ಕೊರಾನಾ ಲಾಕ್ ಡೌನ್ ಡೈರಿ ಲೆಟರ್ ನಂಬರ್ 30,ಆನ್ ಲೈನ್ ಮದ್ಯ ಮಾರಾಟಕ್ಕೆ ಅನುಮತಿ ನೀಡುವ ಬಗ್ಗೆ ಯೋಚಿಸಲು ಸಕಾಲ, ಮದ್ಯ ಮಾರಾಟ ನಿಬ೯೦ದ ಮತ್ತು ಪುನರಾರಂಭದಿOದ ಆಗಿರುವ ನ್ಯೂನತೆಗಳು ಪರಿಶೀಲನೆಗೆ ಯೋಗ್ಯ
#ಕೊರಾನಾ_ಲಾಕ್_ಡೌನ್_ಡೈರಿ_2020
#ಲೆಟರ್_ನOಬರ್_30
#ದಿನಾ೦ಕ_5_ಮೇ_2o20
#ನಲವತ್ತು_ದಿನ_ಇಡೀ_ದೇಶ_ಸಂಪೂಣ೯_ಪಾನನಿಶೇದ_ಆಚರಿಸಿದ್ದು_ಸಣ್ಣಸ೦ಗತಿ_ಅಲ್ಲ
ಮದ್ಯ Essential ಅಥವ Non Essential ಎನ್ನುವ ತೀಮಾ೯ನ, ಚಚೆ೯ ಏನೇ ಇರಲಿ ಆದರೆ ಇಡೀ ದೇಶದಲ್ಲಿ 40 ದಿನ ಸಂಪೂಣ೯ ಮದ್ಯ ಮರಾಟ ನಿರಾಕರಿಸಿದ್ದು ಅದರಂತ 40 ದಿನ ಮಧ್ಯ ಇಲ್ಲದೆ ಮದ್ಯಪಾನಿಗಳು ಸ್ವಯಂ ಪಾನ ನಿಯಂತ್ರಣ ಆಚರಿಸಿದ್ದು ಸಣ್ಣ ಸಂಗತಿ ಇಲ್ಲ.
ಹಾಲು, ಔಷದಿ, ದಿನಸಿ, ಗ್ಯಾಸ್, ಮೀನು ಮಾ೦ಸ, ಕೋಳಿ ಮಾರಾಟಕ್ಕೆ ಅವಕಾಶ ನೀಡಿದ ಸಕಾ೯ರ ಮದ್ಯಪಾನ ಮಾರಾಟಕ್ಕೆ ಏಕೆ ಅವಕಾಶ ನೀಡಲಿಲ್ಲ ಎಂಬ ಚಚೆ೯ಗೆ ವಿರಾಮ ನೀಡುವ೦ತೆ 2 ಹಂತದ ಲಾಕ್ ಡೌನ್ ಕಳೆದ ಮೇಲೆ 3ನೇ ಹಂತದ ಲಾಕ್ ಡೌನ್ ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿತು.
ಮಧ್ಯಮಾರಾಟದ ಮೊದಲ ದಿನ ಸಾಮಾಜಿಕ ಅಂತರ ಕಾಪಾಡುವುದರಲ್ಲಿ ಅನೇಕ ತಪ್ಪುಗಳು ನಡೆಯಿತು, 40 ದಿನ ಸಿಗದ ಮದ್ಯ ಖರೀದಿಸುವಲ್ಲಿ ನಾ ಮುಂದು ತಾ ಮುಂದು ಎಂದು ಅವಸರದಲ್ಲಿ ಕರೋನಾ ವೈರಸ್ ಸುಲಭವಾಗಿ ಹರಡುವ ವಾತಾವರಣ ಸೃಷ್ಟಿ ಆಗಿದ್ದು ವಿಪಯಾ೯ಸ.
