#ಲಾಕ್ ಡೌನ್ ಡೈರಿ 35, ಜನಪ್ರತಿನಿದಿಗಳು, ಅಧಿಕಾರಿಗಳು ಮತ್ತು ಪತ್ರಕತ೯ರ ನಡತೆ ಸಮಾಜಕ್ಕೆ ನೀತಿಪಾಠವಾಗಲಿ, ಕೊರಾನಾ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿ ಸಮಾಜಕ್ಕೆ ತಪ್ಪು ಸಂದೇಶ ನೀಡಿದರೆ!?
ಕೊರಾನಾ ಲಾಕ್ ಡೌನ್ ಡೈರಿ -2020
ಲೆಟರ್ ನಂಬರ್- 35
ದಿನಾ೦ಕ: 17 -ಮೇ -2020
#ಜನಪ್ರತಿನಿದಿಗಳು_ಅದಿಕಾರಿಗಳು_ಮತ್ತು_ಪತ್ರಕತ೯ರಿOದ_ದೂರಇರಿ
ಕೊರಾನಾ ವೈರಸ್ ಈಗ ದೂರದಲ್ಲಿಲ್ಲ ಮನೆ ಬಾಗಿಲಲ್ಲೇ ಹೊಂಚು ಹಾಕಿದೆ ಆದರೆ ಇನ್ನೂ ನಮ್ಮ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮತ್ತು ಪತ್ರಕತ೯ರಿಗೆ ಈ ಬಗ್ಗೆ ಹೆಚ್ಚಿನ ಕಾಳಜಿ ಇದ್ದ೦ತಿಲ್ಲ.
ಇವತ್ತು ಶಿವಮೊಗ್ಗ ಸಂಸದರಾದ ರಾಘವೇ೦ದ್ರ, ಸಾಗರದ ಶಾಸಕರಾದ ಹರತಾಳು ಹಾಲಪ್ಪ, ಜಿಲ್ಲಾಧಿಕಾರಿಗಳು ಮತ್ತು ಸಂಸದರ ಮತ್ತು ಶಾಸಕರ ಆಪ್ತರು ಸಿಗOದೂರು ಸೇತುವೆ ಕಾಮಗಾರಿ ವೀಕ್ಷಣೆ ಮಾಡಿದ ಚಿತ್ರ ವಿಡಿಯೋ ನೋಡಿದರೆ ಅಂದಾಜು ಆದೀತು ಅವರೆಲ್ಲ ಸಾಮಾಜಿಕ ಅಂತರ ಕಾಪಾಡಿಲ್ಲ ಮತ್ತು ಮಾಸ್ಕ್ ಮೂಗು ಬಾಯಿ ಮುಚ್ಚದೆ ಕುತ್ತಿಗೆಯಲ್ಲಿ ನೇತಾಡುತ್ತಿದೆ ಇದು ಜನ ಸಾಮಾನ್ಯರಿಗೆ ಏನು ತೋರಿಸುತ್ತದೆ ಎಂದರೆ ಸಕಾ೯ರ ಈಗಾಗಲೆ ತಿಳಿಸಿರುವ ಸಾಮಾಜಿಕ ಅಂತರ, ಕಡ್ಡಾಯ ಮಾಸ್ಕ್ ಮತ್ತು 144 ಸೆಕ್ಷನ್ ಜಿಲ್ಲೆಯ ಪ್ರಥಮ ಪ್ರಜೆಗಳೆ ಕಾಲು ಕಸಮಾಡಿದ್ದಾರೆ ಮುಂದೆ ನಮಗೇನು ಅಂತ.
ಸಂಸದರು, ಶಾಸಕರು ಸ್ಥಳ ವೀಕ್ಷಿಸುವ ಪ್ರದೇಶದಲ್ಲಿ ಕೆಲಸ ಮಾಡುವವರು ಹೊರ ರಾಜ್ಯದವರು ಅವರಲ್ಲಿ ಯಾರಿಗಾದರೂ ಸೋ೦ಕು ಇದ್ದರೆ ಅವರ ಉಸಿರು ಅಥವ ಅವರ ಕೆಮ್ಮು ಸೀನಿನಿ೦ದ ಅಲ್ಲಿ ರೋಗಾಣು ಇದ್ದರೆ ಇವರೆಲ್ಲ ಸುಲಭ ಬಲಿಪಶು ಸಾಧ್ಯ.
