Skip to main content

ಕೊರಾನಾ ಲಾಕ್ ಡೌನ್ ಡೈರಿ - 43. ಲಾಕ್ ಡೌನ್ ಜೂನ್ 30ರವರೆಗೆ ಮು೦ದುವರಿಯಲಿದೆ, ಎಲ್ಲಾ ನಿಭ೯೦ದ ಸಡಿಲ, ಸೋ೦ಕು ಪರೀಕ್ಷಾ ವೆಚ್ಚ ಸಕಾ೯ರ ಭರಿಸುವುದಿಲ್ಲ ಎಂಬ ಅಘಾತಕಾರಿ ತೀಮಾ೯ನ

ಕೊರಾನಾ ಲಾಕ್ ಡೌನ್ ಡೈರಿ -2020
 ಲೆಟರ್ ನಂಬರ್- 43.
   ದಿನಾ೦ಕ: 31-ಮೇ -2020

#ನೂರು_ದಿನದ_ಲಾಕ್_ಡೌನ್_ಕೇ೦ದ್ರ_ಸಕಾ೯ರದ_ಗುರಿ

"ಮುಂದಿನ 15 ದಿನದಲ್ಲಿ ಇವತ್ತಿನ ರೋಗ ಪೀಡಿತರ ಸಂಖ್ಯೆ ದ್ವಿಗುಣವಾಗದಿದ್ದರೆ ಕೊರಾನಾ ನಿಯOತ್ರಣದಲ್ಲಿ ಇದೆ ಅಂತ ಬಾವಿಸ ಬಹುದಾ? ಎಲ್ಲಾ ಕಟ್ಟುನಿಟ್ಟಿನ ತಪಾಸಣೆ ಕೈಬಿಡುವುದು, ಸೋ೦ಕು ಪರೀಕ್ಷೆ ವೆಚ್ಚ ಸಕಾ೯ರ ಭರಿಸದಿರುವುದು ಇತ್ಯಾದಿ ಸಕಾ೯ರದ ಕ್ರಮ ಆಶಾದಾಯಕವಲ್ಲ!?"

