Blog number 2073. ನಂಜನಗೂಡಿನ ರಸಬಾಳೆ ಬೆಳೆದು ನನಗೆ ಸವಿಯಲು ನೀಡಿದ ರಿಪ್ಪನಪೇಟೆ ಕೋಕಾ ಕೋಲಾ ಡೀಲರ್ ಬಿಜೆಪಿ ಯುವ ಮುಖಂಡ ಸುದೀರ್ ಕುಮಾರ್
#ನಂಜನಗೂಡಿನ_ರಸಬಾಳೆ
#ಆನಂದಪುರಂ_ರಿಪ್ಪನಪೇಟೆ_ಕೋಕಾ_ಕೊಲಾ_ಡೀಲರ್
#ಸುದೀರ್_ಕುಮಾರ್_ಅವರು_ಬೆಳೆಸಿದ_ರಸಬಾಳೆ_ಹಣ್ಣು
#ತಂದು_ಕೊಟ್ಟಿದ್ದರು
#ನಂಜನಗೂಡಿನ_ರಸ_ಬಾಳೆಗೆ_ಜಿಯೇಗ್ರಾಪಿಕಲ್_ಇಂಡಿಕೇಷನ್_ಟ್ಯಾಗ್_ದೊರೆತಿದೆ.
https://youtu.be/op0fhq7BF-4?feature=shared
ರಸ ಬಾಳೆ, ಪುಟ್ಟು ಬಾಳೆ, ಕರಬಾಳೆ, ಕಲ್ಲು ಬಾಳೆ, ವಾಟ ಬಾಳೆ, ಬೂದಬಾಳೆ ತಳಿಗಳು ಬಲು ಅಪರೂಪ ಇಂತಹ ಸಂದರ್ಭದಲ್ಲಿ ರಿಪ್ಪನ್ ಪೇಟೆಯ ಸುದೀರ್ ಅವರ ಮನೆಯಲ್ಲಿ ಬೆಳೆದ ರಸ ಬಾಳೆಯ ಒಂದು ಚಿಪ್ಪು ತಂದು ಕೊಟ್ಟಿದ್ದರು.
ಅಪರೂಪದ ವಿಶೇಷ ತಳಿಯ ಎಲ್ಲಾ ಹಣ್ಣುಗಳೆಂದರೆ ನನಗೆ ಅತ್ಯಂತ ಪ್ರಿಯವಾದದ್ದು.
ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿಯಲ್ಲಿ ಸುದೀರ್ ಬಿಜೆಪಿ ಪಕ್ಷದ ಮುಖಂಡರು ಇವರ ಪತ್ನಿ ಗ್ರಾಮ ಪಂಚಾಯತ್ ಸದಸ್ಯರು ಆಗಿದ್ದಾರೆ.
ರಸಬಾಳೆ ನಂಜನಗೂಡಿನ ರಸಬಾಳೆ ಎಂದೇ ಪ್ರಖ್ಯಾತಿ ಪಡೆದಿದೆ ಇದರ ಮೂಲ ನಂಜನಗೂಡು ಆದ್ದರಿಂದಲೇ ಕೇಂದ್ರ ಸರ್ಕಾರದ ಜಿ ಐ ಟ್ಯಾಗ್ ಈ ಬಾಳೆಗೆ ದೊರೆತಿದೆ.
ಈ ಬಾಳೆಹಣ್ಣಿನ ರುಚಿ ಸ್ಟಾದ ಮತ್ತು ಸುವಾಸನೆ ಬೇರೆಲ್ಲಾ ಬಾಳೆ ಹಣ್ಣಿಗಿಂತ ಬಿನ್ನ ಇದರ ತಿರುಳ ಟೆಕ್ಷರ್ ಕೂಡ ವಿಬಿನ್ನ.
ರಸಬಾಳೆ ಹಣ್ಣಿನ ಸಿಪ್ಪೆ ಸುಲಿದು ಅರ್ದ ಬಾಳೆ ಹಣ್ಣನ್ನು ತಿನ್ನುವುದರಲ್ಲಿಯೇ ರಸ ಬಾಳೆಹಣ್ಣು ಆಘ್ರಾಣಿಸಿ ನನ್ನ ಪ್ರೀತಿಯ ಶಂಭೂ ರಾಮ ಪಾಲು ಕೇಳಿ ಬಂದಿದ್ದಾನೆ.
ಅಪರೂಪದ ರಸಬಾಳೆ ಹಣ್ಣು ನೀಡಿದ ರಿಪ್ಪನ್ ಪೇಟೆ ಸುದಿಯವರಿಗೆ ಕೃತಜ್ಞತೆಗಳ ಅರ್ಪಿಸುತ್ತೇನೆ.
Comments
Post a Comment