ಪ್ರದಾನ ಮಂತ್ರಿ, ಮುಖ್ಯಮ೦ತ್ರಿಗಳು ಹೇಳುವ ಮುಂಜಾಗೃತೆಯನ್ನ ಮೊದಲು ಪಾಲಿಸಬೇಕಾದ ಇವರು ಅದನ್ನ ಪಾಲಿಸದೆ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತೆ ಆಗಿದೆ.
ವೈಯಕ್ತಿಕವಾಗಿ ಜನಪ್ರತಿನಿದಿಗಳು, ಅಧಿಕಾರಿಗಳು ಮತ್ತು ಪತ್ರಕತ೯ರು ಸದಾ ಸಾವ೯ಜನಿಕ ಸಂಪಕ೯ದಲ್ಲಿರಬೇಕಾದ ಅನಿವಾಯ೯ತೆ ಇದ್ದೇ ಇದೆ ಮತ್ತು ಇವರ ಆರೋಗ್ಯ ಡೇ೦ಜರ್ ಜೋನ್ ನಲ್ಲೆ ಇದೆ ಹೀಗಿದ್ದು ಇವರುಗಳು ನಿಲ೯ಕ್ಷ ಮಾಡಿದರೆ ಹೇಗೆ.
ಜನ ಸಾಮಾನ್ಯರು ಜನಪ್ರತಿನಿದಿಗಳು, ಅಧಿಕಾರಿಗಳು ಮತ್ತು ಪತ್ರಕತ೯ರಿಂದ ಅಂತರ ಕಾಪಾಡಿಕೊಳ್ಳಬೇಕು ಇದರಿಂದ ಸೋ೦ಕಿನಿಂದ ಅವರನ್ನ ಕಾಪಾಡಿದಂತೆ ಮತ್ತು ಅವರಿಂದ ಸೋ೦ಕು ಹರಡದಂತೆ ಜನಸಾಮಾನ್ಯ ಮುಂಜಾಗ್ರತೆ ವಹಿಸಿದಂತೆ ಸಾಧ್ಯವಿದೆ.
ರಾಜಕಾರಣಿಗಳು ಶಂಕುಸ್ಥಾಪನೆ, ಪರಿಶೀಲನೆಗಳನ್ನ ಸ್ಥಳಕ್ಕೆ ಹೋಗದೆ ಬೇರೆ ಮಾಗ೯ದಲ್ಲಿ ಮಾಡುವ ಯೋಚನೆ ಮಾಡಬೇಕು, ಇವರು ಸ್ಥಳಕ್ಕೆ ಬರುವುದರಿಂದ ಸಂಬಂದಪಟ್ಟ ಅಧಿಕಾರಿ ವಗ೯, ಸ್ಥಳಿಯ ಜನಪ್ರತಿನಿಧಿಗಳು ಅವರ ಪಕ್ಷದ ಪದಾಧಿಕಾರಿಗಳು ಕಡ್ಡಾಯ ಹಾಜರಿ ಇರಲೇಬೇಕು ಇದು 144 ಸೆಕ್ಷನ್ ಉಲ್ಲoಘನೆ, ಕೋರಾನಾ ಸೋ೦ಕು ನಿಯ೦ತ್ರಣದ ಸಾಮಾಜಿಕ ಅಂತರ ಕಾಪಾಡದ ನಿಲ೯ಕ್ಷ ಮತ್ತು ಬೇಜವಾಬ್ದಾರಿ ನಡುವಳಿಕೆ ಸಮಾಜಕ್ಕೆ ನೀಡುವ ಅಪಾಯಕಾರಿ ಸಂದೇಶ ಕೂಡ ಆಗಿದೆ.
ಗಾದೆ ಮಾತಿದೆ "ಹಿರಿಯಕ್ಕನ ಚಾಳಿ ಮನೆ ಮOದಿಗೆಲ್ಲಾ ".
Comments
Post a Comment