ಕೊರಾನ ಲಾಕ್ ಡೌನ್ ಡೈರಿ (39) .ಆಡಳಿತಾವ ದಿ ಮುಗಿದ ರಾಜ್ಯದ ಗ್ರಾಮ ಪಂಚಾಯತಗಳಿಗೆ ನಾಮ ನಿದೇ೯ಶನ ಸದಸ್ಯರ ನಾಮಕರಣ ಮಾಡಿ ಮುಂದಿನ ಚುನಾವಣೆ ವರೆಗೆ ಆಡಳಿತ ಮಂಡಳಿ ರಚಿಸುವ ಪಕ್ಷದ ಕಾಯ೯ಕತ೯ರಿಗೆ ಬಂಪರ್ ಕೊಡುಗೆ ನೀಡುತ್ತಿರುವ ರಾಜ್ಯ ಸಕಾ೯ರ.
ಕೊರಾನಾ ಲಾಕ್ ಡೌನ್ ಡೈರಿ -2020
ಲೆಟರ್ ನಂಬರ್- 39
*ಕೊರಾನಾ ಜನರ ಜೀವ ಹಿಂಡುತ್ತಿದ್ದರೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಹೊಸ ರಾಜಕಾರಣಕ್ಕೆ ಕಾರಣವಾಗಿದೆ.*
ಕೊರಾನ ವೈರಸ್ ಜನರ ಜೀವಕ್ಕೆ ಗಂಡಾ೦ತರ ಉoಟು ಮಾಡಿದ್ದರೂ ಗ್ರಾಮ ಮಟ್ಟದಲ್ಲಿ ಮಾತ್ರ ಗ್ರಾಮ ಪಂಚಾಯಿತಿಗಳಿಗೆ ನಾಮ ನಿಧೇ೯ಶನ ಸದಸ್ಯರ ನೇಮಕ ಮಾಡುವ ವಿಚಾರ ಗರಿಗೆದರಿದೆ.
ಗ್ರಾಮ ಪಂಚಾಯತ್ ಚುನಾವಣೆಗೆ ಪಕ್ಷ ಇಲ್ಲ ಅನ್ನುವುದು ಕೇವಲ ನಾಮಕಾವಸ್ಥೆ ಆದರೆ ಇಲ್ಲಿ ಸ್ಪದೆ೯ ಮಾಡುವವರು ವಿವಿದ ಪಕ್ಷಕ್ಕೆ ಸೇರಿದ ತಳಮಟ್ಟದ ಕಾಯ೯ಕತ೯ರೆ.
ಆಯಾ ಪಕ್ಷದ ಬಹುಮತದ ಆದಾರದ ಮೇಲೆ ಅಧ್ಯಕ್ಷರು ಉಪಾಧ್ಯಕ್ಷರು ಆಯ್ಕೆ ಆಗುತ್ತಾರೆ.
ಪರಿಸ್ಥಿತಿ ಸರಿ ಇದ್ದು ಕೊರಾನಾ ವೈರಸ್ ಬಾದೆ ಇರದಿದ್ದರೆ ಇಷ್ಟರಲ್ಲಿ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುತ್ತಿತ್ತು ಆದರೆ ಈ ಎಲ್ಲಾ ಗಂಡಾ೦ತರದಿ೦ದ ಗ್ರಾಮ ಪಂಚಾಯತ್ ಚುನಾವಣೆ ಅನಿವಾಯ೯ವಾಗಿ ಮುಂದೂಡಲೇ ಬೇಕಾಗಿದೆ.
ಮೇ ತಿಂಗಳ (2020) ಕೊನೆಗೆ ಈ ಹಿಂದಿನ 5 ವಷ೯ ಕಾಲಾವಧಿ ಪೂರೈಸಲಿರುವ ಗ್ರಾಮ ಪಂಚಾಯತ ಆಡಳಿತ ಮOಡಳಿಗೆ ಹೊಸ ಸದಸ್ಯರ ಚುನಾವಣೆ ನಡೆಸಲಾಗದ್ದರಿಂದ ಸಕಾ೯ರ ಆಡಳಿತಾಧಿಕಾರಿ ನೇಮಕ ಮಾಡಬೇಕಾಗಿದೆ.