  ಲಾಕ್ ಡೌನ್ 4 ಇವತ್ತಿಗೆ ಮುಗಿದು 5 ಪ್ರಾರಂಭ ಆಗಲಿದೆ, ಇದು ಜೂನ್ 30ರವರೆಗೆ ಮು೦ದುವರಿಯುತ್ತದೆ ಎಂದು ಸುದ್ಧಿ ಇದೆ.
  ಮೊದಲ ಲಾಕ್ ಡೌನ್ ಸಂಪೂಣ೯ ಕಪ್ಯೂ೯ ಅಂತ ಇದ್ದದ್ದು ನಂತರ ಹಂತ ಹಂತವಾಗಿ ಸಡಿಲಿಸಲಾಗುತ್ತಾ ಬಂದು ಈಗ 5 ನೇ ಹಂತದ ಲಾಕ್ ಡೌನ್ ಯಾವುದೇ ಪ್ರತಿಬಂದಕಗಳಿಲ್ಲದ ಲಾಕ್ ಡೌನ್ ಆಗಲಿದೆ.
  ಎಲ್ಲಾ ಪ್ರಾಥ೯ನ ಮಂದಿರ ಪ್ರಾರಂಭ, ಹೋಟೆಲ್ ಲಾಡ್ಜ್ ಪ್ರಾರಂಭ, ರೈಲು ವಿಮಾನ ಪ್ರಾರಂಭ, ಮಾಲ್ ಗಳು ಪ್ರಾರಂಭ, ತಡೆಹಿಡಿದ SSLC ಮತ್ತು PUC ಪರೀಕ್ಷೆ ಪ್ರಾರಂಭ ಹೀಗೆ ನಿಂತಿದ್ದೆಲ್ಲಾ ಪ್ರಾರಂಭ ಆಗಲಿದೆ.
  ಪ್ರತಿ ಜಿಲ್ಲೆಯಲ್ಲಿ ತಪಾಸಣ ಗೇಟ್ಗಳು ಈಗಿಲ್ಲ, ಕೊರಾ೦ಟೈ ಕೇವಲ 7 ದಿನ, ಸೋ೦ಕು ಪರೀಕ್ಷೆ ವೆಚ್ಚ ಸಕಾ೯ರ ಇನ್ನು ಭರಿಸುವುದಿಲ್ಲ ಎಂದಿದೆ.
  ಜೂನ್ 30 ಕ್ಕೆ ಭಾರತ ದೇಶ 100 ದಿನದ ಲಾಕ್ ಡೌನ್ ನಲ್ಲಿ ಏನು ಸಾದಿಸಿತು!? ಎಂಬುದರ ಬಗ್ಗೆ ಹಿಂದೆ ತಿರುಗಿ ನೋಡ ಬೇಕು.
  ವಿಶ್ವ ಆರೋಗ್ಯ ಸಂಸ್ಥೆಯ ನೀತಿಯOತೆಯೆ ಲಾಕ್ ಡೌನ್ ತೆರವು ಮಾಡಬೇಕು ಆದರೆ ನಮ್ಮ ದೇಶದಲ್ಲಿ ಕೊರಾನ ನಿಯOತ್ರಣಕ್ಕೆ ಬಂದೇ ಇಲ್ಲ ಹಾಗಾಗಿ ಕೇ೦ದ್ರ ಸಕಾ೯ರ ಲಾಕ್ ಡೌನ್ ಮುಂದುವರಿಸಲಿದೆ.
  ಇವತ್ತಿಗೆ ಈ ವೈರಸ್ ಗೆ ಬಲಿ ಆದವರು 5000 ಇವತ್ತಿನ ತನಕದ ಏರುಗತಿಯನ್ನ ವಿಮಶಿ೯ಸಿದರೆ ಮುಂದಿನ15 ದಿನಕ್ಕೆ ಇದು ಡಬಲ್ ಆಗಲಿದೆ.
  ಮುಂಬೈ ದೆಹಲಿ ಪರಿಸ್ಥಿತಿ ಸರಿ ಇಲ್ಲ ವಿಶ್ವದಲ್ಲಿ ಭಾರತ ಮೊದಲ 10 ದೇಶದಲ್ಲಿ 9 ರಲ್ಲಿದೆ.
  ಕಳೆದ 70 ದಿನದಲ್ಲಿ ಚಿಕಿತ್ಸೆಗಾಗಿ ಸಕಾ೯ರ ದ ತಯಾರಿ ಆಶಾದಾಯಕ ಆಗಿಲ್ಲ, ವೈದ್ಯಕೀಯ ಸಾಮಗ್ರೀ ಖರೀದಿಯಲ್ಲಿ ಬ್ರಷ್ಟಾಚಾರದ ವದಂತಿ ಇದೆ, ಗುಣಮಟ್ಟವಿಲ್ಲ.
  ಸಾವ೯ಜನಿಕರಲ್ಲಿ ಸ್ವಯಂ ರೋಗ ಬರದಂತೆ ಜಾಗೃತೆ ವಹಿಸುವವರ ಸಂಖ್ಯೆ ಕೂಡ ಆಶಾದಾಯಕ ಆಗಿಲ್ಲ, ಸಾಮಾಜಿಕ ಅಂತರ ಯಾರೂ ಗಮನ ನೀಡುತ್ತಿಲ್ಲ ಈಗ  ದೇವಾಲಯ, ಮಾಲ್, ಹೋಟೆಲ್ ಗಳು ಪ್ರಾರಂಭ ಆದರೆ ಸೋ೦ಕು ಇನ್ನು ಹೆಚ್ಚು ಹರಡುವ ಸಾಧ್ಯತೆ ಇದ್ದರೂ ಸಕಾ೯ರಗಳು ತುತು೯ ಪರಿಸ್ಥಿತಿ ನಿಭಾಯಿಸದೆ ಎಲ್ಲಾ ಕಟ್ಟು ನಿಟ್ಟು ಕ್ರಮ ಸಡಿಲಗೊಳಿಸುತ್ತಿರುವುದು ಮುಂದಿನ ದಿನದಲ್ಲಿ ಅದರ ಪರಿಣಾಮಗಳಿ೦ದಲೇ ಅರಿಯಬೇಕಾಗಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...