ಕೊರಾನ ಲಾಕ್ ಡೌನ್ ಡೈರಿ - (37).ಲಾಕ್ ಡೌನ್ - 4 ರ ವಿನಾಯ್ತಿಗಳು ಕೊರಾನ ವೈರಸ್ ನಿಯ೦ತ್ರಣಕ್ಕೆ ಸಹಕಾರಿ ಅಲ್ಲ, ರಾಜ್ಯ ಸಕಾ೯ರದ ನಡೆ ಬೇರೆ ರಾಜ್ಯದ ತೀಮಾ೯ನದOತಿಲ್ಲ, ಕೊರಾನ ವೈರಸ್ ನ ಅನಾಹುತಕಾರಿ ಹಂತ ತಲುಪಿದರೆ ಹೊಣೆ ಯಾರದ್ದು?
ಕೊರಾನಾ ಲಾಕ್ ಡೌನ್ ಡೈರಿ -2020
ಲೆಟರ್ ನಂಬರ್- 37
ದಿನಾ೦ಕ: 19 -ಮೇ -2020
* ಇಷ್ಟು ದಿನದ ನಿಯOತ್ರಣ ಮುಂಜಾಗೃತೆಯನ್ನ ಅಪಹಾಸ್ಯ ಮಾಡಿದಂತೆ ಲಾಕ್ ಡೌನ್ -4 ರ ವಿನಾಯತಿಗಳು.
ಈ ಕಾಯಿಲೆಗೆ ಔಷದಿ ಕಂಡು ಹಿಡಿದಿಲ್ಲ ಅಲ್ಲಿ ತನಕ ನಮ್ಮದು ತಂತಿ ಮೇಲಿನ ನಡುಗೆ, ಇಲ್ಲಿವರೆಗೆ ನಮ್ಮ ನಮ್ಮ ಮಿತಿಯ ನಿಯ೦ತ್ರಣ ಇನ್ನೂ ಮುಂದೂ ನೀರಿಕ್ಷಿಸಲು ಸಾಧ್ಯವಿಲ್ಲ.
ಯಾಕೆಂದರೆ ಅನೇಕ ರಾಜ್ಯಗಳು ಕೇಂದ್ರ ಸಕಾ೯ರ ವಿನಾಯಿತಿ ನೀಡಿದರೂ ಪರಿಸ್ಥಿತಿಯ ಗಂಬೀರತೆ ನೋಡಿ ಮೇ ತಿಂಗಳ 31 ರವರೆಗೆ ಲಾಕ್ ಡೌನ್ ಮುಂದುವರಿಸಿದೆ.
ಆದರೆ ಕನಾ೯ಟಕ ರಾಜ್ಯದಲ್ಲಿ ಮಾತ್ರ ಎಲ್ಲಾ ರೀತಿಯ ವಿನಾಯಿತಿ ನೀಡಿರುವುದು ಮಾತ್ರ ಅಪಾಯಕಾರಿ ನಡೆ ಆಗಿದೆ.
ಇದು ಮುಂದಿನ ದಿನದಲ್ಲಿ ರಾಜ್ಯದ ಮುಖ್ಯಮ೦ತ್ರಿ ಯಡೂರಪ್ಪರವರು ಪರಿಸ್ಥಿತಿ ನಿಯ೦ತ್ರಣ ಕೈ ತಪ್ಪಿದರೆ ಹೊಣೆಗಾರರಾಗ ಬೇಕಾದರು ಆಶ್ಚಯ೯ವಿಲ್ಲ.
ಲಾಕ್ ಡೌನ್ - 4 ನೇ ಹಂತ ಯಾವುದೇ ವಿನಾಯಿತಿ ಇಲ್ಲದೆ ಮುಂದುವರಿಸಬೇಕಾಗಿತ್ತು.
