ಕೊರಾನಾ ಲಾಕ್ ಡೌನ್ ಸಂದಭ೯ದಲ್ಲಿ ಪ್ರತಿಷ್ಟಿತ ಅಂತರಾಷ್ಟ್ರಿಯ ಖ್ಯಾತಿಯ ಮಣಿಪಾಲ್ ಆರೋಗ್ಯ ಸಮೂಹ ಸಂಸ್ಥೆ ಸ್ಥಾಪಿಸಿದ ಡಾ.ಟಿ.ಎಂ.ಎ.ಪೈ ಯವರನ್ನ ಅವರ ಹುಟ್ಟುಹಬ್ಬದಲ್ಲಿ ಒಂದು ಸ್ಮರಣೆ
#ಕೊರಾನಾ_ಲಾಕ್_ಡೌನ್_ಡೈರಿ_2020
#ಲೆಟರ್_ನOಬರ್_28
#ದಿನಾ೦ಕ_02_ಮೇ_2020
ಈ ಕೊರಾನಾ ಸಂಕಷ್ಟದಲ್ಲಿ ನೆನಪಾಗುತ್ತಾರೆ ಮಣಿಪಾಲ್ ಸಂಸ್ಥೆ ಕಟ್ಟಿದ ದೂರ ದೃಷ್ಟಿಯ ಅರೋಗ್ಯದಾತ.
ನಿನ್ನೆ 30 ಏಪ್ರಿಲ್ ಡಾ.ಟಿ.ಎಂ.ಎ ಪೈ ಅವರ ಹುಟ್ಟುಹಬ್ಬ ಅವರು 1970 ರ ದಶಕದಲ್ಲಿ ಸ್ಥಾಪಿಸಿದ ಮಣಿಪಾಲ್ ಆಸ್ಪತ್ರೆ, ಸಿಂಡಿಕೇಟ್ ಬ್ಯಾ೦ಕ್, ಉದಯವಾಣಿ ಪತ್ರಿಕೆ ಇವತ್ತು ಸಾವಿರಾರು ಕೋಟಿಯ ಪ್ರತಿಷ್ಟಿತ ಸಂಸ್ಥೆ.
ಜನ ಹೇಳುವುದು ಇದು ಕಲ್ಲಿನ ಬೋಳು ಗುಡ್ಡ ಮಣ್ಣುಪಾಲು ಅಂತಿದ್ದರು ಅಲ್ಲಿ ಈ ಡಾಕ್ಟರ್ ಆಸ್ಪತ್ರೆ ಮಾಡುತ್ತಾರೆ ಅಂದಾಗ ಎಲ್ಲರೂ ಹಾಸ್ಯ ಮಾಡಿದ್ದರಂತೆ.
ಇವತ್ತು ಇದು ಅಂತರಾಷ್ಟ್ರಿಯವಾಗಿ ಘನತೆ ಹೊಂದಿರುವ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಶಿಕ್ಷಣ ನೀಡುವ ಕೇಂದ್ರವೂ ಆಗಿದೆ.
ಕನಾ೯ಟಕ ರಾಜ್ಯದ ಮ೦ಗನ ಕಾಯಿಲೆಗೆ (kFD) ಇಲ್ಲಿ ಹೋದರೆ ಮಾತ್ರ ಬದುಕಿ ಬರುತ್ತಾರೆಂದರೆ ಇಲ್ಲಿನ ಚಿಕಿತ್ಸೆ ಬಗ್ಗೆ ಹೆಮ್ಮೆ ಪಡಬೇಕು.
ಕೊರಾನ ಕಾಯಿಲೆ ಚಿಕಿತ್ಸೆಗಾಗಿ ಇಡೀ ಆಸ್ಪತ್ರೆ ಸಕಾ೯ರಕ್ಕೆ ಬಿಟ್ಟುಕೊಟ್ಟ ಮೊದಲ ಸಂಸ್ಥೆ ಇದು.
ಈಗಲೂ ಇಲ್ಲಿ ಆಥಿ೯ಕವಾಗಿ ದುಬ೯ಲರಿಗೆ ವಿಶೇಷ ಯೋಜನೆ ಪ್ಯಾಕೇಜ್ ಮತ್ತು ಆರೋಗ್ಯ ಕಾಡ್೯ ಗಳ ಮೂಲಕ ಅತ್ಯುತ್ತಮ ಚಿಕಿತ್ಸೆ ನೀಡುತ್ತಾರೆ.
ಇಲ್ಲಿನ ಸಾಮಾನ್ಯವಾಡ್೯ಗಳು ಬೇರೆ ಆಸ್ಪತ್ರೆಗಳ ವಿಶೇಷವಾಡ್೯ ಗೆ ಸಮವಾಗಿದೆ, ಇಂದಿನ ಕಾಪೊ೯ರೇಟ್ ಆಸ್ಪತ್ರೆಗಳ ಹಣದ ಹಪಾಹಪಿ, ರಾ೦ಗ್ ಡಯಾಗ್ನೈಸ್ ಇಲ್ಲಿಲ್ಲ.