ಆದರೆ ರಾಜ್ಯ ಸಕಾ೯ರ ಮುಂದಿನ ಚುನಾವಣೆ ತನಕ ಗ್ರಾಮ ಪಂಚಾಯತ್ ಗಳಿಗೆ ಆಡಳಿತ ಮಂಡಳಿ ರಚಿಸಲು ತೀಮಾ೯ನಿಸಿದೆ.
ಹಿಂದಿನ ಮೀಸಲಾತಿ ಸಂಖ್ಯೆಗೆ ಅನುಗುಣವಾಗಿ ತಮ್ಮ ಪಕ್ಷದವರನ್ನೆ ನಾಮ ನಿದೇ೯ಶನ ಮಾಡಲಿದೆ.
ಆಗ ಇಡೀ ರಾಜ್ಯದಲ್ಲಿನ ಗ್ರಾಮ ಪಂಚಾಯತಗಳು ಬಿಜೆಪಿ ಪಕ್ಷದ ಆಡಳಿತ ಮಂಡಳಿಗಳಾಗುತ್ತದೆ ಎಂದು ವಿರೋದ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸುತ್ತಿದೆ.
ಗ್ರಾಮ ಪಂಚಾಯತ್ ಮಟ್ಟದಲ್ಲಿನ ಕಾಯ೯ಕತ೯ರಿಗೆ ಆಡಳಿತದಲ್ಲಿ ಪಧಾಧಿಕಾರ ನೀಡಿ ಅವರನ್ನ ಮುಂದಿನ ಚುನಾವಣೆಗೆ ತಯಾರಿ ಮಾಡಿ ಪಕ್ಷವನ್ನ ತಳಮಟ್ಟದಲ್ಲಿ ಮಜಬೂತು ಗೊಳಿಸುವ ಅವಕಾಶವನ್ನ ರಾಜ್ಯ ಬಿಜೆಪಿ ಈ ಸಂದಭ೯ದಲ್ಲಿ ಕಳೆದುಕೊಳ್ಳಲಾರದು.
ಇಲ್ಲಿ ಕಾನೂನು ಬಳಸಿಕೊಂಡು ನೈತಿಕತೆಗೆ ಪರದೆ ಹೊದಿಸಿ ಪಂಚಾಯತ್ ರಾಜ್ ಕಾಯ್ದೆಗೆ ಅಪಮಾನ ಮಾಡಿದಂತೆ ಆಗುವುದಿಲ್ಲವಾ? ಎಂಬ ಪ್ರಶ್ನೆಗೆ ಸದ್ಯದ ಪಕ್ಷಾ೦ತರ /ಆಪರೇಷನ್ ಇತ್ಯಾದಿಗಳಿ೦ದ ರಾಜ್ಯ ಸಕಾ೯ರವೇ ರಾತ್ರೋರಾತ್ರಿ ಬದಲಾಗುವಾಗ ಇದೇನು ದೊಡ್ಡದು ಎಂಬ ಮರು ಪ್ರಶ್ನೆ ಇದೆ.
ಗ್ರಾಮ ಮಟ್ಟದಲ್ಲಿ ಜನರ ಓಟಿನ ಹಂಗಿಲ್ಲದೆ ಮುಂದಿನ ಚುನಾವಣೆವರೆಗೆ (ಕನಿಷ್ಟ 6 ತಿಂಗಳು) ಹೊಸ ನಾಮಕರಣ ಸದಸ್ಯರ ಆಡಳಿತ ಬರಲಿದೆ.
ಕೊರಾನ ಅನಾಹುತದಲ್ಲಿ ಇದು ಒಂದು ಅನುಕೂಲ.
Comments
Post a Comment