Skip to main content

ಲಾಕ್ ಡೌನ್ ಡೈರಿ 2020,ದಿನಾ0ಕ 3 -ಮೆ-2020, ಲೆಟರ್ ನಂಬರ್ 29. ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತ, ತುಂಗಾ ನದಿ ಪಾತ್ರದ ಬತ್ತದ ಬೆಳೆಗಳು, ಸಹ್ಯಾದ್ರಿ ತಪ್ಪಲಿನ ನಿತ್ಯ ಹರಿದ್ವಣ೯ ಕಾಡಿನ ತೇಗ ಗಂದ... ಹೀಗೆ ನಮ್ಮ ಜಿಲ್ಲೆಯು ಕವಿ ನಿಸಾರ್ ರ ಕಣ್ಣಿನಲ್ಲಿ ಸುಂದರ ಕವನವಾಗಿದೆ, ಇವತ್ತು ಇಹಲೋಕ ತ್ಯಜಿಸಿದ ಅವರಿಗೆ ಶಿವಮೊಗ್ಗ ಜಿಲ್ಲೆಯ ಜನ ಮನದ ಶ್ರದ್ದಾ೦ಜಲಿಗಳು.

           ಶ್ರದ್ದಾ೦ಜಲಿಗಳು 
 ನಿತ್ಯೋತ್ಸವ ಖ್ಯಾತಿಯ ಕವಿ ನಿಸಾರ್ 
              ಅಹಮದರಿಗೆ
" ಜೋಗದ ಸಿರಿ ಬೆಳಕಿನಲ್ಲಿ .. 
  ತುಂಗೆಯ ತೆನೆ ಬಳುಕಿನಲ್ಲಿ...
  ನಿತ್ಯ ಹರಿಧ್ವಣ೯ ವನದ ತೇಗ ಗಂದ   ತರುಗಳಲ್ಲಿ...
  ನಿತ್ಯೋತ್ಸವ ತಾಯೆ ನಿನಗೆ ನಿತ್ಯೋತ್ಸವ "
 ಎಂದು ಪಶ್ಚಿಮ ಘಟ್ಟದ ತೊಟ್ಟಿಲಾದ ಸಹ್ಯಾದ್ರಿ ತಪ್ಪಲು ಶಿವಮೊಗ್ಗದಲ್ಲೆ ಇದ್ದಾಗ ಅವರು ಬರೆದ ಈ ಕವಿತೆಯಲ್ಲಿ  ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತ, ತುಂಗಾ ನದಿಗಳ, ಇಲ್ಲಿನ ನಿತ್ಯ ಹರಿದ್ವಣ೯ ಕಾಡಿನ ತೇಗ ಗಂದಗಳನ್ನ ಸು೦ದರವಾಗಿ ವಣಿ೯ಸಿದ್ದಾರೆ ಇವತ್ತಿಗೂ ಈ ಹಾಡು ಕನ್ನಡಿಗರನ್ನ ರೋಮಾ೦ಚನ ಉಂಟು ಮಾಡುತ್ತದೆ.
  ಇವತ್ತು ಅವರು ಇಹಲೋಕ ತ್ಯಜಿಸಿದ್ದಾರೆ ಅವರಿಗೆ ಶಿವಮೊಗ್ಗ ಜಿಲ್ಲೆಯ ಸಮಸ್ತ ಜನರ ಅಶ್ರುತಪ೯ಣಗಳು.

Comments