ಜನಜOಗುಳಿ ಸೇರ ಬಾರದು ಇದರಿಂದ ಪರಸ್ಪರ ಅಂತರ ಕಾಪಾಡಲು ಸಾಧ್ಯವಿಲ್ಲ ಇಂತಹ ಸಂದಭ೯ದಲ್ಲಿ ಒಬ್ಬ ಕೊರಾನಾ ವೈರಸ್ ಪೀಡಿತ ಇದ್ದರೆ ನೂರಾರು ಜನರಿಗೆ ಅದು ಹರಡುತ್ತದೆಂದೆ ದೇವಸ್ಥಾನ, ಚಚ್೯ ಮತ್ತು ಮಸೀದಿಗಳಲ್ಲೂ ಪೂಜೆ ಪ್ರಾಥ೯ನೆ ನಿಲ್ಲಿಸಿದೆ ಆದರೆ ಮಧ್ಯಪಾನ ಮಾರಾಟ ಪ್ರಾರಂಬದ ಮೊದಲ ದಿನದ ಹಪಾಹಪಿ ಎಲ್ಲಾ ರೀತಿಯ ಮುಂಜಾಗುರುಕತೆಯನ್ನೆ ಬುಡಮೇಲು ಮಾಡಿತು.
ಇದೇ ಸಂದಭ೯ದಲ್ಲಿ ಮದ್ಯಪಾನ ಮಾರಾಟ ಪ್ರಾರಂಭ ಮಾಡುವುದು ಬೇಡ ಹೇಗೂ 40 ದಿನ ಕುಡಿತ ಬಿಟ್ಟವರಿಗೆ ಇನ್ನು ಮುಂದೂ ಮಧ್ಯಪಾನ ಬಿಟ್ಟು ಬಿಡಲು ಸುಲಭ ಇದರಿ೦ದ ಅನೇಕ ಸಂಸಾರಗಳು ಸುಖಿ ಸಂಸಾರ ಆಗಲಿದೆ ಎಂಬ ಅನೇಕ ಸಂದೇಶ ಗಣ್ಯರು ನೀಡಿದರು.
ಮಧ್ಯಮಾರಾಟ ಪ್ರಾರಂಬಿಸದಿದ್ದರೆ ಸಕಾ೯ರಕ್ಕೆ ಸಾವಿರಾರು ಕೋಟಿ ನಷ್ಟ ಎಂಬ ಆಥಿ೯ಕ ತಜ್ಞರ ಅಭಿಪ್ರಾಯ ನೀಡಿದರು.
ಮುಖ್ಯಮಂತ್ರಿ ಯಡೂರಪ್ಪ ಹೆಂಡದಿಂದ ಸಕಾ೯ರ ನಡೆಸಬೇಕಾ? ಅಂತ ಅವರ ರಾಜಕೀಯ ವಿರೋದಿಗಳ ಹೇಳಿಕೆಗಳು ಮಧ್ಯಮಾರಾಟ ಪುನರ್ ಪ್ರಾರಂಭದ ಬಗ್ಗೆ ಅನಿಶ್ಚಯತೆ ಉoಟಾಗಿತ್ತು.
ಯಾವಾಗ ಕೇಂದ್ರ ಸಕಾ೯ರ ದೇಶದಾದ್ಯOತ ಕೆಂಪು ವಲಯ ಹೊರತು ಪಡಿಸಿ ಮಾರಾಟ ಮಾಡಲು ಅನುಮತಿ ನೀಡಿತೋ ಎಲ್ಲಾ ರಾಜ್ಯ ಸಕಾ೯ರಗಳು (ಗುಜರಾತ್, ಬಿಹಾರ ಹೊರತು ಪಡಿಸಿ) ನಿರಾಳವಾಯಿತು ಮಧ್ಯಮಾರಾಟ ಪ್ರಾರಂಬಿಸಿತು.
ಇದು ಮಧ್ಯ ಪಾನಿಗಳಿಗೆ ಸಂತೋಷ ಉOಟು ಮಾಡಿದೆ ಆದರೆ ಮಧ್ಯಪಾನಿಗಳು ಮೈಮರೆತು ಕೊರಾನ ವೈರಸ್ ನಿಯOತ್ರಣದ ಮುಂಜಾಗ್ರತೆ ಮರೆತರೆ ಅಪಾಯ ಎಂಬುದು ಮರೆಯಬಾರದು.
Comments
Post a Comment