರಹ್ಮಾಂಡ_ಅನಂತ_ಯೋಚಿಸಿದರೆ_ನಾವೇನೂ_ಅಲ್ಲ https://youtube.com/shorts/cHpWVQK3h6Q?feature=shared   ಬರೆಯುವ ಹವ್ಯಾಸ ಪತ್ರಿಕೆಗೆ ಕಾಲಂ ಬರೆಯಲು ಪ್ರಾರಂಭವಾಗಿ ನಂತರ ಪುಸ್ತಕ ಬರೆಯಲು ತದನಂತರ ಸಾಮಾಜಿಕ ಜಾಲತಾಣಕ್ಕೆ ಹೀಗೆ ಕಾಲ ಕಾಲಕ್ಕೆ ವೇಗದ ಜಗತ್ತಿನ ತಂತ್ರಜ್ಞಾನದ ಜೊತೆ ಹೆಜ್ಜೆ ಹಾಕುತ್ತಾ ಓಡುತ್ತಾ ಎಡವುತ್ತಾ ವೃದ್ಧಾಪ್ಯದ ಅಂಚಿಗೆ ಬಂದಾಯಿತು.   ಆದರೂ ಅಪ್ಡೇಟ್ ಆಗುತ್ತಲೇ ಇರಬೇಕು ಅದೇನೊ ಗೊತ್ತಿಲ್ಲ ನನಗೆ ವಿಡಿಯೋ ಎಡಿಟಿಂಗ್ ಕಲಿಯಲು ಆಗಲೇ ಇಲ್ಲ ಆದರೂ ಕಲಿಯಲೇ ಬೇಕೆಂಬ ಅದಮ್ಯ ಆಸೆ ಎಡಿಟಿಂಗ್ ಪ್ರಾರಂಭಕ್ಕೆ ಕಾರಣ ಆಯಿತು.   ಇನ್ನೂ ನನ್ನ ವಿಡಿಯೋ ಎಡಿಟಿಂಗ್ ABCD ಹಂತ ದಾಟಿಲ್ಲ ಇವತ್ತು ಬೆಳಿಗ್ಗೆ 6 ಕ್ಕೆ ವಾಕಿಂಗ್ ಪಾರಂಬಿಸುವ ಮೊದಲು ನನ್ನ ವಾಕಿಂಗ್ ಟ್ರಾಕ್ ಹೊಸ ಪ್ರೆಂಡ್ ಪಿಕರಾಳ ... ಸ್ಸಾರಿ ಪಿಕಳಾರ ತನ್ನ ಗೂಡಿನ ಮೂರು ಮೊಟ್ಟೆಗೆ ಕಾವು ನೀಡುತ್ತಿರುವುದು ನನ್ನ ಆಗಮನ ದೂರದಿಂದಲೇ ಗ್ರಹಿಸಿ ಗೂಡಿಂದ ಹಾರಿ ಮನೆಯ ಮೇಲೆ ಕುಳಿತು ನನ್ನ ಮತ್ತು ಶಂಭೂರಾಮನ ಗಮಿನಿಸುತ್ತದೆ.    ತನ್ನ ಗೂಡಿಂದ ಹಾರಿ ಹೋಗುವ ವಿಡಿಯೋ ಸ್ಲೋ

Blog number 2087. ರೈತ ನಾಯಕ ದಿನೇಶ್ ಶಿರವಾಳರು ನಿರ್ಮಿಸಿರುವ ಅವರ ಕನಸಿನ ಮನೆ "ಪರಿಶ್ರಮ" ದಿನಾಂಕ 28- ಏಪ್ರಿಲ್-2024 ಬಾನುವಾರ ಗೃಹ ಪ್ರವೇಶ.

