Blog number 2203. ಪುರುಶೊತ್ತಮ ಬಿಳಿಮಲೆ ಅವರ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೇಡ ಎಂಬ ಹೇಳಿಕೆ ಸರ್ಕಾರದಿಂದ ಜಾರಿ ಸಾಧ್ಯವೇ?...
#ಪುರುಶೋತ್ತಮಬಿಳಿಮಲೆ #ಕರ್ನಾಟಕ_ಸರ್ಕಾರದ #ಕನ್ನಡ_ಅಭಿವೃದ್ಧಿ_ಪ್ರಾಧಿಕಾರದ_ಅಧ್ಯಕ್ಷರು #ಅವರ_ಹೇಳಿಕೆ_ಒತ್ತಾಯ #ಪ್ರಾಥಮಿಕ_ಶಾಲೆಗಳಲ್ಲಿ_ಆಂಗ್ಲ_ಮಾಧ್ಯಮ_ಬೇಡ #ಇದರ_ಸಾದಕ_ಭಾದಕ_ಏನು? ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅವರ ಹೇಳಿಕೆ ಸ್ವಾಗತಾರ್ಹ ಆದರೂ ಇದು ಸಾಧ್ಯವಾ? ಕರ್ನಾಟಕದಲ್ಲಿನ ಸರ್ಕಾರಿ ಶಾಲೆಗೆ ಮಾತ್ರವಾ? ಅಥವ ರಾಜ್ಯದ ಎಲ್ಲಾ ಖಾಸಾಗಿ ಮತ್ತು ಸೆಂಟ್ರಲ್ ಸಿಲಬಸ್ ಶಾಲೆಗಳಿಗೂ ಅನ್ವಯವಾ? ಸರ್ವೋಚ್ಚ ನಾಯಾಲಯದ ತೀರ್ಪುಗಳು ಏನಿದೆ? ಎಂಬ ಅನೇಕ ರೀತಿ ಚರ್ಚಿಗಳು ಸಾಮಾಜಿಕ ಜಾಲತಾಣದಲ್ಲಿ ಗಮನಿಸಬಹುದು. ಪ್ರಾಥಮಿಕ ಶಿಕ್ಷಣ 1 ರಿಂದ 4 ರವರೆಗೆ ಕನ್ನಡ ಮಾಧ್ಯಮದಲ್ಲೇ ಕಲಿಸಿ 5 ರಿಂದ 10 ನೇ ತರಗತಿ ತನಕ ಇಂಗ್ಲಿಷ್ ಮಾಧ್ಯಮದ ಅನುಮತಿ ಪಡೆದ ಶಾಲೆಗಳು ಈ ಆದೇಶ ಪಾಲಿಸುವುದೇ ಇಲ್ಲ ರಾಜಾರೋಸ್ತಾಗಿ ಇಂಗ್ಲಿಷ್ ಮಾಧ್ಯಮ ಶಾಲೆ ಅಂತ ಬೋರ್ಡ್ ಹಾಕಿ ಕೊಂಡು ಇಂಗ್ಲೀಷ್ ನಲ್ಲೇ ಪಾಠ ಮಾಡುತ್ತಾರೆ ಕನ್ನಡ ಮಾತಾಡಿದರೆ ದಂಡ ಇದೆಲ್ಲ ಸಣ್ಣ ಸಣ್ಣ ಹಳ್ಳಿಗಳಲ್ಲಿ ಕಾನ್ವೆಂಟ್ ಶಿಕ್ಷಣದ ಪ್ಯಾಶನ್ ಶುರುವಾಗಿದೆ ಇದಕ್ಕೆ ಪ್ರತಿಫಲವಾಗಿ ಶಿಕ್ಷಣ ಇಲಾಖೆಗೆ ನಿಗದಿ ಪಡಿಸಿದ ಲಂಚ ತಲುಪಿಸ ಬೇಕು. ನಾನು ನನ್ನ ಮಕ್ಕಳನ್ನ ಸರ್ಕಾರಿ ಅಂಗನವಾಡಿಯಿಂದ ದ್ವಿತೀಯ puc ತನಕ ನಮ್ಮ ಊರಿನ ಸರ್ಕಾರಿ ಕನ್ನಡ ಮಾಧ್ಯಮದಲ್ಲೇ ವ್ಯಾಸಂಗ ಮಾಡಿಸಿದೆ ನನಗೆ ಇದಕ್ಕೆಲ್ಲ ಪ್ರೇರಣೆ ಆದ ಸಾಹಿತಿಗಳು ಕನ್ನಡ ಹೋ...