ಈಗಾಗಲೇ ಪರಿಸ್ಥಿತಿ ಕೈ ಮೀರಿದ ಲಕ್ಷಣವಿದೆ ಇದು ವಿಕೋಪಕ್ಕೆ ಹೋಗದಂತೆ ತಡೆಯದೆ ಇರುವಂತ ಆಡಳಿತಾತ್ಮಕ ನಡೆ ವಿವಾದಕ್ಕೆ ಕಾರಣವಾಗಲಿದೆ.
ವಾರದ 6 ದಿನ ಬಾಗಿಲು ತೆರೆದು 7 ನೇ ದಿನ ಭಾನುವಾರ ಸಂಪೂಣ೯ ಕಪ್ಯೂ೯ ಘೋಷಣೆ ಮಾಡಿದ್ದಾದರೂ ಏಕೆ? ಕೊರಾನ ವೈರಸ್ ಗೆ ಭಾನುವಾರ ರಜಾ ಇರುತ್ತಾ? ಎಂಬ ಹಾಸ್ಯಕ್ಕೆ ಕಾರಣವಾಗಿದೆ.
ರೋಗ ನಿಯOತ್ರಣಕ್ಕೆ ಬಾರದೆ, ವ್ಯಾಕ್ಸಿನ್ ಕಂಡು ಹಿಡಿಯದೇ ಪರಿಸ್ಥಿತಿ ನಿಯ೦ತ್ರಣ ಮಾಡದೆ ಈ ರೀತಿ ಅವೈಜ್ಞಾನಿಕವಾಗಿ ದಿಡ್ಡಿ ಬಾಗಿಲು ತೆರೆಯುವುದು ಅನೇಕ ಅನಾಹುತಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ಎರಡು ತಿಂಗಳ ಮು೦ಜಾಗೃತೆ ಮಾಡಿದ್ದು ಲಾಕ್ ಡೌನ್ - 4ರಲ್ಲಿ ನೀಡಿದ ವಿನಾಯಿತಿಯಿ೦ದ ನೀರಲ್ಲಿ ಹೋಮ ಮಾಡಿದಂತೆ ಆಗಿದೆ.
ಮುಖ್ಯಮ೦ತ್ರಿಗಳು ತಕ್ಷಣ ಈ ವಿನಾಯಿತಿ ತಡೆಹಿಡಿದು ಲಾಕ್ ಡೌನ್ ಕಠಿಣ ಕ್ರಮ ಮು೦ದುವರಿಸದಿದ್ದರೆ ಮುಂದಿನ ಅನಾಹುತಗಳು ಯಾರು ನಿಯ೦ತ್ರಿಸಲು ಸಾಧ್ಯವಿಲ್ಲ.
ಬೀದಿ ವ್ಯಾಪಾರಿಗಳ ಕ್ಯಾ೦ಟೀನ್ ಗೆ ಅನುಮತಿ ನೀಡಿದ್ದಾರೆ ಆದರೆ ರೆಸ್ಟೊರೆಂಟ್ ಗೆ ಅನುಮತಿ ಇಲ್ಲ, ಸೆಲೂನ್ ಗೆ ಅನುಮತಿ ಜಿಮ್ ಗೆ ಇಲ್ಲ, ರಿಕ್ಷಾ, ಟ್ಯಾಕ್ಸಿ, ಬಸ್ ಮತ್ತು ರೈಲು ಸಂಚಾರಿಸಲು ಅನುಮತಿ ಈ ರೀತಿ ನೀಡಿದ್ದು ಕೊರಾನ ವೈರಸ್ ನಿಯOತ್ರಣಕ್ಕೆ ಮುಂದಿನ ದಿನದಲ್ಲಿ ಸವಾಲಾಗಲಿದೆ.
ರಾಜ್ಯ ಸಕಾ೯ರದ ತೀಮಾ೯ನವೇ ದುರಾದೃಷ್ಟ ಅಂದರೂ ತಪ್ಪಿಲ್ಲ.
Comments
Post a Comment