#ಕಾಗೋಡು_ಹೋರಾಟದ_ನೇತಾರ_ಗಣಪತಿಯಪ್ಪ_ಸ್ಥಾಪಿತ_ರೈತಸಂಘ #ಮರುಸ್ಥಾಪನೆ_ಮಾಡಿದ_ಶ್ರಮಜೀವಿ_ಕೃಷಿಕ_ವಾಘ್ಮಿ_ಸಂಘಟನ_ಚತುರ_ದಿನೇಶ್_ಶಿರವಾಳರ #ಸಾಗರದ_ಶಿರವಾಳದಲ್ಲಿ_ನಿರ್ಮಿಸಿರುವ_ಪರಿಶ್ರಮ_ಎಂದು_ನಾಮಕರಣಗೊಂಡಿರುವ #ಮನೆ_ಗೃಹ_ಪ್ರವೇಶ_ದಿನಾಂಕ_28_ಏಪ್ರಿಲ್_2024_ಭಾನುವಾರ.   1- ಜನವರಿ-1948ರಲ್ಲಿ ಕಾಗೋಡು ಹೋರಾಟದ ರೂವಾರಿ ಹೆಚ್.ಗಣಪತಿಯಪ್ಪ ಸ್ಥಾಪಿಸಿದ್ದ ರೈತ ಸಂಘಕ್ಕೆ ಅಂದಿನ ಅಧ್ಯಕ್ಷರು ಮೂಕಪ್ಪನವರು 1957ರಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾಗುತ್ತಾರೆ, ಕಾರ್ಯದರ್ಶಿಗಳಾಗಿದ್ದ ಗಣಪತಿಯಪ್ಪನವರು ಶಾಂತವೇರಿ ಗೋಪಾಲಗೌಡರು ಸೇರಿ 1952 ರಲ್ಲಿ ಪ್ರಾರಂಬಿಸಿದ ಊಳುವವನೇ ಹೊಲದೊಡೆಯ ಘೋಷಣೆಯ ಕಾಗೋಡು ರೈತ ಹೋರಾಟ ವಿಶ್ವ ವಿಖ್ಯಾತವಾಗಿದ್ದು ಇತಿಹಾಸ.   ಈ ರೈತ ಸಂಘದ ಮರು ಹುಟ್ಟು ಹಾಕಿರುವ ದಿನೇಶ್ ಶಿರವಾಳ ನ್ಯಾಯಕ್ಕಾಗಿ ಗಾಂಧೀ ಮಾರ್ಗದಲ್ಲಿ ವಿನೂತನ ಹೋರಾಟಗಳ ಮೂಲಕ ಜನರ ಗಮನ ಸೆಳೆಯುತ್ತಿದ್ದಾರೆ, ಅಧ್ಯಕ್ಷ ದಿನೇಶ್ ಶಿರವಾಳರ ಕಂಚಿನ ಕಂಠದ ಕರಾರುವಕ್ಕಾದ ಮಾತುಗಳು ಹಾಗೂ ಅವರ ಬಾಡಿ ಲಾಂಗ್ವೇಜ್ ನನಗೆ ಇಷ್ಟ.   40 ವಷ೯ದ ದಿನೇಶ್ ಶಿರವಾಳರು ಚಿಕ್ಕ೦ದಿನಿ೦ದ ತಾಯಿ ಜೊತೆ ತಾವು ಬೆಳೆದ ತರಕಾರಿ ತಲೆ ಮೇಲೆ ಹೊತ್ತು ನಿತ್ಯ ಸಾಗರದ ಪೇಟೆಯಲ್ಲಿ ಮಾರಾಟ ಮಾಡುತ್ತಿದ್ದವರು, ಸುಖ ಸಾಗರ ಹೋಟೆಲ್ ನಲ್ಲಿ ಕೆಲಸ ಮಾಡುತ್ತಾ ನಂತರ ಬೆಂಗಳೂರಲ್ಲಿ ಕರ್ನಾಟಕ ಬ್ರಿವರಿಸ್ ನಲ್ಲಿ ದಿನಗೂಲಿ ವೃತ್ತಿ ಮಾಡಿದವರು ನಂತರ ಟ್ರಾಕ್ಟರ್ ಖರೀದಿಸಿ ಬಾಡಿಗೆ ಮಾಡಿ