ಸ್ಥಳಕ್ಕೆ ಬಂದು ಜಂಬಿಟ್ಟಿಗೆ ಕಲ್ಲುಗಳನ್ನ ಯಂತ್ರದಲ್ಲಿ ಕ್ಷಣ ಮಾತ್ರದಲ್ಲಿ ಡ್ರೆಸ್ಸಿಂಗ್ ಮಾಡುವ ಯOತ್ರ ಆನಂದಪುರದಲ್ಲಿ ಬಾಡಿಗೆಗೆ ನೀಡುವ ಉದ್ದಿಮೆದಾರ ಪ್ರದೀಪ್ ಆಚಾರ್
#ಜOಬಿಟ್ಟಿಗೆ_ಕಲ್ಲು_ಕೆತ್ತುವ_ಯOತ್ರ_ಬಾಡಿಗೆಗೆ_ಬಂದಿದೆ. ಗುಜರಾತಿನ ಕರಾವಳಿಯಿ೦ದ ಕೇರಳ ಕರಾವಳಿವರೆಗೆ ಗೋವಾ ಕನಾ೯ಟಕ ರಾಜ್ಯ ಸೇರಿ ಈ ಕೆಂಪು ಕಲ್ಲು (ಜಂಬಿಟ್ಟಿಗೆ / ಇಂಗ್ಲೀಷ್ ನಲ್ಲಿ Latreat stone) ಸ್ಥಳಿಯವಾಗಿ ಸುಲಭವಾಗಿ ಸಿಗುವ ಕಲ್ಲು, ಇದರಿಂದ ಕೋಟಿ, ದೇವಸ್ಥಾನ, ಕೊಳ, ಸೇತುವೆ, ಕೆರೆ ಕಟ್ಟಿ ಮತ್ತು ಬಾವಿಗಳನ್ನ ಒ೦ದು ಕಾಲದಲ್ಲಿ ನಿಮಿ೯ಸಿದ್ದನ್ನು ನೋಡುತ್ತೇವೆ. ಈಗ ದೈಹಿಕ ಶ್ರಮ ಮಾಡುವುದು ಕಡಿಮೆ ಆದ ಮೇಲೆ ಈ ಕಲ್ಲಿನ ಬಳಕೆ ಕ್ರಮೇಣ ಕಡಿಮೆ ಆಗುತ್ತಿದೆ, ಇದರ ಬಾರ 30 kg ಗೂ ಹೆಚ್ಚಾದ್ದರಿಂದ ಕಟ್ಟಡ ಕಟ್ಟುವವರೂ ಕೂಡ ಇದನ್ನ ಇಷ್ಟ ಪಡುವುದು ಕಡಿಮೆ ಆಗಿದೆ. ಕಚ್ಚಾ ಕಲ್ಲು ತಂದ ನಂತರ ಈ ಕಲ್ಲಿನ ನಾಲ್ಕು ಮುಖ ಸರಿಯಾಗಿ ಕೆತ್ತಿ ಸಮತಟ್ಟು ಮಾಡುವ ಕೆಲಸ ಇದೆ, ಇದನ್ನ ಸರಿಯಾದ ಅನುಭವಿ ಕೆಲಸಗಾರ ಮಾಡಿದರೆ ಮಾತ್ರ ಕಟ್ಟಡ ಭದ್ರ ಮತ್ತು ಸಿಮೆಂಟ್ ಮರಳು ಮಿತವ್ಯಯ ಇಲ್ಲದಿದ್ದರೆ ಕಟ್ಟಡ ಸರಿ ಆಗುವುದಿಲ್ಲ ಈಗ ಈ ಕಲ್ಲು ಕೆತ್ತುವ ನುರಿತ ಕೆಲಸಗಾರರ ಕೊರತೆ ಕೂಡ ಈ ಕಲ್ಲಿನ ಬಳಕೆ ಕಡಿಮೆಗೆ ಕಾರಣವಾಗಿದೆ. ನನ್ನ ಕಟ್ಟಡದಲ್ಲಿ ಹೊಸ ತಂತ್ರಜ್ಞಾನದ ಲೈಟ್ ವೈಟ್ ಬ್ರಿಕ್ಸ್ ಬಳಸಿದ್ಧರಿಂದ ನಮ್ಮ ಊರಲ್ಲೇ ಸಿಗುವ ಜಂಬಿಟ್ಟಿಗೆ ಖರೀದಿಸಿರಲಿಲ್ಲ ಆದರೆ ಲಿಪ್ಟ್ ರೂಂ ಅದ೯ ಜಂಬಿಟ್ಟಿಗೆಯಲ್ಲಿ ಕಟ್ಟಿದ್ದರಿಂದ ಒಂದು ಲಾರಿ ಜಂಬ...