ನಮ್ಮ ತಂದೆ ನಾವು ಸಣ್ಣವರಿದ್ದಾಗ ಹೇಳುತ್ತಿದ್ದ ಘಟನೆ ನೆನಪಾಗುತ್ತೆ ನಮ್ಮ ಊರಿನ ಹಿರಿಯರಾದ ಪುಟ್ಟ ಶೇರೆಗಾರರ ಆರೋಗ್ಯ ಹದಗೆಟ್ಟಾಗ ಅವರನ್ನ ನಮ್ಮ ತಂದೆ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಿದ್ದರಂತೆ ಆಗ ದಿನಾ ಸಂಜೆ ವಯೋವೃದ್ಧರಾದ ಡಾ.ಟಿ.ಎಂ.ಎ.ಪೈ ಆಸ್ಪತ್ರೆಗೆ ಸುಮ್ಮನೆ ಒಂದು ಸುತ್ತು ಬರುತ್ತಿದ್ದರಂತೆ, ನಮ್ಮ ತಂದೆ ಅವರಿಗೆ ವಂದಿಸಿದಾಗ ಅವರು ಎಲ್ಲಿ೦ದ ಬ೦ದಿದ್ದು ಇತ್ಯಾದಿ ವಿಚಾರಿಸಿದ್ದರOತೆ ಆಗ ನಮ್ಮ ತಂದೆ ಇಷ್ಟು ಒಳ್ಳೆಯ ಚಿಕಿತ್ಸೆಯ ಆಸ್ಪತ್ರೆ ತಾವು ನಿಮಿ೯ಸಿದ್ದರಿಂದ ದೂರದ ನಮಗೆಲ್ಲರಿಗೂ ಅನುಕೂಲ ಆಯಿತು ಅಂದಾಗ ಅವರು ಒಂದು ಕಥೆ ಹೇಳಿದರOತೆ...
ಒಬ್ಬ ಒಂದು ದೊಡ್ಡ ಮರವನ್ನು ಹತ್ತಿ ಅಲ್ಲಿ೦ದ ಹಾರುತ್ತೇನೆ ಅಂದಾಗ ಅಲ್ಲಿದ್ದವರೆಲ್ಲ ಹುಚ್ಚಾ ಬಿದ್ದು ಸಾಯುತ್ತೀಯ, ಕೈಕಾಲು ಮುರುದು ಕೊಳ್ಳುತ್ತೀಯ ಅಂತೆಲ್ಲ ಬೈಯ್ದರಂತೆ, ಆತ ಯಾರ ಮಾತು ಕೇಳದೆ ಆ ಮರದ ತುದಿಯಿ೦ದ ಹಾರಿ ಕುಪ್ಪಳಿಸಿ ಎದ್ದಾಗ ಅವನಿಗೆ ಹಾರದಂತೆ ಭಯ ಹುಟ್ಟಿಸಿದವರೆ ಓಡಿಬಂದು ಅವನಿಗೆ ಅಬಿನಂದಿಸಿ ಶೂರ ದೀರಾ ಅ೦ದರ೦ತೆ ಹಾಗೆ ಆಯಿತು ನನ್ನ ಜೀವನ ಅದರ ಭಾಗವೇ ಈ ಆಸ್ಪತ್ರೆ ಅಂದರಂತೆ.
ಎಂತಹ ಜೀವನದ ಪಾಠ ಈ ಕಥೆಯಲ್ಲಿದೆ ಮತ್ತು ಅಂತಹ ಸಾದಕರ ಬಾಯಲ್ಲಿ ಬಂದದ್ದರ ಅಥ೯ ಕೂಡ ಸಣ್ಣದಲ್ಲ.
ಈಗಲೂ ಇಂತಹ ಕನಸುಗಾರರ ಸಲಹೆ ಸಹಕಾರದಲ್ಲಿ ಸಕಾ೯ರ ಜನರಿಗೆ ಆರೋಗ್ಯ ನೀಡುವ ಯೋಜನೆಗಳನ್ನ ತಂದರೆ ಎಂತಹ ಆರೋಗ್ಯ ತುತು೯ ಪರಿಸ್ಥಿತಿ ಸವಾಲು ಬಂದರೂ ಎದುರಿಸಲು ಸಾಧ್ಯವಿದೆ.
ಡಾ.ಟಿ.ಎಂ.ಎ.ಪೈ ಸದಾ ಸ್ಮರಣಿಯರು ಅವರು ಕನಾ೯ಟಕದವರು ಎಂಬುದು ನಮಗೆಲ್ಲ ಹೆಮ್ಮೆಯಲ್ಲವೆ?
ಡಾ. ಟಿಎಂಎ ಪೈ ಎಲ್ಲಾ ಕಾಲಕ್ಕೂ ಪ್ರಾತಃ ಸ್ಮರಣೀಯರು.
ReplyDelete