ಸ್ಥಳಕ್ಕೆ ಬಂದು ಜಂಬಿಟ್ಟಿಗೆ ಕಲ್ಲುಗಳನ್ನ ಯಂತ್ರದಲ್ಲಿ ಕ್ಷಣ ಮಾತ್ರದಲ್ಲಿ ಡ್ರೆಸ್ಸಿಂಗ್ ಮಾಡುವ ಯOತ್ರ ಆನಂದಪುರದಲ್ಲಿ ಬಾಡಿಗೆಗೆ ನೀಡುವ ಉದ್ದಿಮೆದಾರ ಪ್ರದೀಪ್ ಆಚಾರ್
ಗುಜರಾತಿನ ಕರಾವಳಿಯಿ೦ದ ಕೇರಳ ಕರಾವಳಿವರೆಗೆ ಗೋವಾ ಕನಾ೯ಟಕ ರಾಜ್ಯ ಸೇರಿ ಈ ಕೆಂಪು ಕಲ್ಲು (ಜಂಬಿಟ್ಟಿಗೆ / ಇಂಗ್ಲೀಷ್ ನಲ್ಲಿ Latreat stone) ಸ್ಥಳಿಯವಾಗಿ ಸುಲಭವಾಗಿ ಸಿಗುವ ಕಲ್ಲು, ಇದರಿಂದ ಕೋಟಿ, ದೇವಸ್ಥಾನ, ಕೊಳ, ಸೇತುವೆ, ಕೆರೆ ಕಟ್ಟಿ ಮತ್ತು ಬಾವಿಗಳನ್ನ ಒ೦ದು ಕಾಲದಲ್ಲಿ ನಿಮಿ೯ಸಿದ್ದನ್ನು ನೋಡುತ್ತೇವೆ.
ಈಗ ದೈಹಿಕ ಶ್ರಮ ಮಾಡುವುದು ಕಡಿಮೆ ಆದ ಮೇಲೆ ಈ ಕಲ್ಲಿನ ಬಳಕೆ ಕ್ರಮೇಣ ಕಡಿಮೆ ಆಗುತ್ತಿದೆ, ಇದರ ಬಾರ 30 kg ಗೂ ಹೆಚ್ಚಾದ್ದರಿಂದ ಕಟ್ಟಡ ಕಟ್ಟುವವರೂ ಕೂಡ ಇದನ್ನ ಇಷ್ಟ ಪಡುವುದು ಕಡಿಮೆ ಆಗಿದೆ.
ಕಚ್ಚಾ ಕಲ್ಲು ತಂದ ನಂತರ ಈ ಕಲ್ಲಿನ ನಾಲ್ಕು ಮುಖ ಸರಿಯಾಗಿ ಕೆತ್ತಿ ಸಮತಟ್ಟು ಮಾಡುವ ಕೆಲಸ ಇದೆ, ಇದನ್ನ ಸರಿಯಾದ ಅನುಭವಿ ಕೆಲಸಗಾರ ಮಾಡಿದರೆ ಮಾತ್ರ ಕಟ್ಟಡ ಭದ್ರ ಮತ್ತು ಸಿಮೆಂಟ್ ಮರಳು ಮಿತವ್ಯಯ ಇಲ್ಲದಿದ್ದರೆ ಕಟ್ಟಡ ಸರಿ ಆಗುವುದಿಲ್ಲ ಈಗ ಈ ಕಲ್ಲು ಕೆತ್ತುವ ನುರಿತ ಕೆಲಸಗಾರರ ಕೊರತೆ ಕೂಡ ಈ ಕಲ್ಲಿನ ಬಳಕೆ ಕಡಿಮೆಗೆ ಕಾರಣವಾಗಿದೆ.
ನನ್ನ ಕಟ್ಟಡದಲ್ಲಿ ಹೊಸ ತಂತ್ರಜ್ಞಾನದ ಲೈಟ್ ವೈಟ್ ಬ್ರಿಕ್ಸ್ ಬಳಸಿದ್ಧರಿಂದ ನಮ್ಮ ಊರಲ್ಲೇ ಸಿಗುವ ಜಂಬಿಟ್ಟಿಗೆ ಖರೀದಿಸಿರಲಿಲ್ಲ ಆದರೆ ಲಿಪ್ಟ್ ರೂಂ ಅದ೯ ಜಂಬಿಟ್ಟಿಗೆಯಲ್ಲಿ ಕಟ್ಟಿದ್ದರಿಂದ ಒಂದು ಲಾರಿ ಜಂಬಿಟ್ಟಿಗೆ ತರಿಸಿದ್ದೆ ಆದರೆ ಇದನ್ನ ಕೆತ್ತಿ ಸಮತಳ ಮಾಡಿ ಕೊಡುವವರು ಮಾತ್ರ ಸಿಗಲೇ ಇಲ್ಲ.
ಅಷ್ಟರಲ್ಲಿ ಆನಂದಪುರದ ಮಾರುತಿ ಕಾರ್ ಗಳ ಗ್ಯಾರೇಜ್ ಮಾಲಿಕರು ಜಂಬಿಟ್ಟಿಗೆ ಕಲ್ಲು ಸಮತಳ ಮಾಡುವ ಯಂತ್ರ ಟ್ರಾಕ್ಟರ್ ಗೆ ಅಳವಡಿಸಿದ್ದಾರೆ, ಸ್ಥಳಕ್ಕೆ ಹೋಗಿ ಸಮತಳ ಮಾಡಿ ಕೊಡುತ್ತಾರೆ ಅಂತ ಆನಂದಪುರದ ಸಿದ್ದೇಶ್ವರ ಕಾಲೋನಿ ಮಿತ್ರ ರಾಮಣ್ಣ ತಿಳಿಸಿ ಇವತ್ತು ಬೆಳಿಗ್ಗೆ ಕೇವಲ ಒಂದು ಗಂಟೆ ಅವದಿಯಲ್ಲಿ 650 ಕಲ್ಲು ಅತ್ಯಂತ ಮಟ್ಟಸವಾಗಿ ಡ್ರೆಸ್ಸಿಂಗ್ ಈ ಯಂತ್ರದಲ್ಲಿ ಮಾಡಿಸಿ ಕೊಟ್ಟರು, ಇದನ್ನೆ ಕೈಯಲ್ಲಿ ಮಾಡಿದ್ದರೆ ಇಷ್ಟು ನಿಖರವಾಗುತ್ತಿರಲಿಲ್ಲ.
ಆನಂದಪುರO ಜಂಬಿಟ್ಟಿಗೆ ಕಲ್ಲುಗಣಿಗಳ ಹಬ್ ಆಗಿದ್ದರೂ ಇಂತ ಯಂತ್ರ ಮಾಡಲು ಯಾರೂ ಮುಂದೆ ಬಂದಿರಲಿಲ್ಲ ಯುವ ಸಾಹಸಿ ಉದ್ಧಿಮೆದಾರರಾದ ಪ್ರದೀಪ್ ಆಚಾರ್ ಈ ಕೆಲಸ ಮಾಡಿದ್ದಾರೆ.
ಅವರ ಸಂಪಕಿ೯ಸಲು ಮೊಬೈಲ್ ಸಂಖ್ಯೆ
9901674936
Comments
Post a Comment